ಕೋಟ್ಯಧಿಪತಿಯಾಗಲು ಬಯಸುವವರು ಚಿಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯದೇ ಅಥವಾ ಮ್ಯೂಚುವಲ್ ಫಂಡ್ ಒಳ್ಳೆಯದೇ ಎಂಬ ಗೊಂದಲ ನಿಮ್ಮಲ್ಲಿರಬಹುದು. (Money Guide ) ಈ ಪ್ರಶ್ನೆಗೆ ವಿಸ್ತಾರ ಮನಿ ಪ್ಲಸ್‌ನಲ್ಲಿ ವಿವರಿಸಿದ್ದಾರೆ ಅಕ್ಷಯ್ ಮನಿ ಮ್ಯಾನೇಜ್‌ಮೆಂಟ್‌ನ ಸಿಇಒ ನರಸಿಂಹ ಕುಮಾರ್.
ಚಿಟ್ ಫಂಡ್‌ಗಳಲ್ಲಿ ಸರ್ಕಾರಿ ವಲಯದ ಚಿಟ್ ಫಂಡ್‌ಗಳೂ ಇವೆ. ಖಾಸಗಿ ವಲಯದ ಚಿಟ್ ಫಂಡ್‌ಗಳೂ ಇವೆ. ಅಸಂಘಟಿತ ವಲಯದಲ್ಲೂ ಪರಸ್ಪರ ವಿಶ್ವಾಸದಲ್ಲಿ ನಡೆಯುವ ಚಿಟ್ ಫಂಡ್ ಗಳೂ ಇವೆ. ಜತೆಗೆ ದೇಶದಲ್ಲಿ ಚಿಟ್ ಫಂಡ್‌ಗೆ ಸಂಬಂಧಿಸಿ ದೊಡ್ಡ ಹಗರಣಗಳೂ ನಡೆದಿವೆ. ಹೀಗಾಗಿ ಚಿಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದಕ್ಕೆ ಮುನ್ನ ಸಾಕಷ್ಟು ಪರಾಮರ್ಶೆ ನಡೆಸಬೇಕು.
ಎರಡನೆಯದಾಗಿ, ಚಿಟ್ ಫಂಡ್ ಕಂಪನಿಗಳು ಹೂಡಿಕೆದಾರರಿಗೆ ನೀಡಿರುವ ರಿಟರ್ನ್ ಅನ್ನು ಗಮನಿಸಿದರೆ ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ. ಸಾಮಾನ್ಯವಾಗಿ ಚಿಟ್ ಫಂಡ್ ಗಳಲ್ಲಿ ಹೂಡಿಕೆಯ ಪರಿಣಾಮ ಹೂಡಿಕೆದಾರರಿಗೆ ಸಿಗುವ ಆದಾಯ 6.5%ನಿಂದ 7% ತನಕ ಇರುತ್ತದೆ. ಆದರೆ ಇದೇ ವೇಳೆ ಮ್ಯೂಚುವಲ್ ಫಂಡ್‌ಗಳಲ್ಲಿ ಇದಕ್ಕಿಂತ ಹೆಚ್ಚು ಆದಾಯ ಸಿಗುತ್ತದೆ ಎನ್ನುತ್ತಾರೆ ನರಸಿಂಹ ಕುಮಾರ್. ಹೆಚ್ಚಿನ ವಿವರಗಳಿಗೆ ಮನಿ ಪ್ಲಸ್ ವಿಡಿಯೊವನ್ನು ವೀಕ್ಷಿಸಬಹುದು.
ಚಿಟ್ ಫಂಡ್‌ಗಳಿಗೆ ಯಾವುದೇ ರೆಗ್ಯುಲೇಶನ್ಸ್ ಇರುವುದಿಲ್ಲ. (ನಿಯಂತ್ರಕ ವ್ಯವಸ್ಥೆ) ಆದರೆ ಮ್ಯೂಚುವಲ್ ಫಂಡ್ ವಲಯವನ್ನು ಸೆಬಿ ನಿಯಂತ್ರಿಸುತ್ತದೆ. ಚಿಟ್ ಫಂಡ್‌ನಲ್ಲಿ ತೆರಿಗೆ ಅನುಕೂಲ ಸಿಗಲ್ಲ. ಆದರೆ ಮ್ಯೂಚುವಲ್ ಫಂಡ್‌ನಲ್ಲಿ ತೆರಿಗೆ ಉಳಿತಾಯವೂ ಸಾಧ್ಯ.