ಅನೇಕ ಮಂದಿ ಉತ್ಸಾಹದಿಂದ ಸೇಲ್ಸ್ ಕ್ಷೇತ್ರಕ್ಕೆ ಪದಾರ್ಪಣೆ ಮಾಡುತ್ತಾರೆ. ( Money plus ) ಆದರೆ ಅದನ್ನು ಸತತವಾಗಿ ಅಭ್ಯಾಸ ಅಥವಾ ಪ್ರಾಕ್ಟೀಸ್ ಮಾಡುವುದಿಲ್ಲ. ಒಬ್ಬ ಸೇಲ್ಸ್ ಪರ್ಸನ್ ವರ್ಷಗಟ್ಟಲೆ ಪ್ರಾಕ್ಟೀಸ್ ಮಾಡಬೇಕಾಗುತ್ತದೆ. ಸಂಗೀತಜ್ಞರೂ ಹತ್ತಾರು ವರ್ಷ ಪ್ರಾಕ್ಟೀಸ್ ಮಾಡಬೇಕಾಗುತ್ತದೆ. ಬಿಸಿನೆಸ್ ಸಲಹೆಗಾರ ಭೂಪೇಂದ್ರ ಸಿಂಗ್ ರಾಥೋರ್ ಹೇಳ್ತಾರೆ- ನನ್ನ ಅನುಭವದ ಪ್ರಕಾರ ಸೇಲ್ಸ್‌ನಲ್ಲಿ ತಿಂಗಳಿಗೆ 1-2 ಕೋಟಿ ರೂ. ಗಳಿಸಲು 7-8 ವರ್ಷ ಸೇಲ್ಸ್‌ನಲ್ಲಿ ಪರಿಣತಿ ಪಡೆಯಬೇಕು.
ಹಾಗಂತ 7-8 ವರ್ಷ ಬೇಕೆ ಎಂದು ನಿರಾಶರಾಗಬೇಕಿಲ್ಲ. ಮೊದಲ ವರ್ಷದಿಂದಲೇ ನೀವು ಲಕ್ಷ ಅಥವಾ ಎರಡು ಲಕ್ಷ ಗಳಿಸಬಹುದು. ಆದರೆ ನೀವು ದಿನವಹಿ ಆಧಾರದಲ್ಲಿ ಅಭ್ಯಾಸ ಮಾಡಬೇಕಾಗುತ್ತದೆ. ಸೆಲ್ಲಿಂಗ್ ಮಾಡುವ ಕಲೆ ಕರಗತವಾದವರು ಕೆಲವೇ ತಿಂಗಳಲ್ಲಿ ಕೋಟ್ಯಂತರ ರೂ. ದುಡ್ಡು ಗಳಿಸುತ್ತಾರೆ. ಪ್ರಾಕ್ಟೀಸ್ ಮೇಕ್ಸ್ ಪರ್ ಫೆಕ್ಟ್ ಎನ್ನುವುದು ನಿಜ. ಸೇಲ್ಸ್ ವಿಚಾರದಲ್ಲೂ ಇದು ಸತ್ಯ. ನೀವು ವರ್ಷಗಟ್ಟಲೆ ಪ್ರಾಕ್ಟೀಸ್ ಮಾಡಲು ತಯಾರಾಗಿರಬೇಕು. ಹಾಗೂ ಪ್ರತಿ ದಿನವೂ ಇದನ್ನು ತಪ್ಪದೆ ಮಾಡಬೇಕು. ರಿಟರ್ನ್ ದೊಡ್ಡದಾಗಿರುತ್ತದೆ.
ಬಿಸಿನೆಸ್‌ನಲ್ಲಿ ಸಕ್ಸಸ್ ಆಗಲು ಅದ್ಭುತವಾದ ಎರಡು ಮಂತ್ರಗಳಿವೆ. ಅವುಗಳೆಂದರೆ ಓವರ್ ಕಮಿಟ್ ಮತ್ತು ಓವರ್ ಡೆಲಿವರ್. ಅತ್ಯಂತ ಬದ್ಧತೆ ಮತ್ತು ಗರಿಷ್ಠ ಕಾರ್ಯನಿರ್ವಹಣೆ. ಸೇಲ್ಸ್‌ನಲ್ಲಿ ಇವೆರಡೂ ಅನಿವಾರ್ಯ. ಗ್ರೇಟ್ ಸೇಲ್ಸ್ ಪರ್ಸನ್ ಆಗಬೇಕಿದ್ದರೆ ಈ ಎರಡೂ ಗುಣಗಳು ನಿಮ್ಮಲ್ಲಿ ಇರಲೇಬೇಕು. ಭೂಪೇಂದರ್ ಸಿಂಗ್ ರಾಥೋರ್ ಹೇಳುತ್ತಾರೆ- ನಾನು ಇ-ಲರ್ನಿಂಗ್ ಪ್ರೋಗ್ರಾಮ್ ಶುರು ಮಾಡಿದಾಗ ಗ್ರಾಹಕರಿಗೆ ನೂರಕ್ಕೂ ಹೆಚ್ಚು ವಿಡಿಯೊಗಳನ್ನು ಕಳಿಸುವ ವಾಗ್ದಾನ ಮಾಡಿದ್ದೆ. ಇದು ಓವರ್ ಕಮಿಟ್ ಮೆಂಟ್ ಆಗಿತ್ತು. ಈ ರೀತಿ ನೂರಾರು ಕಂಟೆಂಟ್ ವಿಡಿಯೊಗಳನ್ನು ಕೊಡುವ ಮತ್ತೊಬ್ಬ ಅಸಾಮಿಯನ್ನು ನಾನು ಕಂಡಿರಲಿಲ್ಲ. ನೀವು ಓವರ್ ಕಮಿಟ್ ಆಗಿದ್ದಾಗ ನಿಮ್ಮ ಮನಸ್ಸು ಮತ್ತು ಶರೀರ ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತದೆ.
ಇದನ್ನೂ ಓದಿ: Money Guide : ಸುಲಭವಾಗಿ ನಿಮ್ಮ ಆದಾಯ ಹೆಚ್ಚಿಸಿಕೊಳ್ಳೋದು ಹೇಗೆ?
ನೀವು ಗ್ರಾಹಕರ ಜತೆಗೆ ಚರ್ಚಿಸುವಾಗ ಓವರ್ ಕಮಿಟ್ ಮೆಂಟ್ ಬಗ್ಗೆ ಪ್ರಸ್ತಾಪಿಸಿ. ಲೈಫ್ ಟೈಮ್ ಸರ್ವೀಸ್ ಕೊಡುವೆ ಎಂಬ ವಾಗ್ದಾನ ನೀಡಿ. ಹಾಗೂ ಅದರಂತೆ ನಡೆದುಕೊಳ್ಳಿ. ಇಂಥ ದಿನ ಕರೆ ಮಾಡುವೆ ಎಂದರೆ ಅದೇ ದಿನ ಕರೆ ಮಾಡಿರಿ. ಸೇಲ್ಸ್‌ನಲ್ಲಿ ಫಲಿತಾಂಶ ಎಂದರೆ ಹಣ ಇದ್ದಂತೆ. ಫಲಿತಾಂಶ ಚೆನ್ನಾಗಿ ಬರಬೇಕಿದ್ದರೆ ಹೊಸ ಕೌಶಲಗಳನ್ನು ಕಲಿಯಬೇಕು. ತರಬೇತಿ ಪಡೆಯಬೇಕು. ಇಲ್ಲದಿದ್ದರೆ ಆಯುಷ್ಯ ನಷ್ಟವಾಗುತ್ತದೆ.