Site icon Vistara News

Money Guide : ನಿವೃತ್ತಿಯ ಹಣಕಾಸು ಭದ್ರತೆಗೆ ಪ್ಲಾನ್‌ ಮಾಡೋದು ಹೇಗೆ?

Money

cash

ನಿವೃತ್ತಿಯ ಕಾಲಕ್ಕೆ ನಿರಾಳವಾಗಿ ಇರಬೇಕಿದ್ದರೆ ಆದಷ್ಟು ಬೇಗನೇ ಹೂಡಿಕೆಯನ್ನು ಆರಂಭಿಸುವುದು ಉತ್ತಮ. ಆದರೆ ಅದು ಹೇಗೆ ಎಂಬ ಪ್ರಶ್ನೆಯೂ ನಿಮ್ಮಲ್ಲಿ ಇರಬಹುದು. ಇದಕ್ಕಾಗಿ ತ್ರೀ ಬಕೆಟ್‌ ರಿಟೈರ್‌ಮೆಂಟ್‌ ಪ್ಲಾನಿಂಗ್‌ ಸ್ಟ್ರಾಟಜಿಯನ್ನು (Three bucket retirement planning strategy ) ಅನುಸರಿಸಬಹುದು. ಮಾರುಕಟ್ಟೆಯಲ್ಲಾಗುವ ಬದಲಾವಣೆಗಳಿಂದ ಉಳಿತಾಯದ ಹಣವನ್ನು ಉಳಿಸಿ ಬೆಳೆಸಲು ಇದು ಸಹಾಯಕವಾಗುತ್ತದೆ. ನಿವೃತ್ತಿಯ ಭಿನ್ನ ಹಂತಗಳಲ್ಲಿ ಹಣಕಾಸು ಅಗತ್ಯಗಳಿಗೆ ಇದು ಸಹಕಾರಿಯಾಗುತ್ತದೆ. ಹಾಗಾದರೆ ಬಕೆಟ್‌ ಸ್ಟ್ರಾಟಜಿ ಎಂದರೇನು ಎಂಬುದನ್ನು ನೋಡೋಣ.

  1. 1. ಇದು ನಿಮ್ಮ ನಿವೃತ್ತಿಯ ಬಂಡವಾಳ ನಿಧಿಯನ್ನು ಮೂರು ವಿಧವಾಗಿ ವಿಭಜಿಸುತ್ತದೆ.

2. ತಕ್ಷಣದ ಅಗತ್ಯಗಳು, ಮಧ್ಯಂತರ ಅವಧಿ ಮತ್ತು ದೀರ್ಘಕಾಲೀನ ಅವಧಿಗೆ ಹಣಕಾಸು ವ್ಯವಸ್ಥೆಯನ್ನು ಇದು ಒಳಗೊಂಡಿದೆ.

3. ಇಮೀಡಿಯೆಟ್‌ ಬಕೆಟ್‌ನಲ್ಲಿ ಹೆಚ್ಚು ಲಿಕ್ವಿಡಿಟಿ ಇರುವ ಅಸೆಟ್‌ನಲ್ಲಿ ಹಣದ ಹೂಡಿಕೆ ಮಾಡಬೇಕು. ಮೀಡಿಯಂ ಬಕೆಟ್‌ನಲ್ಲಿ ಆದಾಯ ತರುವ ಅಸೆಟ್‌ಗಳಲ್ಲಿ ಹೂಡಿಕೆ ಮಾಡಬೇಕು. ಲಾಂಗ್‌ ಟರ್ಮ್‌ ಬಕೆಟ್‌ನಲ್ಲಿ ಗ್ರೋತ್‌ ಅಸೆಟ್‌ಗಲ್ಲಿ ಹಣ ಹೂಡಿಕೆ ಮಾಡಬೇಕು.

4. ಮಾರುಕಟ್ಟೆಯ ಏರಿಳಿತಗಳನ್ನು ಹಾಗೂ ಅದರ ನಡುವೆಯೂ ವಿತ್‌ ಡ್ರಾವಲ್‌ಗಳನ್ನು ನಿರ್ವಹಿಸಲು ಅನುಕೂಲಕರ.

