ನವ ದೆಹಲಿ: ದೇಶದ ಸಂಘಟಿತ ವಲಯದಲ್ಲಿ ಕಳೆದ ಜುಲೈನಲ್ಲಿ 18 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿದ್ದು, 24.5% ಹೆಚ್ಚಳವಾಗಿದೆ ಎಂದು ಇಪಿಎಫ್‌ಒದ ಅಂಕಿ ಅಂಶಗಳು (Formal job creation) ತಿಳಿಸಿವೆ.
ಆರ್ಥಿಕ ಚಟುವಟಿಕೆಗಳು ಜುಲೈನಲ್ಲಿ ಪ್ರಬಲವಾಗಿ ಚೇತರಿಕೆ ದಾಖಲಿಸಿರುವುದನ್ನು ಇದು ಬಿಂಬಿಸಿದೆ. ಜುಲೈನಲ್ಲಿ 14 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿತ್ತು.
ಇಪಿಎಫ್‌ಒದಲ್ಲಿನ ವೇತನ ಕುರಿತ ಅಂಕಿ ಅಂಶಗಳ ಪ್ರಕಾರ ಉದ್ಯೋಗ ಸೃಷ್ಟಿ ಹೆಚ್ಚಳವಾಗಿರುವುದು ಗೊತ್ತಾಗಿದೆ. ಇಪಿಎಫ್‌ಒ ಮಂಗಳವಾರ ಈ ದತ್ತಾಂಶಗಳನ್ನು ಬಿಡುಗಡೆಗೊಳಿಸಿದೆ.
ಜುಲೈನಲ್ಲಿ ಸೇರ್ಪಡೆಯಾದ 18 ಲಕ್ಷ ಮಂದಿಯಲ್ಲಿ 10.58 ಲಕ್ಷ ಮಂದಿ ಇಪಿಎಫ್‌ಒಗೆ ಮೊದಲ ಬಾರಿಗೆ ಸೇರ್ಪಡೆಯಾಗಿದ್ದಾರೆ. ಈ 10.58 ಲಕ್ಷ ಮಂದಿಯಲ್ಲಿ 57.69% ಮಂದಿ 18-25 ವರ್ಷ ವಯಸ್ಸಿನವರಾಗಿದ್ದಾರೆ.