Site icon Vistara News

Money Guide : ಎಲ್‌ಐಸಿಯ ಇಂಡೆಕ್ಸ್‌ ಪ್ಲಸ್‌ ಪಾಲಿಸಿಯ ಲಾಭವೇನು?

LIC office

ಭಾರತೀಯ ಜೀವ ವಿಮೆ ನಿಗಮ (LIC) ನೂತನ ಯುನಿಟ್‌ ಲಿಂಕ್ಡ್‌ ಲೈಫ್‌ ಇನ್ಷೂರೆನ್ಸ್‌ ಪಾಲಿಸಿಯನ್ನು ಬಿಡುಗಡೆಗೊಳಿಸಿದೆ. ಇದರ ಹೆಸರು ಎಲ್‌ಐಸಿ ಇಂಡೆಕ್ಸ್‌ ಪಾಲಿಸಿ. ( LICʼs Index Plus Policy) ಇದು ನಾನ್‌ -ಪಾರ್ಟಿಸಿಪೇಟಿಂಗ್‌, ರೆಗ್ಯುಲರ್‌ ಪ್ರೀಮಿಯಂ (Money Guide) ಇಂಡಿವೀಜ್ಯುವಲ್‌ ಲೈಫ್‌ ಇನ್ಷೂರೆನ್ಸ್‌ ಪ್ಲಾನ್‌ ಆಗಿದೆ. ಇದು ಜೀವ ವಿಮೆಯ ಕವರೇಜ್‌ ಮತ್ತು ಸೇವಿಂಗ್ಸ್‌ ಅನುಕೂಲವನ್ನು ಕೊಡುತ್ತದೆ.

ಎಲ್‌ಐಸಿಯ ಇಂಡೆಕ್ಸ್‌ ಪ್ಲಸ್‌ ವಿವರ: ಎಲ್‌ಐಸಿ ಇಂಡೆಕ್ಸ್‌ ಪ್ಲಸ್‌ನ ಅವಧಿಯುದ್ದಕ್ಕೂ ವಿಮೆ ಕವರೇಜ್‌ ಸಿಗುತ್ತದೆ. ಇದಕ್ಕೆ ಪ್ರತಿಯಾಗಿ ಪಡೆಯುವ ರಿಫಂಡ್‌ ಮೋರ್ಟಾಲಿಟಿ ಶುಲ್ಕದ ಜತೆಗೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ. ವಾರ್ಷಿಕ 30000 ರೂ. ಕನಿಷ್ಠ ಪ್ರೀಮಿಯಂ ಇರುತ್ತದೆ. ತ್ರೈಮಾಸಿಕಕ್ಕೆ ಕನಿಷ್ಠ 15,000 ರೂ. ಪಾವತಿಸಬಹುದು. ಅರ್ಧ ವಾರ್ಷಿಕಕ್ಕೆ ಕನಿಷ್ಠ 7500 ರೂ, ಮಾಸಿಕ 2,500 ರೂ. ಪಾವತಿಸಬೇಕು. 5 ವರ್ಷಗಳ ಲಾಕ್‌ ಇನ್‌ ಪಿರೀಡ್‌ ಇರುತ್ತದೆ. 18ರಿಂದ 65 ವರ್ಷ ವಯಸ್ಸಿನ ಒಳಗಿನವರು ಈ ಯೋಜನೆಯ ಲಾಭ ಪಡೆಯಬಹುದು. ಪಾಲಿಸಿಯ ಅವಧಿ 10-25 ವರ್ಷಗಳು. ಐದನೇ ವರ್ಷದ ಲಾಕ್‌ ಇನ್‌ ಅವಧಿಯ ಬಳಿಕ ಭಾಗಶಃ ಹಿಂತೆಗೆತ ಸಾಧ್ಯ.

ಜೀವ ವಿಮಾ ನಿಗಮವು Life insurance corporation) ಫೆಬ್ರವರಿ 8ರಂದು 2023-24 ಹಣಕಾಸು ವರ್ಷದ ಮಧ್ಯಂತರ ಲಾಭಾಂಶದ (LIC Dividend) ಘೋಷಣೆ ಮಾಡಲಿದೆ. ಮೂರನೇ ತ್ರೈಮಾಸಿಕದ (FY24 Q3) ಫಲಿತಾಂಶಗಳನ್ನು ಅದೇ ದಿನ ಬಿಡುಗಡೆ ಮಾಡುತ್ತದೆ.

