ಕಳೆದ ವರ್ಷ ಡಿಸೆಂಬರ್‌ನಲ್ಲಿ ನಿಧನರಾದ ಹಿರಿಯ ನಟಿ ಲೀಲಾವತಿ ಅವರು ಬದುಕಿನುದ್ದಕ್ಕೂ ದುಡಿದ ಸಂಪಾದನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದವರು. (Money plus ) ವೈಯಕ್ತಿಕ ಹಣಕಾಸು ಕುರಿತ ಎಲ್ಲ ಪಾಠಗಳನ್ನು ತಾಯಿಯಿಂದ ಕಲಿತೆ ಎನ್ನುತ್ತಾರೆ ಅವರ ಪುತ್ರ, ನಟ ವಿನೋದ್ ರಾಜ್.
ಅಮ್ಮ ಲೀಲಾವತಿ ಅವರು ಪ್ರತಿಯೊಂದು ರೂಪಾಯಿ ದುಡ್ಡನ್ನೂ ಅನಗತ್ಯವಾಗಿ ಪೋಲು ಮಾಡಬಾರದು. ಆದಾಯ ಮತ್ತು ಖರ್ಚು ವೆಚ್ಚಗಳು, ಸಿಬ್ಬಂದಿ ವೇತನ, ಮನೆಯ ದಿನ ನಿತ್ಯದ ಖರ್ಚು ವೆಚ್ಚಗಳ ಬಗ್ಗೆ ದಾಖಲಿಸುತ್ತಿದ್ದರು. ಕೃಷಿ ಆದಾಯಕ್ಕೊಂದು ಲಕೋಟೆ, ಎಲ್ಪಿಜಿ ಸಿಲಿಂಡರ್ ಖರ್ಚಿಗೊಂದು ಕವರ್, ನೆಲಮಂಗಲ ತೋಟದ ಕಾರ್ಮಿಕರ ವಾರದ ವೇತನಕ್ಕೊಂದು ಲಕೋಟೆ, ಕಾರ್ಮಿಕರ ರೇಷನ್ ಖರ್ಚು, ಜನರೇಟರ್ ಡೀಸೆಲ್ ಹೀಗೆ ಪ್ರತಿಯೊಂದಕ್ಕೂ ಪ್ಲಾನ್ ಮಾಡುತ್ತಿದ್ದರು. ಆರಂಭದಲ್ಲಿ ಸರಿಯಾದ ಬ್ಯಾಗು ಕೂಡ ಇರುತ್ತಿರಲಿಲ್ಲ. ಹುಂಡಿ ಡಬ್ಬಗಳನ್ನು ತೆಗೆದುಕೊಂಡು ಉಪಯೋಗಿಸುತ್ತಿದ್ದರು. ಒಂದು ಸಲ ಗತಿಗೆಟ್ಟವರೆಲ್ಲ ಇಡುವ ಹಾಗೆ ಇಡುತ್ತಿದ್ದೀಯಲ್ಲವೇ, ಏನಿದು ಎಂದು ತಮಾಷೆಗೆ ಹೇಳುತ್ತಿದ್ದೆ. ಲೋ, ನಿನಗೆ ಗೊತ್ತಾಗಲ್ಲ, ನೀನು ಸಂತೋಷವಾಗಿರು ಎಂದು ಸುಮ್ಮನಿರುವೆ ಎಂದು ಅಮ್ಮ ಹೇಳುತ್ತಿದ್ದರು. ನನಗೆ ಕಷ್ಟಗಳು ಗೊತ್ತಾಗದಂತೆ ಅಮ್ಮ ಲೀಲಾವತಿ ನೋಡಿಕೊಳ್ಳುತ್ತಿದ್ದರು. ಎಮರ್ಜೆನ್ಸಿಗೆ ಮಾತ್ರೆಗಳು ಇರಲಿ ಎಂದು ಬ್ಯಾಗ್ ನಲ್ಲಿ ಇಟ್ಟುಕೊಳ್ಳುತ್ತಿದ್ದರು. ವಾಹನಗಳಲ್ಲಿ ಎಲ್ಲ ಲೈಸೆನ್ಸ್, ವಿಮೆ ಕುರಿತ ದಾಖಲಾತಿಗಳು ಇರಬೇಕು. ಕುಟುಂಬ ಪಡಿತರ ಚೀಟಿಯನ್ನೂ ಒಂದು ಕಾಲದಲ್ಲಿ ಬಳಸುತ್ತಿದ್ದರು. ಹೀಗೆ ನೂರು ರೂಪಾಯಿ ಸಾವಿರವಾಯಿತು, ಸಾವಿರ ಲಕ್ಷವಾಯಿತು. ಲಕ್ಷ ರೂ.ಗಳಿಂದ ಕೋಟಿ ರೂ. ಆಯಿತು ಎನ್ನುತ್ತಾರೆ ವಿನೋದ್ ರಾಜ್. ಸಂದರ್ಶನದ ವಿಡಿಯೊ ಇಲ್ಲಿದೆ ನೋಡಿ.