Site icon Vistara News

Muhurt Trading | ಭಾರತೀಯ ಷೇರು ಪೇಟೆಯಲ್ಲಿ ಇಂದು ಸಂಜೆ 6.15-7.15ಕ್ಕೆ ಮುಹೂರ್ತ್‌ ವಹಿವಾಟು

muhurtha trading

ಮುಂಬಯಿ: ದೀಪಾವಳಿ ಹಾಗೂ ಹೊಸ ಸಂವತ್ಸರದ ಆಗಮನದ ಹಿನ್ನೆಲೆಯಲ್ಲಿ ಇಂದು ಸಂಜೆ 6.15ರಿಂದ 7.15ರ ತನಕ ಷೇರುಪೇಟೆಯಲ್ಲಿ ಮುಹೂರ್ತ್‌ ಟ್ರೇಡಿಂಗ್‌ ನಡೆಯುತ್ತದೆ. (Muhurt Trading) ಒಂದು ಗಂಟೆಯ ಕಾಲ ವಿಶೇಷ ವಹಿವಾಟು ನಡೆಯಲಿದೆ.

ನಾಳೆ (ಅಕ್ಟೋಬರ್‌ 25) ಎಂದಿನಂತೆ ಷೇರು ವ್ಯವಹಾರ ನಡೆಯಲಿದೆ. ದೀಪಾವಳಿ ಪ್ರಯುಕ್ತ ಅಕ್ಟೋಬರ್‌ 26ಕ್ಕೆ ಷೇರು ಪೇಟೆಗೆ ರಜಾ ದಿನ.

ಷೇರು, ಕಮಾಡಿಟಿ ಡಿರೈವಟೀಸ್‌, ಕರೆನ್ಸಿ ಡಿರೈವಟೀಸ್‌, ಈಕ್ವಿಟಿ ಫ್ಯೂಚರ್ಸ್‌-ಆಪ್ಷನ್ಸ್‌ ವಹಿವಾಟು ಮಾಡಬಹುದು. ಕಳೆದ 10 ವರ್ಷಗಳಲ್ಲಿ 7 ವರ್ಷ ಮುಹೂರ್ತ್‌ ಟ್ರೇಡಿಂಗ್‌ ದಿನ ಸೆನ್ಸೆಕ್ಸ್‌ ಏರಿಕೆ ದಾಖಲಿಸಿತ್ತು. ಹೂಡಿಕೆದಾರರಿಗೆ ಸಂಭ್ರಮ ಮೂಡಿಸಿತ್ತು. ಹೀಗಾಗಿ ಈ ದಿನ ಶುಭಕರ ಎಂಬ ಭಾವನೆ ದಲಾಲ್‌ ಸ್ಟ್ರೀಟ್‌ ವಹಿವಾಟುದಾರರಲ್ಲಿ ಇದೆ.

Exit mobile version