ಈಕ್ವಿಟಿ ಹೂಡಿಕೆಯಿಂದ ನಿಮ್ಮ ಸಂಪತ್ತನ್ನು ಬೆಳೆಸಬಹುದು. ಈಕ್ವಿಟಿ ಹೂಡಿಕೆ ಎಂದರೆ ಷೇರು ಮಾರುಕಟ್ಟೆಯಲ್ಲಿ ಇನ್ವೆಸ್ಟ್ ಮಾಡುವುದು. ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ ( Money Plus) ಎಂದರೆ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ನಾವು ಒಂದು ಈಕ್ವಿಟಿ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ, ನಮ್ಮ ಪರವಾಗಿ ಫಂಡ್ ಮ್ಯಾನೇಜರ್‌ಗಳು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾರೆ. ಅವರಿಗೆ ಬೇಕಾದ ಕಮಿಶನ್ ಪಡೀತಾರೆ. 60-80 ಕಂಪನಿಗಳಲ್ಲಿ ಹೂಡಿಕೆ ಮಾಡುತ್ತಾರೆ. ರಿಯಲ್ ಎಸ್ಟೇಟ್ ಉತ್ತಮ ಹೂಡಿಕೆಯಾದರೂ ಬೆಂಗಳೂರಿನಂಥ ನಗರದಲ್ಲಿ ಕೋಟ್ಯಂತರ ರೂ. ಬೇಕು. ಈಕ್ವಿಟಿಯಲ್ಲಿ ಸಣ್ಣ ಮೊತ್ತದಿಂದಲೂ ಹೂಡಿಕೆ ಆರಂಭಿಸಬಹುದು. ನೇರವಾಗಿ ಹೂಡಿಕೆಗೆ ಅಗತ್ಯ ತಿಳುವಳಿಕೆ ಇಲ್ಲದಿದ್ದರೆ ಮ್ಯೂಚುವಲ್ ಫಂಡ್ ನಲ್ಲಿ ಇನ್ವೆಸ್ಟ್ ಮಾಡಬಹುದು. ಸಿಪ್ ಅಥವಾ ಲಂಪ್ಸಮ್ ಆಗಿ ಹೂಡಿಕೆ ಮಾಡಬಹುದು. ಅಂದರೆ ಒಮ್ಮೆಗೆ ಲಕ್ಷ ಅಥವಾ ಕೋಟಿಗಳಲ್ಲಿ ಹೂಡಿಕೆ ಮಾಡಬಹುದು. ಅಥವಾ ಪ್ರತಿ ತಿಂಗಳು ಕೆಲವು ಸಾವಿರ ರೂ.ಗಳಲ್ಲಿ ನಿಯಮಿತವಾಗಿ ಹೂಡಿಕೆ ಮಾಡಬಹುದು. ಮ್ಯೂಚುವಲ್ ಫಂಡ್‌ಗಳಲ್ಲಿ ಅನೇಕ ವಿಧಗಳು ಇವೆ. ಈ ಬಗ್ಗೆ ವಿಸ್ತಾರ ನ್ಯೂಸ್‌ನ ಎಕ್ಸಿಕ್ಯುಟಿವ್ ಎಡಿಟರ್ ಶರತ್ ಎಂ.ಎಸ್ ಅವರು ವಿವರಿಸಿದ್ದಾರೆ. ಮನಿ ಪ್ಲಸ್ ವಿಡಿಯೊವನ್ನು ಈ ಕೆಳಗಿನ ಲಿಂಕ್ ಮೂಲಕ ವೀಕ್ಷಿಸಬಹುದು.
ವಾಲ್ಯೂ ರಿಸರ್ಚ್ ಕಂಪನಿಯು ಐದು ಬೆಸ್ಟ್ ಮ್ಯೂಚುವಲ್ ಫಂಡ್‌ಗಳನ್ನು ಪಟ್ಟಿ ಮಾಡಿದೆ. ಇದರಲ್ಲಿ ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್ ಇದೆ. ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್ ಮತ್ತು ಮಲ್ಟಿ ಕ್ಯಾಪ್ ಮ್ಯೂಚುವಲ್ ಫಂಡ್ ಇದೆ.
ಈಕ್ವಿಟಿ ಮ್ಯೂಚುವಲ್ ಫಂಡ್ ವಲಯದಲ್ಲಿರುವ ಅತ್ಯುತ್ತಮ ಫಂಡ್ ( ವಾಲ್ಯೂ ರೀಸರ್ಚ್ ಪ್ರಕಾರ)
ಎಚ್‌ಡಿಎಫ್‌ಸಿ ಮಿಡ್ ಕ್ಯಾಪ್ ಅಪಾರ್ಚುನಿಟಿಸ್ ಫಂಡ್-ಡೈರೆಕ್ಟ್ ಪ್ಲಾನ್
ವಾಲ್ಯೂ ರಿಸರ್ಚ್ ರೇಟಿಂಗ್ | ರಿಸ್ಕ್ | ವಲಯ | 1 ವರ್ಷದ ಗಳಿಕೆ | 3 ವರ್ಷದ ಗಳಿಕೆ | 5 ವರ್ಷದ ಗಳಿಕೆ | ಎಕ್ಸ್ಪೆನ್ಸ್ ರೇಶಿಯೊ (ಕಮಿಷನ್) |
4 ಸ್ಟಾರ್ | ವೆರಿ ಹೈ ರಿಸ್ಕ್ | ಈಕ್ವಿಟಿ ಮಿಡ್ ಕ್ಯಾಪ್ | 48.23% | 31.77% | 24.27% | 8% |
ಎಕ್ಸಿಟ್ ಲೋಡ್ | ಲಾಕಿನ್ ಅವಧಿ | ಎಯುಎಂ (ಈ ಫಂಡ್‌ನಲ್ಲಿ ಇರುವ ಒಟ್ಟು ಹೂಡಿಕೆಯ ಮೊತ್ತ | ಕನಿಷ್ಠ ಸಿಪ್ ಹೂಡಿಕೆ | ಕನಿಷ್ಠ ಲಂಪ್ಸಮ್ ಹೂಡಿಕೆ | 3 ವರ್ಷಗಳ ಕಾಲ ತಿಂಗಳಿಗೆ 5 ಸಾವಿರ ಹೂಡಿದ್ರೆ ಲಾಭ ಎಷ್ಟು? | 5 ವರ್ಷ ಕಾಲ ತಿಂಗಳಿಗೆ 5 ಸಾವಿರ ಹೂಡಿದ್ರೆ ಲಾಭ ಎಷ್ಟು? |
10% | ಇಲ್ಲ | ರೂ. 56,033 ಕೋಟಿ | ರೂ. 100 | ರೂ.100 | ಹೂಡಿಕೆ ಮೊತ್ತ ರೂ. 1.8 ಲಕ್ಷ ಲಾಭ ರೂ.1.1 ಲಕ್ಷ ಒಟ್ಟು 2.9 ಲಕ್ಷ | ಹೂಡಿಕೆ ಮೊತ್ತ ರೂ. 3 ಲಕ್ಷ ಲಾಭ ರೂ. 3.3 ಲಕ್ಷ ಒಟ್ಟು ರೂ. 6.3 ಲಕ್ಷ |