ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು (Money plus) ಫೆಬ್ರವರಿ 1 ರಂದು 2024-25ರ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ನಾನಾ ಕ್ಷೇತ್ರಗಳು ತಮ್ಮದೇ ನಿರೀಕ್ಷೆಗಳನ್ನು ಹೊಂದಿವೆ. ತೆರಿಗೆ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಯ ನಿರೀಕ್ಷೆ ಇಲ್ಲವಾದರೂ, ಜನ ಸಾಮಾನ್ಯರು, ವೇತನದಾರರು, ವೈಯಕ್ತಿಕ ತೆರಿಗೆದಾರರು ಹೊಂದಿರುವ ಕೆಲ ನಿರೀಕ್ಷೆಗಳು ಯಾವುದು ಎಂಬುದನ್ನು ನೋಡೋಣ.
- 1. ಕ್ಯಾಪಿಟಲ್ ಗೇನ್ಸ್ ತೆರಿಗೆಯ ಸುಧಾರಣೆ: ಸರ್ಕಾರವು ಶೇ.10ರ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ಹಾಗೂ ಶೇ.15ರ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಅನ್ನು ಎಲ್ಲ ವಿಧದ ಹಣಕಾಸು ಸಾಧನಗಳಿಗೆ, ಅಂದರೆ ಲಿಸ್ಟೆಡ್, ಅನ್ ಲಿಸ್ಟೆಡ್ ಈಕ್ವಿಟಿಗಳಿಗೆ, ಈಕ್ವಿಟಿ ಆಧರಿತ ಮ್ಯೂಚುವಲ್ ಫಂಡ್‌ಗಳಿಗೆ, ಆರ್‌ಇಐಟಿಗಳಿಗೆ ಅನ್ವಯಿಸುವ ನಿರೀಕ್ಷೆ ಇದೆ.
2. ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯು 50,000 ರೂ.ಗಳಿಂದ 1 ಲಕ್ಷ ರೂ.ಗೆ ಏರಿಕೆಯಾಗುವ ನಿರೀಕ್ಷೆ ಇದೆ. ಈ ಹಿಂದ 2019ರಲ್ಲಿ ಕೊನೆಯ ಬಾರಿಗೆ ಏರಿಕೆಯಾಗಿತ್ತು.
3. ಹೊಸ ಆದಾಯ ತೆರಿಗೆ ಪದ್ಧತಿಯಲ್ಲೂ ಎನ್‌ಪಿಎಸ್ ಹೂಡಿಕೆಗೆ 50,000 ರೂ. ತನಕದ ಹೂಡಿಕೆಗೆ ತೆರಿಗೆ ವಿನಾಯಿತಿ ಕೊಡಬೇಕು ಎಂಬ ನಿರೀಕ್ಷೆ ಇದೆ.
4. ಮನೆಯನ್ನು ಖರೀದಿಸುವ ವೇಳೆ ಟಿಡಿಎಸ್ ನಿಯಮಾವಳಿಯನ್ನು ಸರಳಗೊಳಿಸಬೇಕು. ಎನ್ನಾರೈಗಳಿಂದ ಮನೆ ಖರೀದಿಸುವ ಸಂದರ್ಭ ನಿಯಮಗಳನ್ನು ಸಡಿಲಗೊಳಿಸಬೇಕು ಎಂಬ ಬೇಡಿಕೆ ಇದೆ.
5. ಗೃಹ ಸಾಲದ ಮೇಲಿನ ಬಡ್ಡಿ ದರದ ಮೇಲಿನ ಡಿಡಕ್ಷನ್ ಅನ್ನು 3 ಲಕ್ಷಕ್ಕೆ ಏರಿಸಬೇಕು ಎಂಬ ಬೇಡಿಕೆ ಇದೆ.
6. ಜೀವ ವಿಮೆ ಉತ್ಪನ್ನಗಳಿಗೆ ಸಂಬಂಧಿಸಿ 10 ಲಕ್ಷ ರೂ. ತನಕದ ಪ್ರೀಮಿಯಂ ಮೇಲೆ ತೆರಿಗೆಯನ್ನು ರದ್ದುಪಡಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
7. ಎನ್ನಾರೈಗಳು ಐಟಿಆರ್ ನಿಯಮಗಳ ಸರಳೀಕರಣಕ್ಕೆ ಒತ್ತಾಯಿಸಿದ್ದಾರೆ.
8. ಸೇವಿಂಗ್ಸ್ ಅಕೌಂಟ್‌ಗಳ ಬಡ್ಡಿ ದರದ ಮೇಲೆ 50,000 ರೂ. ತನಕ ಡಿಡಕ್ಷನ್ ಮೂಲಕ ಉಳಿತಾಯವನ್ನು ಆಕರ್ಷಕಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.