ಸೂಚ್ಯಂಕಗಳು ಜಸ್ಟ್ ನಂಬರ್‌ಗಳು. ಮ್ಯೂಚುವಲ್ ಫಂಡ್ ಅನ್ನು ನಾವು ಏಕೆ ಖರೀದಿಸಿದ್ದೇವೆ? ಎಂಬುದನ್ನು ಮನವರಿಕೆ ಮಾಡಿಕೊಳ್ಳುವುದು ಮುಖ್ಯ. ಅಲ್ಪಕಾಲೀನ ಹೂಡಿಕೆಗೆ ಇನ್ವೆಸ್ಟ್ ಮಾಡಿದ್ದೇವೆಯೋ, (Money Guide) ದೀರ್ಘಕಾಲೀನ ಹೂಡಿಕೆ ಮಾಡುತ್ತಿದ್ದೇವೆಯೋ ಎಂಬುದು ಮುಖ್ಯ. ಮಾರುಕಟ್ಟೆಯಲ್ಲಿ ಯಾವುದು ಗರಿಷ್ಠ ಎತ್ತರ ಎಂದು ಹೇಳಿಕೊಳ್ಳಲಾಗದು. ಮಾರುಕಟ್ಟೆ ಸೂಚ್ಯಂಕ ಏರಿಕೆಯಾದಾಗ ಎಷ್ಟು ಏರಬಹುದು ಹಾಗೂ ಸೂಚ್ಯಂಕ ಕೆಳಗಿಳಿದಾಗ ಎಷ್ಟು ಕುಸಿಯಬಹುದು ಎಂದು ಹೂಡಿಕೆದಾರರು ಕೇಳುತ್ತಾರೆ.
ಆದರೆ ವಾಸ್ತವವಾಗಿ ನಿಮ್ಮ ಹೂಡಿಕೆಗೆ ಗುರಿ ಇರಬೇಕು. ಮುಂದಿನ ಹತ್ತು ವರ್ಷಗಳ ಬಳಿಕ ಮಾರುಕಟ್ಟೆ ಹೇಗಿರಬಹುದು, ನಮ್ಮ ಹೂಡಿಕೆ ಏನಾಗಬಹುದು ಎಂಬುದನ್ನು ಯೋಚಿಸಬೇಕು. ಮಾರುಕಟ್ಟೆಯಲ್ಲಿ ಪ್ರತಿಯೊಂದು ಎತ್ತರವೂ ಕಾಯಂ ಆಗಿರುವುದಿಲ್ಲ. ಅದು ಮತ್ತಷ್ಟು ಮೇಲೆ ಹೋಗುತ್ತಿರುತ್ತದೆ ಎನ್ನುತ್ತಾರೆ ನಾಲೆಡ್ಜ್ ಬೆಲ್ ಕಂಪನಿಯ ಸಿಇಒ ವಿನೋದ್ ತಂತ್ರಿ. ವಿಸ್ತಾರ ಮನಿ ಪ್ಲಸ್ ವಿಡಿಯೊದ ಲಿಂಕ್ ಈ ಕೆಳಗಿದೆ.
ನೀವು ನಿಫ್ಟಿ 50 ವೀಕ್ಲಿ ಚಾರ್ಟ್ ಅನ್ನು ನೋಡಿದರೆ, (ಇನ್ವೆಸ್ಟಿಂಗ್ ಡಾಟ್ ಕಾಮ್) ಷೇರು ಮಾರುಕಟ್ಟೆಯ ಏರಿಳಿತಗಳನ್ನು ಗಮನಿಸಬಹುದು. ಈ ಏರಿಳಿತಗಳನ್ನು ಗಮನಿಸಿದರೆ ಒಟ್ಟಾರೆಯಾಗಿ ಮಾರುಕಟ್ಟೆ ಏರುಗತಿಯಲ್ಲಿ ಇರುವುದನ್ನು ಗಮನಿಸಬಹುದು. ಅಲ್ಪಾವಧಿಯನ್ನು ಗಮನಿಸಿದರೆ ಮಾರುಕಟ್ಟೆಯಲ್ಲಿ ಏರಿಕೆ-ಇಳಿಕೆ ಎರಡೂ ಕಾಣಬಹುದು. ಆದರೆ ದೀರ್ಘಕಾಲೀನ ಅವಧಿಯ ಚಾರ್ಟ್ ನೋಡಿದರೆ ಸೂಚ್ಯಂಕ ಏರಿರುವುದನ್ನು ಗಮನಿಸಬಹುದು. ಹೀಗಾಗಿ ಮಾರುಕಟ್ಟೆ ಕುಸಿತವಾದಾಗ ಹೆಚ್ಚುವರಿ ಫಂಡ್ ಅನ್ನು ಮ್ಯೂಚುವಲ್ ಫಂಡ್ ಹೂಡಿಕೆಗೆ ಬಳಸುವುದರಿಂದ ಲಾಭವಾಗುತ್ತದೆ. ಇದರದಿಂದ ಇಪ್ಪತ್ತೈದು ವರ್ಷಕ್ಕೆ ಕೋಟಿ ಗಳಿಸುವುದನ್ನು 15 ವರ್ಷಕ್ಕೆ ಗಳಿಸಬಹುದು.