Site icon Vistara News

Money plus : ಬ್ಯಾಂಕ್‌ನಲ್ಲಿ ನಿಮ್ಮ ದುಡ್ಡಿಟ್ಟು ಸಾಯಬೇಡಿ

Money

cash

ನಿಮಗೆ ಗೊತ್ತಾ, ದೇಶದ ಬ್ಯಾಂಕ್‌ಗಳಲ್ಲಿ ಅನ್‌ ಕ್ಲೇಮ್ಡ್‌ ಮನಿ ಎನ್ನುವುದು 43,000 ಕೋಟಿ ರೂ.ನಷ್ಟಿದೆ. ಅಂದ್ರೆ ಯಾರೂ ದಿಕ್ಕಿಲ್ಲದ ಹಣ 43 ಸಾವಿರ ಕೋಟಿ ರೂ. ಇದೆ. (Money plus ) ಇಷ್ಟೇ ಅಲ್ಲ, ನಿಷ್ಕ್ರಿಯ ಖಾತೆಗಳಲ್ಲಿ ಒಂದು ಲಕ್ಷ ಕೋಟಿ ರೂ.ಗೂ ಹೆಚ್ಚು ಹಣ ಇದೆ. ಅದು ನಿಮ್ಮ ತಂದೆ ತಾಯಿ, ಅಕ್ಕ, ಅಣ್ಣಂದಿರಿದ್ದಿರಬಹುದು. ಅದನ್ನು ಲೀಗಲ್‌ ಆಗಿ ವಾಪಸ್‌ ಪಡೆಯುವುದು ಹೇಗೆ? ಅದರ ಬಗ್ಗೆ ಕಂಪ್ಲೀಟ್‌ ಡಿಟೇಲ್ಸ್‌ ಅನ್ನು ವಿಸ್ತಾರ ನ್ಯೂಸ್‌ನ ಎಕ್ಸಿಕ್ಯುಟಿವ್‌ ಎಡಿಟರ್‌ ಶರತ್‌ ಎಂ.ಎಸ್‌ ಅವರು ನೀಡಿದ್ದಾರೆ. ವಿಸ್ತಾರ ಮನಿ ಪ್ಲಸ್‌ ಚಾನೆಲ್‌ನ ಈ ವಿಡಿಯೊ ಲಿಂಕ್‌ ಅನ್ನು ಕೆಳಗೆ ನೀಡಲಾಗಿದೆ.

ಎಷ್ಟೋ ಜನ ಬ್ಯಾಂಕ್‌ ಖಾತೆಗಳಲ್ಲಿ ದುಡ್ಡು ಇಟ್ಟು ಸತ್ತು ಹೋಗಿದ್ದಾರೆ. ಯಾವುದೇ ಬ್ಯಾಂಕ್‌ನಲ್ಲಿ ಹತ್ತು ವರ್ಷಗಳ ಕಾಲ ಹೆಚ್ಚು ಅವಧಿಯಲ್ಲಿ ಹಣವನ್ನು ಯಾರೂ ಕ್ಲೇಮ್‌ ಮಾಡದಿದ್ದರೆ, ಆ ಖಾತೆಯಲ್ಲಿ ಇರುವ ಹಣವನ್ನು ಅನ್‌ ಕ್ಲೇಮ್ಡ್‌ ಮನಿ ಎನ್ನಲಾಗುತ್ತದೆ. ಅದು ಆರ್‌ಬಿಐನಲ್ಲಿ ಇರುವ ಇನ್ವೆಸ್ಟರ್‌ ಎಜ್ಯುಕೇಶನ್‌ ಫಂಡ್‌ ಗೆ (Investor education fund) ಹೋಗುತ್ತದೆ. 10 ವರ್ಷಗಳಿಂದ ಐದು ಸಾವಿರ ಇರಬಹುದು, ಐದು ಲಕ್ಷ ರೂ. ಇರಬಹುದು, ಕ್ಲೇಮ್‌ ಮಾಡದಿದ್ದರೆ, ಇನ್ವೆಸ್ಟರ್‌ ಎಜ್ಯುಕೇಶನ್‌ ಫಂಡ್‌ಗೆ ಹೋಗುತ್ತದೆ. ಅದು ಹಣಕಾಸು ಸಾಕ್ಷರತೆಯ ಆರ್‌ ಬಿಐ ಕಾರ್ಯಕ್ರಮಗಳಿಗೆ ಬಳಕೆಯಾಗುತ್ತದೆ. ಈಗ ಅಂಥ 43 ಸಾವಿರ ಕೋಟಿ ರೂ. ಹಣ ಈ ಖಾತೆಯಲ್ಲಿದೆ.