ಈ ಬಗ್ಗೆ ಎಲ್‌ಐಸಿ ಆಡಳಿತಾತ್ಮಕ ಅಧಿಸೂಚನೆ ನೀಡಿದೆ. “ಕಾರ್ಪೊರೇಷನ್‌ನ ನಿರ್ದೇಶಕರ ಮಂಡಳಿಯು ತ್ರೈಮಾಸಿಕದಲ್ಲಿ ಲೆಕ್ಕಪರಿಶೋಧನೆ ಮಾಡದ ಹಣಕಾಸು ಫಲಿತಾಂಶಗಳನ್ನು (ಸ್ವತಂತ್ರ ಮತ್ತು ಏಕೀಕೃತ) ಪರಿಗಣಿಸಲು ಮತ್ತು ಅನುಮೋದಿಸಲು ಫೆಬ್ರವರಿ 8, 2024ರಂದು ಸಭೆ ನಡೆಸಲು ನಿರ್ಧರಿಸಲಾಗಿದೆ. ಡಿಸೆಂಬರ್ 31, 2023ರಂದು ಕೊನೆಗೊಂಡ ಒಂಬತ್ತು ತಿಂಗಳ ಅವಧಿಯನ್ನು ಪರಿಗಣಿಸಲಾಗುತ್ತಿದೆ. ನಿರ್ದೇಶಕರ ಮಂಡಳಿಯು 2023-24ರ ಹಣಕಾಸು ವರ್ಷಕ್ಕೆ ಮಧ್ಯಂತರ ಲಾಭಾಂಶವನ್ನು ಘೋಷಿಸುವ ಪ್ರಸ್ತಾಪವನ್ನು ಪರಿಗಣಿಸಬಹುದು” ಎಂದು ಅದರಲ್ಲಿ ತಿಳಿಸಿದೆ.

ಭಾರತೀಯ ಜೀವ ವಿಮಾ ನಿಗಮವು ಆರಂಭಿಕ ಸಾರ್ವಜನಿಕ ಷೇರು ಮಾರಾಟ (IPO) ಆರಂಭಿಸಿದ ಬಳಿಕ ಷೇರುಗಳ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿದ ಕಾರಣ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಆದರೆ, ಎಲ್‌ಐಸಿ ಷೇರುಗಳ ಮೌಲ್ಯವು ಗಣನೀಯವಾಗಿ ಜಾಸ್ತಿಯಾಗಿದ್ದು, ಮಾರ್ಕೆಟ್‌ ಕ್ಯಾಪ್‌ (Market Cap) ದೃಷ್ಟಿಯಿಂದ ಈಗ ಭಾರತದಲ್ಲೇ ಅತಿ ಮೌಲ್ಯಯುತ ಸಾರ್ವಜನಿಕ ವಲಯದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತೀಯ ಸ್ಟೇಟ್‌ ಬ್ಯಾಂಕ್‌ (SBI) ಅನ್ನೂ ಹಿಂದಿಕ್ಕಿ ಎಲ್‌ಐಸಿ ಈ ಸಾಧನೆ ಮಾಡಿದೆ.

ಇದನ್ನೂ ಓದಿ: Narendra Modi: ಬಿಸ್ಸೆನ್ನೆಲ್, ಎಂಟಿಎನ್ನೆಲ್, ಎಚ್ಎಎಲ್, ಏರ್‌ ಇಂಡಿಯಾ ನಾಶ ಮಾಡಿದ್ದೇ ಕಾಂಗ್ರೆಸ್ ಎಂದ ಮೋದಿ

ಎಲ್‌ಐಸಿ ಮಾರುಕಟ್ಟೆ ಕ್ಯಾಪ್‌ (Market capitalization) 5.8 ಲಕ್ಷ ಕೋಟಿ ರೂ. ತಲುಪಿದೆ.. ಹಾಗೆಯೇ, ಎಸ್‌ಬಿಐ ಮಾರುಕಟ್ಟೆ ಕ್ಯಾಪ್‌ (ಬಿಎಸ್‌ಇ) 5.62 ಲಕ್ಷ ಕೋಟಿ ರೂ. ಇರುವುದರಿಂದ ಭಾರತದಲ್ಲಿಯೇ ಎಲ್‌ಐಸಿಯು ಮಾರುಕಟ್ಟೆ ಕ್ಯಾಪ್‌ ಮಾನದಂಡದಲ್ಲಿ ಅತಿ ಹೆಚ್ಚು ಮೌಲ್ಯ ಹೊಂದಿರುವ ಸಾರ್ವಜನಿಕ ವಲಯದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಲ್‌ಐಸಿ ಷೇರು ದರ ಬುಧವಾರ 1049 ರೂ. ನಷ್ಟಿತ್ತು.

Exit mobile version