Site icon Vistara News

Money plus : ವಾಹನ ಅಪಘಾತದ ಸಂದರ್ಭ ವಿಮೆ ಪರಿಹಾರ ಕ್ಲೇಮ್‌ ಮಾಡೋದು ಹೇಗೆ?

ವಾಹನ ಅಪಘಾತ ಆದ ಸಂದರ್ಭದಲ್ಲಿ ವಿಮೆ ಪರಿಹಾರವನ್ನು ಕ್ಲೇಮ್‌ ಮಾಡಿಕೊಳ್ಳುವುದು ಹೇಗೆ? (Money plus) ವಾಹನ ವಿಮೆ ಎಂದರೇನು? ಎಂಬಿತ್ಯಾದಿ ವಿಚಾರಗಳನ್ನು ಎಲ್ಲರೂ ತಿಳಿಯಬೇಕು. ಈ ಬಗ್ಗೆ ವಿಮೆ ತಜ್ಞರಾದ ಆಶ್ರಿತ್‌ ಮಲ್ಲೇಂಗಡ ಅವರು ವಿಸ್ತಾರ ಮನಿ ಪ್ಲಸ್‌ ಜತೆಗಿನ ಸಂದರ್ಶನದಲ್ಲಿ ವಿವರವಾಗಿ ತಿಳಿಸಿದ್ದಾರೆ. ವಿಡಿಯೊದ ಲಿಂಕ್‌ ಅನ್ನು ಈ ಕೆಳಗೆ ನೀಡಲಾಗಿದೆ. ವಾಹನ ಮಾಕಲೀಕರಲ್ಲಿ ಅನೇಕ ಮಂದಿ ವಿಮೆ ಖರೀದಿಸುವುದಿಲ್ಲ. ವಾಹನಗಳಿಗೆ ಲಕ್ಷಗಟ್ಟಲೆ ಖರ್ಚು ಮಾಡುವ ಮಂದಿ ಕೆಲವು ಸಾವಿರಗಳಲ್ಲಿ ಇರುವ ವಿಮೆ ಪ್ರೀಮಿಯಂ ಖರೀದಿಸಲು ಹಿಂದೇಟು ಹಾಕುತ್ತಾರೆ. 60% ವಾಹನ ಮಾಲೀಕರು ಮಾತ್ರ ವಿಮೆ ಖರೀದಿಸುತ್ತಾರೆ. ಉಳಿದವರು ಉದಾಸೀನ ಮಾಡುತ್ತಾರೆ. ಆದರೆ ಎಲ್ಲ ವಾಹನ ಮಾಲೀಕರು ತಪ್ಪದೆ ವಿಮೆ ಪ್ರೀಮಿಯಂ ಕಟ್ಟಬೇಕು.

ಒಂದು ವರ್ಷದ ಪ್ರೀಮಿಯಂ ಕಟ್ಟಲು ಉದಾಸೀನ ಮಾಡದಿರಿ. ಯಾವುದೇ ಅಪಘಾತ ಸಂಭವಿಸಿದರೆ ಅದಕ್ಕೆ ವಿಮೆ ಕವರೇಜ್‌ ಸಿಗುತ್ತದೆ. ಸಾಮಾನ್ಯ ವಾಹನಕ್ಕೆ ಜಾಸ್ತಿ ಪ್ರೀಮಿಯಂ ಇರಲ್ಲ. 14 ಲಕ್ಷ ರೂ.ಗಳ ಹೊಸ ಕಾರಿಗೆ 23 ಸಾವಿರ ರೂ. ಇರಬಹುದು. ಶೋ ರೂಮ್‌ ನಿಂದ ಹೊಸ ವಾಹನವನ್ನು ರಸ್ತೆಗೆ ಇಳಿಸಿದ ತಕ್ಷಣ ವಿಮೆ ಹೊಂದಿರಬೇಕು. ಉದಾಹರಣೆಗೆ ಶೋ ರೂಮ್‌ ನಿಂದ ಕಾರನ್ನು ಹೊರಗೆ ತೆಗೆದುಕೊಂಡ ಕ್ಷಣ ಬೇರೆ ವಾಹನ ಹೊಡೆದು ಅಪಘಾತ ಆದರೆ ವಿಮೆ ಇದ್ದರೆ ಮತ್ತೆ ಹೊಸ ಕಾರನ್ನೇ ಪಡೆಯಬಹುದು. ಆದರೆ ವಿಮೆ ಇಲ್ಲದಿದ್ದರೆ ಎಷ್ಟು ನಷ್ಟ.

ಕಾರಿನ ಕೀ ಕಳೆದರೂ ವಿಮೆ ಪರಿಹಾರ ಮಾಡಿಸಿಕೊಳ್ಳಬಹುದು. ಕಾರಿನ ಚಾಲಕರಿಗೆ, ಎಂಜಿನ್‌ಗೆ ವಿಮೆ ಪರಿಹಾರ ಸಿಗುತ್ತದೆ. ಕಾರಿನ ಮೇಲೆ ಮರ ಬಿದ್ದರೂ ವಿಮೆ ಪರಿಹಾರ ಸಿಗಬಹುದು. 15 ದಿನಗಳಲ್ಲಿ ವಿಮೆ ಕ್ಲೇಮ್‌ ಪರಿಹಾರ ಪಡೆಯಬಹುದು.

Exit mobile version