ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕ್‌ಗಳು ಬಿಸಿನೆಸ್ ಸಾಲ ನೀಡುತ್ತವೆ. ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲೂ (SBI) ನೀವು ಬಿಸಿನೆಸ್ ಲೋನ್ ಗಳಿಸಿ (Money Guide) ನಿಮ್ಮದೇ ಆದ ವ್ಯಾಪಾರವನ್ನು ಆರಂಭಿಸಬಹುದು. ಈ ಕುರಿತ ವಿವರ ಇಲ್ಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India – SBI) ಸ್ವಂತ ಬಿಸಿನೆಸ್, ವ್ಯಾಪಾರ, ಉದ್ದಿಮೆ ಮಾಡುವವರಿಗೆ ಕನಿಷ್ಠ 10 ಲಕ್ಷ ರೂ.ಗಳಿಂದ ಗರಿಷ್ಠ 5 ಕೋಟಿ ರೂ. ತನಕ ಸಾಲ ನೀಡುತ್ತದೆ. 2023ರ ಸೆಪ್ಟೆಂಬರ್ 1ರಿಂದ ವಾರ್ಷಿಕ 8.40% ಬಡ್ಡಿ ದರದಲ್ಲಿ ಈ ಸಾಲವನ್ನು ವಿತರಿಸಲಾಗುತ್ತಿದೆ. ವರ್ಕಿಂಗ್ ಕ್ಯಾಪಿಟಲ್, ಸ್ಥಿರ ಆಸ್ತಿಗಳ ಸ್ವಾಧೀನಕ್ಕೆ ಈ ಬಿಸಿನೆಸ್ ಲೋನ್ ನೀಡುತ್ತಾರೆ. ಇದರ ಮತ್ತಷ್ಟು ವಿವರ ಇಂತಿದೆ.
ಟಾರ್ಗೆಟ್ ಗ್ರೂಪ್: ಸಣ್ಣ ಮತ್ತು ಮಧ್ಯಮ ವಲಯದಲ್ಲಿ ವೈಯಕ್ತಿಕವಾಗಿ ನಡೆಸುತ್ತಿರುವ ಬಿಸಿನೆಸ್, ( ಪ್ರೊಪ್ರೈಟರಿ) ಪಾರ್ಟ್‌ನರ್‌ಶಿಪ್ ಕಂಪನಿ, ಪಬ್ಲಿಕ್/ಪ್ರೈವೇಟ್ ಲಿಮಿಟೆಡ್ ಕಂಪನಿಗಳು ಈ ಸಾಲ ಪಡೆಯಬಹುದು. ಕ್ಯಾಶ್ ಕ್ರೆಡಿಟ್ ಮತ್ತು ಟರ್ಮ್ ಲೋನ್ ಲಭ್ಯವಿರುತ್ತದೆ. ಸಾಲಗಾರರ ಕಾಂಟ್ರಿಬ್ಯೂಷನ್ ಆಗಿ ವರ್ಕಿಂಗ್ ಕ್ಯಾಪಿಟಲ್ ಸಾಲಕ್ಕೆ 25% ಮತ್ತು ಕಾಂಪೋನ್‌ಮೆಂಟ್ ಸಲುವಾಗಿ 33% ನಿಗದಿಯಾಗಿದೆ. ಸಾಲಗಾರರ ವಯಸ್ಸು 18-65 ವರ್ಷದ ಮಿತಿಯಲ್ಲಿ ಇರಬೇಕು. ಪರ್ಸನಲ್ ಡಿಟೇಲ್ಸ್, ಬಿಸಿನೆಸ್ ಡಿಟೇಲ್ಸ್, ಒಟ್ಟಾರೆ 50-60% ಸ್ಕೋರ್ ಇರಬೇಕು.
ಮರು ಪಾವತಿ ಅವಧಿ: ವರ್ಕಿಂಗ್ ಕ್ಯಾಪಿಟಲ್ ಲೋನ್ ಅನ್ನು ಡಿಮಾಂಡ್ ಮೇರೆಗೆ ಮರು ಪಾವತಿಸಬಹುದು. ಟರ್ಮ್ ಲೋನ್ ಅವಧಿ 7 ವರ್ಷಗಳು. ಮೊರಟೋರಿಯಂ 6 ತಿಂಗಳು ಮೀರುವಂತಿಲ್ಲ.
ಸಂಸ್ಕರಣ ಶುಲ್ಕ: ಎಂಎಸ್‌ಎಂಇ ಯುನಿಟ್‌ಗಳಿಗೆ ಬ್ಯಾಂಕಿನ ನಿಯಮಾವಳಿಗಳ ಅನುಸಾರ ಸಂಸ್ಕರಂ ಶುಲ್ಕ ಇರುತ್ತದೆ. ಇತರ ಶುಲ್ಕಗಳೂ ಇರುತ್ತವೆ. ಕೊಲಾಟರ್ ಸೆಕ್ಯುರಿಟಿಯನ್ನು ಬ್ಯಾಂಕಿನ ಮಾರ್ಗದರ್ಶಿಯನ್ವಯ ಕೊಡಬೇಕಾಗುತ್ತದೆ.
ದೇಶದ 12 ಸಾರ್ವಜನಿಕ ಬ್ಯಾಂಕ್‌ಗಳು 2023ರ ಮಾರ್ಚ್ ವೇಳೆಗೆ ಎಂಎಸ್‌ಎಂಇ ವಲಯಕ್ಕೆ 27,124 ಕೋಟಿ ರೂ. ಸಾಲವನ್ನು ನೀಡಿವೆ. ಅದರಲ್ಲೂ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ), ಬ್ಯಾಂಕ್ ಆಫ್ ಮಹಾರಾಷ್ಟ್ರ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹೆಚ್ಚಿನ ಎಂಎಸ್‌ಎಂಇ ಸಾಲವನ್ನು ನೀಡಿವೆ. ಕೊಲಾಟರಲ್ ಫ್ರೀ ಎಂಎಸ್‌ಎಂಇ ಲೋನ್ ವಲಯದಲ್ಲಿ ಪಿಎನ್‌ಬಿ ಒಟ್ಟು 13,247 ಕೋಟಿ ರೂ. ಸಾಲವನ್ನು ನೀಡಿದೆ.