ಬಹಳ ಜನಕ್ಕೆ ಒಂದು ಆಲೋಚನೆ ಇರುತ್ತದೆ. ಜಾಸ್ತಿ ಬಡ್ಡಿ ಆದಾಯ ಇರದಿದ್ದರೂ ಪರ್ವಾಗಿಲ್ಲ, ಹೂಡಿಕೆ ಅತ್ಯಂತ ಸುರಕ್ಷಿತವಾಗಿ ಇರಬೇಕು. ಹಾಗೂ ಪ್ರತಿ ತಿಂಗಳು ನಿಶ್ಚಿತ ಆದಾಯ ಇದ್ದರೆ ಸಾಕು. (Money Guide) ನಿವೃತ್ತಿಯ ಜೀವನ ನಡೆಸುವವರು, ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು, ಗೃಹಿಣಿಯರು, ನಿರುದ್ಯೋಗಿಗಳು ಈ ಕೇಂದ್ರ ಸರ್ಕಾರಿ ಬೆಂಬಲಿತ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದಕ್ಕೆ ಸರ್ಕಾರವೇ ಗ್ಯಾರಂಟಿ ನೀಡುತ್ತದೆ. ಇದರ ಹೆಸರು ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ. (Post office income scheme)
ವಿಸ್ತಾರ ನ್ಯೂಸ್ ಎಕ್ಸಿಕ್ಯುಟಿವ್ ಎಡಿಟರ್ ಶರತ್ ಎಂ.ಎಸ್ ಅವರು ಪೋಸ್ಟ್ ಆಫೀಸ್ ಮಂತ್ಲಿ ಇನ್‌ಕಮ್ ಸ್ಕೀಮ್ (POMIS) ಬಗ್ಗೆ ವಿಸ್ತಾರ ಮನಿ ಪ್ಲಸ್ ಚಾನೆಲ್‌ನಲ್ಲಿ ವಿವರವಾಗಿ ತಿಳಿಸಿದ್ದು, ಲಕ್ಷಾಂತರ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಯೋಜನೆಯಲ್ಲಿ ಪ್ರತಿ ತಿಂಗಳು ನಿಶ್ಚಿತ ಆದಾಯ ಪಡೆಯಬಹುದು. ಇದರ ಈಗಿನ ಬಡ್ಡಿ ದರ 7.40%. ಕನಿಷ್ಠ ಹೂಡಿಕೆ 1,000 ರೂ. ಗರಿಷ್ಠ ಹೂಡಿಕೆ ಒಬ್ಬರಿಗೆ 9 ಲಕ್ಷ ರೂ. ಇಬ್ಬರಿಗೆ 15 ಲಕ್ಷ ರೂ. ಹೂಡಿಕೆಯ ಅವಧಿ ಐದು ವರ್ಷಗಳು. ತೆರಿಗೆ ಅನುಕೂಲ ಇಲ್ಲ. ನಾಮಿನಿಗೆ ಅವಕಾಶ ಇದೆ. ಉಳಿತಾಯ ಖಾತೆಗೆ ಹಣ ವರ್ಗಾವಣೆ ಆಗುತ್ತದೆ. ಪ್ರತಿ ತಿಂಗಳ ಕೊನೆಗೆ ಬಡ್ಡಿ ಜಮೆಯಾಗುತ್ತದೆ. ಐದು ವರ್ಷಗಳ ಬಳಿಕ ಮರು ಹೂಡಿಕೆ ಮಾಡಬಹುದು. 15 ಲಕ್ಷ ರೂ. ಹೂಡಿಕೆ ಮಾಡಿದರೆ ತಿಂಗಳಿಗೆ 9,250 ರೂ. ಬಡ್ಡಿ ಆದಾಯ ಸಿಗುತ್ತದೆ.