ಕಳೆದ ಡಿಸೆಂಬರ್‌ನಲ್ಲಿ ನಿಧನರಾದ ಕನ್ನಡದ ಹಿರಿಯ ನಟಿ ಲೀಲಾವತಿ ಅವರ ಪುತ್ರ ಹಾಗೂ ಖ್ಯಾತ ನಟ ವಿನೋದ್ ರಾಜ್ ಅವರು ವೈಯಕ್ತಿಕ ಹಣಕಾಸು ನಿರ್ವಹಣೆಯ ವಿಚಾರದಲ್ಲಿ ಸಾಕಷ್ಟು ತಿಳಿದವರು (Money Plus) ಹಾಗೂ ಅನುಸರಿಸಿ ತಮ್ಮ ಹಲವಾರು ಗುರಿಗಳನ್ನು ಪೂರ್ಣಗೊಳಿಸಿದವರು. ಸಿನಿಮಾ ಕೆಲಸಗಳ ಜತೆ ಜತೆಯಲ್ಲಿ, ಕೃಷಿ, ಸಮಾಜ ಸೇವೆಯಲ್ಲೂ ಸಾಧನೆ ಮಾಡಿದವರು. ವಿಸ್ತಾರ ಮನಿ ಪ್ಲಸ್ ಯೂಟ್ಯೂಬ್ ಚಾನೆಲ್‌ನಲ್ಲಿ ವಿನೋದ್ ರಾಜ್ ಅವರ ಈ ಕುರಿತ ಸಂದರ್ಶನ ಅತ್ಯಂತ ಜನಪ್ರಿಯವಾಗಿದೆ. ಲಕ್ಷಾಂತರ ಮಂದಿ ಈ ಸರಣಿ ಸಂದರ್ಶನವನ್ನು ವೀಕ್ಷಿಸಿದ್ದಾರೆ. ನೀವು ನೋಡಿರದಿದ್ದರೆ ತಪ್ಪದೆ ವೀಕ್ಷಿಸಿ.
ವಿನೋದ್ ರಾಜ್ ಸಂದರ್ಶನದ ಇತ್ತೀಚಿನ ಕಂತಿನಲ್ಲಿ ಅವರು ಮ್ಯೂಚುವಲ್ ಫಂಡ್‌ಗಳಲ್ಲಿ ಹೇಗೆ ಹೂಡಿಕೆ ಮಾಡಿದ್ದಾರೆ. ಅದರಿಂದ ಅವರು ಹಣ ಸಂಪಾದಿಸಿದ್ದೆಷ್ಟು? ಅನುಕೂಲ ಆಗಿದ್ದೇನು ಎಂಬುದರ ಬಗ್ಗೆ ತಿಳಿಯೋಣ.
ಕನ್ನಡದ ಕಂದ ಸಿನಿಮಾ ಮಾಡಲು ನಾವು ಬೆಂಗಳೂರಿಗೆ ಬಂದೆವು. ಇಲ್ಲಿ ನೆಲೆಸಿದೆವು. ತೋಟ ಮಾಡಿದೆವು. ಕಷ್ಟಪಟ್ಟು ಅಮ್ಮ ಲೀಲಾವತಿ ಅವರು ಹಲವು ದಶಕಗಳಿಂದ ಸ್ವಲ್ಪ ಸ್ವಲ್ಪ ಹಣ ಕೂಡಿಟ್ಟ ಸಂಪತ್ತು ಬೆಳೆದಿದೆ. 60 ವರ್ಷಕ್ಕಿಂತಲೂ ಮೊದಲು ಮಾಡಿದ್ದ ಆಸ್ತಿ ಲಕ್ಷ ರೂ.ಗಳಿಂದ ಕೋಟಿ ರೂ.ಗೆ ಬೆಳೆಯಿತು. ಅಮ್ಮ ಎಲ್ಲೋ 1962ನೇ ಇಸವಿಯಲ್ಲಿ ಆಸ್ತಿ ತೆಗೆದುಕೊಂಡಿದ್ದರು. ಬೆಂಗಳೂರಿನ ತೋಟಕ್ಕೆ ಇಪ್ಪತ್ತು ವರ್ಷ ಆಯಿತು. 2005ರಲ್ಲಿ ತಮಿಳುನಾಡಿನಲ್ಲಿದ್ದ ಒಂದೆಕರೆ ಹತ್ತು ಗುಂಟೆ ತೋಟವನ್ನು ಉತ್ತಮ ಬೆಲೆಗೆ ಮಾರಿ ಬೆಂಗಳೂರಿಗೆ ಬಂದೆವು. ಎಬಿಎನ್ ಆಮ್ರೊ ಬ್ಯಾಂಕಲ್ಲಿ ಖಾತೆ ತೆರೆಯುತ್ತೇವೆ. ಆಗ 50 ಲಕ್ಷ ರೂ.ಗಳನ್ನು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುತ್ತೇವೆ. ಎಚ್ ಡಿಎಫ್‌ಸಿ, ಎಚ್‌ಎಸ್‌ಬಿಸಿ, ಫ್ರಾಂಕ್ಲಿನ್ ಟೆಂಪ್ಲೆಂಟನ್, ಎಸ್‌ಬಿಐ ಬ್ಲೂ ಚಿಪ್, ಚೋಳ ಮಂಡಲಂ ಇತ್ಯಾದಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದೆವು. ಇದೆಲ್ಲ ಡಿವಿಡೆಂಡ್ ಸ್ಕೀಮ್‌ಗಳು. ಆರು ತಿಂಗಳು-ಮೂರು ತಿಂಗಳು-ಹನ್ನೆರಡು ತಿಂಗಳಿಗೆ ಡಿವಿಡೆಂಡ್ ಬರುತ್ತಿತ್ತು. ಐವತ್ತು ಲಕ್ಷಕ್ಕೆ ಐವತ್ತು ಲಕ್ಷವನ್ನೂ ಗಳಿಸಿದೆವು. ಅದು 2005-06-07ರಲ್ಲಿ ಹೆವೆನ್ ಆಗಿತ್ತು. ಆಮೇಲೆ ಚಿತ್ರ ನಿರ್ಮಾಣಕ್ಕೆ ಇಳಿದೆವು. ಏಕಾಗ್ರತೆ ವಹಿಸಲು ಆಗಲಿಲ್ಲ ಎಂದು ವಿವರಿಸಿದರು ವಿನೋದ್ ರಾಜ್.