Site icon Vistara News

Mukesh Ambani | ಐಟಿಸಿ, ಬ್ರಿಟಾನಿಯಾಗೆ ರಿಲಯನ್ಸ್‌ ಸ್ಪರ್ಧೆ, ದಿನಸಿ, ಬೇಳೆಕಾಳು, ಬಿಸ್ಕತ್, ಶ್ಯಾಂಪೂ ಮಾರಾಟಕ್ಕೆ ಲಗ್ಗೆ

reliance

ಮುಂಬಯಿ: ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌ ಇದೀಗ ದಿನಸಿ ವಸ್ತುಗಳು, ಬಿಸ್ಕತ್‌, ಸೋಪು, ಶ್ಯಾಂಪೂ, ಬಾಟಲಿ ಕುಡಿಯುವ ನೀರು, ಅಡುಗೆ ಎಣ್ಣೆ ಇತ್ಯಾದಿ ಉತ್ಪನ್ನಗಳನ್ನು ಉತ್ಪಾದಿಸಿ ಮಾರಾಟ ಮಾಡುವ ಎಫ್‌ಎಂಸಿಜಿ ವಲಯಕ್ಕೆ ಪ್ರವೇಶಿಸಿದೆ.

ರಿಲಯನ್ಸ್‌ ಇಂಡಿಪೆಂಡೆನ್ಸ್‌ ಎಂಬ ಹೆಸರಿನಲ್ಲಿ ರಿಲಯನ್ಸ್‌ ಸಮೂಹ ಇದೀಗ ಗುಜರಾತ್‌ನಲ್ಲಿ ಎನ್ನ ಎಫ್‌ಎಂಸಿಜಿ ಬ್ರಾಂಡ್‌ಗೆ ಚಾಲನೆ ನೀಡಿದೆ. ದೇಶಾದ್ಯಂತ ಈ ಬ್ರಾಂಡ್‌ನ ಉತ್ಪನ್ನಗಳು ಮಾರಾಟವಾಗಲಿದೆ. ಇದರೊಂದಿಗೆ ದೇಶದ ಎಫ್‌ಎಂಸಿಜಿ ಮಾರುಕಟ್ಟೆಯಲ್ಲಿ ( fast moving consumer goods (FMCG) ವಹಿವಾಟು ನಡೆಸಲು ರಿಲಯನ್ಸ್‌ ಸಜ್ಜಾಗಿದೆ.

ರಿಲಯನ್ಸ್‌ ರಿಟೇಲ್‌ನ ನಿರ್ದೇಶಕಿ ಹಾಗೂ ಮುಕೇಶ್‌ ಅಂಬಾನಿಯವರ ಪುತ್ರಿ ಇಶಾ ಅಂಬಾನಿ ಅವರು ರಿಲಯನ್ಸ್‌ ಇಂಡಿಪೆಂಡೆನ್ಸ್‌ ಬ್ರಾಂಡ್‌ ಅನ್ನು ಘೋಷಿಸಿದ್ದಾರೆ. ಗ್ರಾಹಕರಿಗೆ ಅಡುಗೆ ಎಣ್ಣೆ, ಧಾನ್ಯಗೂ, ಸಿದ್ಧಪಡಿಸಿದ ಆಹಾರೋತ್ಪನ್ನಗಳು, ಎಲ್ಲ ದಿನ ಬಳಕೆಯ ವಸ್ತುಗಳನ್ನು ಗುಣಮಟ್ಟ ಸಹಿತ ವಿತರಿಸುವುದು ನಮ್ಮ ಉದ್ದೇಶ ಎಂದು ಹೇಳಿದ್ದಾರೆ. ಈ ಬ್ರಾಂಡ್‌ ನಿಜವಾದ ಭಾರತೀಯ ಶೈಲಿಯದ್ದಾಗಿದ್ದು, ಭಾರತೀಯರ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಿದೆ ಎಂದು ವಿವರಿಸಿದ್ದಾರೆ.

ರಿಲಯನ್ಸ್‌ ರಿಟೇಲ್‌ ವೆಂಚರ್ಸ್‌ ಈಗಾಗಲೇ ರಿಲಯನ್ಸ್‌ ಗ್ರೂಪ್‌ನ ರಿಟೇಲ್‌ ಬಿಸಿನೆಸ್‌ ಜಾಲವಾಗಿದ್ದು, ದೇಶದಲ್ಲಿ 16,500 ಮಳಿಗೆಗಳನ್ನು ಒಳಗೊಂಡಿದೆ. ೨೦ ಲಕ್ಷ ವ್ಯಾಪಾರಿಗಳ ನೆಟ್‌ ವರ್ಕ್‌ ಅನ್ನು ಹೊಂದಿದೆ. ವಾರ್ಷಿಕ 20,000 ಕೋಟಿ ವಹಿವಾಟು ನಡೆಸುತ್ತಿದೆ. ದೇಶದ ಅತಿ ದೊಡ್ಡ ರಿಟೇಲರ್‌ ಎನ್ನಿಸಿದೆ. ಇದೀಗ ರಿಲಯನ್ಸ್‌ ಸಮೂಹದ ಎಫ್‌ಎಂಸಿಜಿ ಬ್ರಾಂಡ್‌ ಈ ಉದ್ದಿಮೆಯನ್ನು ಬೆಳೆಸಲಿದೆ.

Exit mobile version