ಬ್ಯಾಂಕ್‌ ಅಕೌಂಟ್‌ ಮಾಡಿದ ಬಳಿಕ ವಿವರಗಳನ್ನು ಖಾತೆದಾರರು ಕುಟುಂಬದ ಇತರ ಸದಸ್ಯರಿಗೆ ತಿಳಿಸದಿದ್ದರೆ, ನಾಮಿನಿ ಮಾಡದಿದ್ದರೆ ಇಂಥ ಸನ್ನಿವೇಶ ಸೃಷ್ಟಿಯಾಗುತ್ತದೆ. ಖಾತೆದಾರರು ಯಾರಿಗೂ ತಿಳಿಸದೆ, ನಾಮಿನಿ ಮಾಡದೆ ಮೃತಪಟ್ಟರೆ, ಅಂಥ ಖಾತೆಯಲ್ಲಿರುವ ಹಣ 10 ವರ್ಷಗಳ ಕಾಲ ಯಾರೂ ಬಳಸದಿದ್ದರೆ, ಇನ್ವೆಸ್ಟರ್‌ ಎಜ್ಯುಕೇಶನ್‌ ಫಂಡ್‌ಗೆ ಹೋಗುತ್ತದೆ.

ಯಾವುದೇ ಬ್ಯಾಂಕ್‌ ಖಾತೆಯಲ್ಲಿ ಇನ್‌ ಆಕ್ಟಿವ್‌ ಅಥವಾ ಡೋರ್‌ಮ್ಯಾಟ್‌ ಅಕೌಂಟ್‌ ಎಂಬುದು ಇದೆ. ಎರಡು ವರ್ಷ ಕಾಲ ಬ್ಯಾಂಕ್‌ ಖಾತೆಯಲ್ಲಿ ಯಾವುದೇ ಹಣಕಾಸು ವರ್ಗಾವಣೆ ನಡೆಯದಿದ್ದರೆ, ಅದು ನಿಷ್ಕ್ರಿಯ ಖಾತೆ ಅಥವಾ ಇನ್‌ ಆಕ್ಟಿವ್‌ ಆಗುತ್ತದೆ. ಇಂಥ ಖಾತೆಗಳಲ್ಲಿ ಒಂದು ಲಕ್ಷ ಕೋಟಿ ರೂ.ಗೂ ಹೆಚ್ಚು ಮೊತ್ತವಿದೆ. ನೀವು ಇಂಥ ಖಾತೆಗಳಲ್ಲಿ ಹಣ ಇದ್ದರೆ ಬ್ಯಾಂಕ್‌ ಅನ್ನು ಸಂಪರ್ಕಿಸಿ ಕೆವೈಸಿ ಪ್ರಕ್ರಿಯೆ ಮಾಡುವ ಮೂಲಕ ಖಾತೆಯನ್ನು ಸಕ್ರಿಯಗೊಳಿಸಬಹುದು. ಒಂದು ವೇಳೆ ಮಾಡದಿದ್ದರೆ ಹತ್ತು ವರ್ಷದ ಬಳಿಕ ಅದು ಆರ್‌ಬಿಐನ ಇನ್ವೆಸ್ಟರ್‌ ಎಜುಕೇಶನ್‌ ಫಂಡ್‌ಗೆ ಹೋಗುತ್ತದೆ.

Exit mobile version