ನವ ದೆಹಲಿ: ಕಂಪನಿಗಳು ತಮ್ಮ ಬಿಸಿನೆಸ್, ಉದ್ದಿಮೆಯ ಕಾರ್ಯತಂತ್ರಗಳ ಮೂಲಕ ಲಾಭ ಗಳಿಸುತ್ತವೆ. ಹಾಗಾದರೆ ಕಳೆದ 2022-23ರಲ್ಲಿ ಅತಿ ಹಚ್ಚು ಲಾಭ ದಾಖಲಿಸಿದ ಕಂಪನಿಗಳು ಯಾವುದು? ಇಲ್ಲಿದೆ ವಿವರ.
Ace Equity Data ಪ್ರಕಾರ 2023ರಲ್ಲಿ 10 ಭಾರತೀಯ ಕಂಪನಿಗಳ ಲಾಭ 3,56,652 ಕೋಟಿ ರೂ.ಗಳಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಅತಿ ಹೆಚ್ಚು ಲಾಭ ಗಳಿಸಿದ ಕಂಪನಿಯಾಗಿ ಹೊರಹೊಮ್ಮಿದೆ.
ರಿಲಯನ್ಸ್ ಇಂಡಸ್ಟ್ರೀಸ್ (Reliance Industries : ರಿಲಯನ್ಸ್ ಇಂಡಸ್ಟ್ರೀಸ್ ಕಳೆದ 2022-23ರಲ್ಲಿ 74,131 ಕೋಟಿ ರೂ. ಲಾಭ ಗಳಿಸಿದೆ. 2021-22ರಲ್ಲಿ ಕಂಪನಿ 67,565 ಕೋಟಿ ರೂ. ಲಾಭ ಗಳಿಸಿತ್ತು. ರಿಲಯನ್ಸ್‌ನ ಮಾರುಕಟ್ಟೆ ಬಂಡವಾಳ ಮೌಲ್ಯ 16,44,380 ಕೋಟಿ ರೂ.ಗಳಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: (State Bank of India -SBI) : ಎಸ್‌ಬಿಐ 5,11,202 ಕೋಟಿ ರೂ. ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ಹೊಂದಿದೆ. ಎಸ್‌ಬಿಐ ಕಳೆದ ಸಾಲಿನಲ್ಲಿ 56,558 ಕೋಟಿ ರೂ. ಲಾಭ ಗಳಿಸಿದೆ. ಬ್ಯಾಂಕ್ 2021-22ರಲ್ಲಿ 36,356 ಕೋಟಿ ರೂ. ಲಾಭ ಗಳಿಸಿತ್ತು.
ಇದನ್ನೂ ಓದಿ: RIL Q4 Results : ರಿಲಯನ್ಸ್ ಇಂಡಸ್ಟ್ರೀಸ್‌ಗೆ ಜನವರಿ-ಮಾರ್ಚ್‌ನಲ್ಲಿ 19,299 ಕೋಟಿ ರೂ. ನಿವ್ವಳ ಲಾಭ, 19% ಏರಿಕೆ
ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) : ಎಚ್‌ಡಿಎಫ್‌ಸಿ ಬ್ಯಾಂಕ್ 2022-23ರಲ್ಲಿ 46,149 ಕೋಟಿ ರೂ. ಲಾಭ ಗಳಿಸಿತ್ತು. 2021-22ರಲ್ಲಿ 38,151 ಕೋಟಿ ರೂ. ಲಾಭ ಪಡೆದಿತ್ತು.
ಟಿಸಿಎಸ್ (TCS): ಟಾಟಾ ಸಮೂಹದ ಐಟಿ ದಿಗ್ಗಜ ಟಿಸಿಎಸ್ 2022-23ರಲ್ಲಿ 42,303 ಕೋಟಿ ರೂ. ಲಾಭ ಗಳಿಸಿತ್ತು. 2021-22ರಲ್ಲಿ 38,449 ಕೋಟಿ ರೂ. ಲಾಭ ಗಳಿಸಿತ್ತು.
ಐಸಿಐಸಿಐ ಬ್ಯಾಂಕ್ (ICICI Bank): ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ 2022-23ರಲ್ಲಿ 34,463 ಕೋಟಿ ರೂ. ಲಾಭ ಗಳಿಸಿತ್ತು. 2021-22ರಲ್ಲಿ 25,784 ಕೋಟಿ ರೂ. ಲಾಭ ಗಳಿಸಿತ್ತು.
ಕೋಲ್ ಇಂಡಿಯಾ (Coal India): ಸಾರ್ಜನಿಕ ವಲಯದ ಅತಿ ದೊಡ್ಡ ಕಲ್ಲಿದ್ದಲು ಉತ್ಪಾದಕ ಕೋಲ್ ಇಂಡಿಯಾ 2022-23ರಲ್ಲಿ 28,133 ಕೋಟಿ ರೂ. ಲಾಭ ಗಳಿಸಿತ್ತು. 2021-22ರಲ್ಲಿ 17,387 ಕೋಟಿ ರೂ. ಲಾಭ ಗಳಿಸಿತ್ತು.
ಇನ್ಫೋಸಿಸ್ (Infosys): ನಾರಾಯಣಮೂರ್ತಿ ಅವರು 1981ರಲ್ಲಿ ಸ್ಥಾಪಿಸಿದ ಇನ್ಫೋಸಿಸ್ 2022-23ರಲ್ಲಿ 24,108 ಕೋಟಿ ರೂ. ಲಾಭ ಗಳಿಸಿತ್ತು. 2021-22ರಲ್ಲಿ 22,146 ಕೋಟಿ ರೂ. ಲಾಭ ಪಡೆದಿತ್ತು.
ಐಟಿಸಿ (ITC): ಐಟಿಸಿ ಲಿಮಿಟೆಡ್ ಎಫ್‌ಎಂಸಿಜಿ ಕ್ಷೇತ್ರದಲ್ಲಿ ತೊಡಗಿಸಿದ್ದು, 2022-23ರಲ್ಲಿ 19,428 ಕೋಟಿ ರೂ. ಲಾಭ ಗಳಿಸಿತ್ತು. 2021-22ರಲ್ಲಿ 15,486 ಕೋಟಿ ರೂ. ಲಾಭ ಗಳಿಸಿತ್ತು.
ಎಚ್‌ಡಿಎಫ್‌ಸಿ (HDFC): ಖಾಸಗಿ ವಲಯದ ಎಚ್‌ಡಿಎಫ್‌ಸಿ 2022-23ರಲ್ಲಿ 16,534 ಕೋಟಿ ರೂ. ಲಾಭ ಗಳಿಸಿತ್ತು. 2021-22ರಲ್ಲಿ 15,072 ಕೋಟಿ ರೂ. ಲಾಭ ಗಳಿಸಿತ್ತು.
ಎಚ್‌ಸಿಎಲ್ ಟೆಕ್ (HCL Tech): ಎಚ್‌ಸಿಎಲ್ ಟೆಕ್ 2022-23ರಲ್ಲಿ 15,845 ಕೋಟಿ ರೂ. ಲಾಭ ಗಳಿಸಿತ್ತು. 2021-22ರಲ್ಲಿ 13,524 ಕೋಟಿ ರೂ. ಲಾಭ ಪಡೆದಿತ್ತು.