ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme -NPS) ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದ್ದು, ನಿವೃತ್ತಿಯ ಬಳಿಕ ಆರ್ಥಿಕ ಭದ್ರತೆಗೆ ಸಹಾಯಕವಾಗುತ್ತದೆ. ಆರಂಭದಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ ಸೀಮಿತವಾಗಿದ್ದ ಎನ್‌ಪಿಎಸ್ ಈಗ ಎಲ್ಲ ಭಾರತೀಯ ನಾಗರಿಕರಿಗೂ ಸ್ವಯಂ ಪ್ರೇರಿತವಾಗಿ ಸಿಗುತ್ತಿದೆ. ಈ ಯೋಜನೆಯಲ್ಲಿ ಎನ್‌ಪಿಎಸ್ ಅಕೌಂಟ್ ಅನ್ನು ತೆರೆಯಬೇಕಾಗುತ್ತದೆ. ಬಳಿಕ ನಿಯಮಿತವಾಗು ಹೂಡಿಕೆ ಮಾಡಬಹುದು. ನಿವೃತ್ತಿಯ ಕಾಲಕ್ಕೆ (60 ವರ್ಷ) ಒಟ್ಟು ಬಂಡವಾಳದ 60% ಮೊತ್ತವನ್ನು ಒಟ್ಟಿಗೆ ವಿತ್ ಡ್ರಾವಲ್ ಮಾಡಬಹುದು. ಉಳಿದ 40% ಮೊತ್ತವನ್ನು ಆನ್ಯುಯಿಟಿ ಪ್ಲಾನ್ (ಪಿಂಚಣಿ ಉತ್ಪನ್ನ) ಪಡೆಯಲು ಬಳಸುತ್ತಾರೆ. ಆನ್ಯುಯಿಟಿ ಪ್ಲಾನ್ ಇಲ್ಲದೆ ಒಟ್ಟು ಮೊತ್ತ 5 ಲಕ್ಷ ರೂ.ಗಿಂತ ಕಡಿಮೆ ಇದ್ದರೂ ಎಲ್ಲ ಮೊತ್ತವನ್ನು ವಿತ್ ಡ್ರಾವಲ್ ಮಾಡಬಹುದು. ಇದರ ಮೇಲೆ ತೆರಿಗೆ ಇರುವುದಿಲ್ಲ. ಎನ್‌ಪಿಎಸ್ ಅಕೌಂಟ್ ಅನ್ನು ಆನ್‌ಲೈನ್ ಮೂಲಕವೂ ತೆರೆಯಬಹುದು. ಅದು ಹೇಗೆ ಎಂಬುದನ್ನು ನೋಡೋಣ.
- 1. ಇ-ಎನ್‌ಪಿಎಸ್ ವೆಬ್‌ಸೈಟ್ ಗೆ ಲಾಗಿನ್ ಆಗಿ (https://enps. nsdl.com/eNPS/NationalPension-System.html)
- 2. ರಿಜಿಸ್ಟ್ರೇಶನ್ ಮೇಲೆ ಕ್ಲಿಕ್ ಮಾಡಿ, ನ್ಯೂ ರಿಜಿಸ್ಟ್ರೇಶನ್ ಸಿಲೆಕ್ಟ್ ಮಾಡಿ.
- 3. ಆಧಾರ್ ಅಥವಾ ಪ್ಯಾನ್ ನಂಬರ್, ಮೊಬೈಲ್ ನಂಬರ್ ಮತ್ತು ಇ-ಮೇಲ್ ಐಡಿ ಸಲ್ಲಿಸಿ.
- 4. ಮೂರು ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿಗ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು.
- 5. ಒಟಿಪಿ ವ್ಯಾಲಿಡೇಶನ್ ಬಳಿಕ ವೈಯಕ್ತಿಕ ವಿವರಗಳನ್ನು ಭರ್ತಿಗೊಳಿಸಿ.
ಎನ್‌ಪಿಎಸ್ ಖಾತೆ ತೆರೆಯಲು ಅವಶ್ಯವಿರುವ ದಾಖಲೆಗಳೇನು?
ಇತ್ತೀಚಿನ ಭಾವಚಿತ್ರ, ಸಿಗ್ನೇಚರ್ ಮತ್ತು ಕ್ಯಾನ್ಸಲ್ಡ್ ಚೆಕ್ ಅಥವಾ ಬ್ಯಾಂಕ್ ಸ್ಟೇಟ್‌ಮೆಂಟ್ ಅಗತ್ಯ.
ಅಕೌಂಟ್ ಆಯ್ಕೆ ಮಾಡಿಕೊಳ್ಳುವುದು ಹೇಗೆ? : ಅರ್ಜಿದಾರರು ಟೈರ್ I ಅಥವಾ ಟೈರ್ II ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಅಥವಾ ಎರಡನ್ನೂ ಆಯ್ಕೆ ಮಾಡಬಹುದು. ಟೈರ್ I ಕಡ್ಡಾಯವಾಗಿದ್ದು, ಟ್ಯಾಕ್ಸ್ ಬೆನಿಫಿಟ್ ಅನ್ನು ಹೊಂದಿರುತ್ತದೆ. ಹಾಗೂ ವಿತ್ ಡ್ರಾವಲ್ಸ್‌ನಲ್ಲಿ ಕೆಲವು ನಿಬಂಧನೆಗಳನ್ನು ಒಳಗೊಂಡಿರುತ್ತದೆ. ಟೈರ್ II ಸ್ವಯಂಪ್ರೇರಿತ ಅಕೌಂಟ್ ಆಗಿದ್ದು ಹೆಚ್ಚು ಫ್ಲೆಕ್ಸಿಬಿಲಿಟಿಯನ್ನು ಹೊಂದಿದೆ. ಆದರೆ ಇದಕ್ಕೆ ತೆರಿಗೆ ಬೆನಿಫಿಟ್ ಇರುವುದಿಲ್ಲ.
ಇದನ್ನೂ ಓದಿ: Money Guide : ಎಸ್‌ಬಿಐನಲ್ಲಿ 5 ಕೋಟಿ ರೂ. ತನಕ ಬಿಸಿನೆಸ್ ಸಾಲ ಪಡೆಯಿರಿ
ಅಕೌಂಟ್ ಅನ್ನು ಸಕ್ರಿಯಗೊಳಿಸುವುದು ಹೇಗೆ? ಅರ್ಜಿದಾರರು ಆರಂಭದಲ್ಲಿ ಟೈರ್ I ಖಾತೆಗೆ 500 ರೂ. ಠೇವಣಿ ಇಡಬೇಕು. ಟೈರ್ II ಖಾತೆಗೆ 1000 ರೂ. ಕೊಡಬೇಕು. ಅರ್ಜಿದಾರರು 12 ಅಂಕಿಗಳ ಪ್ರಾನ್ ನಂಬರ್ ( Permanent Retirement Account Number) ಪಡೆಯುತ್ತಾರೆ. ಒಟಿಪಿ ಮೂಲಕ ದೃಢೀಕರಣಗೊಳಿಸಬೇಕು.