5. ಹೂಡಿಕೆಯ ಹಂಚಿಕೆ ಮತ್ತು ಸ್ಟ್ರಾಟಜಿಗಳು ಇಲ್ಲಿ ಮಹತ್ವ ಪಡೆಯುತ್ತದೆ.

ನಿವೃತ್ತಿಯ ಪ್ಲಾನಿಂಗ್‌ನಲ್ಲಿ ನಿಮಗೆ ಯಾವಾಗ ಹಣದ ಅಗತ್ಯ ಇದೆ ಎಂಬುದನ್ನು ಆಧರಿಸಿ ಹೂಡಿಕೆಯ ಬಕೆಟ್‌ಗಳನ್ನು ಅಲ್ಪಾವಧಿ, ಮಧ್ಯಮ ಮತ್ತು ಲಾಂಗ್‌ ಟರ್ಮ್‌ ಎಂದು ವಿಭಜಿಸಲಾಗುತ್ತದೆ.

ಮೊದಲ ಬಕೆಟ್‌ನಲ್ಲಿ ಪ್ರತಿ ದಿನದ ಖರ್ಚು ವೆಚ್ಚಗಳು, ದಿಢೀರ್‌ ವೈದ್ಯಕೀಯ ಖರ್ಚುಗಳಿಗೆ ಹಣ ಇಡಬೇಕು. ಮುಖ್ಯವಾಗಿ ನಿವೃತ್ತಿಯ ಮೊದಲ 3-4 ವರ್ಷಗಳಲ್ಲಿ ಇದು ಅಗತ್ಯ. ಈ ಬಕೆಟ್‌ನಲ್ಲಿರುವ ಹಣವನ್ನು ಸುಲಭವಾಗಿ ನಗದು ರೂಪಕ್ಕೆ ಪರಿವರ್ತಿಸುವಂತಿರಬೇಕು. ಉಳಿತಾಯ ಖಾತೆ, ಫಿಕ್ಸೆಡ್‌ ಡೆಪಾಸಿಟ್‌, ಲಿಕ್ವಿಡ್‌ ಫಂಡ್‌ಗಳಿಗೆ ಪರಿವರ್ತಿಸಲೂ ಆಗುವಂತಿರಬೇಕು. ಇದರಿಂದ ಮಾರುಕಟ್ಟೆಯ ಏರಿಳಿತಗಳನ್ನು ನಿರ್ವಹಿಸುವುದು ಸುಲಭವಾಗುತ್ತದೆ. ನಿವೃತ್ತರಿಗೆ ನಿವೃತ್ತಿಯ ನಾನಾ ಹಂತಗಳಲ್ಲಿ ಅವರ ಹಣಕಾಸು ಅಗತ್ಯಗಳನ್ನು ನಿರ್ವಹಿಸಲು ಸುಲಭವಾಗುತ್ತದೆ.

ಎರಡನೇ ಬಕೆಟ್‌ನಲ್ಲಿ ಪ್ರವಾಸ, ಹವ್ಯಾಸಗಳು ಇತ್ಯಾದಿಗಳಿಗೆ ಸಾಕಾಗುವಂತೆ ಹೂಡಿಕೆ ಇರಬೇಕು. ಕನಿಷ್ಠ 5-10 ವರ್ಷಗಳ ವೆಚ್ಚವನ್ನು ದೃಷ್ಟಿಯಲ್ಲಿ ಇಟ್ಟುಕೊಂಡಿರಬೇಕು. ಮೂರನೇ ಬಕೆಟ್‌ನಲ್ಲಿ ಲಾಂಗ್ ಟರ್ಮ್‌ ಹೂಡಿಕೆಗೆ ಆದ್ಯತೆ ನೀಡಬೇಕು. ಇದಕ್ಕಾಗಿ ಈಕ್ವಿಟಿಗಳಲ್ಲಿ ಹೂಡಿಕೆ ಸೂಕ್ತ. ಬ್ಲೂಚಿಪ್‌ ಮ್ಯೂಚುವಲ್‌ ಫಂಡ್‌ಗಳು, ಮಲ್ಟಿ ಅಸೆಟ್‌ ಫಂಡ್‌ಗಳು ಕೂಡ ಉತ್ತಮ ಆಯ್ಕೆಯಾಗಿವೆ.

Exit mobile version