Site icon Vistara News

Muttiah Muralitharan: ಚಾಮರಾಜನಗರದಲ್ಲಿ ಸಿಹಿತಿಂಡಿ ಘಟಕ; 1,400 ಕೋಟಿ ಹೂಡಿಕೆ ಮಾಡಲಿದ್ದಾರೆ ಲಂಕಾ ಮಾಜಿ ಕ್ರಿಕೆಟಿಗ

Muttiah Muralitharan

ಚಾಮರಾಜನಗರ: ಶ್ರೀಲಂಕಾದ (srilanka) ಮಾಜಿ ಕ್ರಿಕೆಟಿಗ (ex-cricketer) ಮುತ್ತಯ್ಯ ಮುರಳೀಧರನ್ (Muttiah Muralitharan) ಅವರು ಕರ್ನಾಟಕದ (karnataka) ಚಾಮರಾಜನಗರದಲ್ಲಿ (chamarajanagara) ಪಾನೀಯ ಮತ್ತು ಸಿಹಿ ತಿಂಡಿ ಘಟಕವನ್ನು (beverage and confectionery unit) ಸ್ಥಾಪಿಸಲು 1,400 ಕೋಟಿ ರೂ. ಹೂಡಿಕೆ ಮಾಡಲಿದ್ದಾರೆ. ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ (Large and Medium Industries Minister) ಎಂ.ಬಿ. ಪಾಟೀಲ್ (m.b. patil) ಈ ವಿಷಯ ತಿಳಿಸಿದ್ದಾರೆ.

ಕ್ರಿಕೆಟ್ ದಂತಕಥೆ ಮುರಳೀಧರನ್ ಕರ್ನಾಟಕ ಪಾನೀಯ ಘಟಕದಲ್ಲಿ 1,400 ಕೋಟಿ ರೂ. ಹೂಡಿಕೆ ಮಾಡಲು ಆರಂಭದಲ್ಲಿ 230 ಕೋಟಿ ರೂ. ಹೂಡಿಕೆಯೊಂದಿಗೆ ಯೋಜಿಸಲಾಗಿದ್ದ ಯೋಜನೆಯನ್ನು ಈಗ ಒಟ್ಟು 1,000 ರೂ. ಕೋಟಿಗೆ ಪರಿಷ್ಕರಿಸಲಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ 1,400 ಕೋಟಿ ರೂ.ಗೆ ಹೆಚ್ಚಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರು ಚಾಮರಾಜನಗರ ಜಿಲ್ಲೆಯಲ್ಲಿ ತಂಪು ಪಾನೀಯ ಮತ್ತು ಮಿಠಾಯಿ ತಯಾರಿಕಾ ಘಟಕವನ್ನು ಸ್ಥಾಪಿಸಲು ಹಂತ ಹಂತವಾಗಿ 1,400 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಕರ್ನಾಟಕದಲ್ಲಿ ವ್ಯವಹಾರವನ್ನು ವಿಸ್ತರಿಸಲಿದ್ದಾರೆ. ಮುತ್ತಯ್ಯ ಮುರಳೀಧರನ್ ಅವರನ್ನು ಅಭಿನಂದಿಸಿದ ಸಚಿವ ಪಾಟೀಲ್ ಅವರು ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಎಕ್ಸ್ ಮೂಲಕ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಪ್ರಸ್ತುತ 1,000 ಕೋಟಿ ರೂಪಾಯಿ ಉತ್ಪಾದನಾ ಘಟಕವು ಅಭಿವೃದ್ಧಿ ಹಂತದಲ್ಲಿದೆ. ಹೂಡಿಕೆಯನ್ನು 1,400 ಕೋಟಿ ರೂ. ಗೆ ಹೆಚ್ಚಿಸುವ ಯೋಜನೆ ಇದೆ ಎಂದು ಹೇಳಿದ್ದಾರೆ.

ಸಭೆಯು ಸಮನ್ವಯಕ್ಕೆ ಒತ್ತು ನೀಡಿದ್ದು, ಇಲಾಖೆ ಅಧಿಕಾರಿಗಳು ಸಕ್ರಿಯವಾಗಿ ಅಗತ್ಯ ಬೆಂಬಲವನ್ನು ಒದಗಿಸುತ್ತಿದ್ದಾರೆ ಎಂದು ಪಾಟೀಲ್ ಹೇಳಿದರು.


ಪ್ರಸ್ತಾವಿತ ಕಾರ್ಖಾನೆಯನ್ನು ಮುತ್ತಯ್ಯ ಬೆವರೇಜಸ್ ಮತ್ತು ಸಿಹಿ ತಿಂಡಿ ಹೆಸರಿನಲ್ಲಿ ಸ್ಥಾಪಿಸಲಾಗುತ್ತಿದೆ. ಈಗಾಗಲೇ 46 ಎಕರೆ ಭೂಮಿಯನ್ನು ಮಂಜೂರು ಮಾಡಿರುವ ಯೋಜನೆಗೆ ಆರಂಭದಲ್ಲಿ 230 ಕೋಟಿ ರೂ. ಹೂಡಿಕೆಯಲ್ಲಿ ಯೋಜಿಸಲಾಗಿತ್ತು, ಆದರೆ ಹೆಚ್ಚಿನದನ್ನು ಪರಿಷ್ಕರಿಸಲಾಗಿದೆ.

ಇದನ್ನೂ ಓದಿ: Virat Kohli: ಶಾರುಖ್, ಸಲ್ಮಾನ್ ಹಿಂದಿಕ್ಕಿ ಮೌಲ್ಯಯುತ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ ಕಿಂಗ್​ ಕೊಹ್ಲಿ

2025ರ ಜನವರಿಯಲ್ಲಿ ಉತ್ಪಾದನಾ ಕಾರ್ಯಾಚರಣೆ ಆರಂಭವಾಗುವ ನಿರೀಕ್ಷೆಯಿದೆ ಎಂದು ತಿಳಿಸಿರುವ ಸಚಿವರು, ಮಂಜೂರು ಮಾಡಿದ ಭೂಮಿಗೆ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಮುರಳೀಧರನ್ ಅವರು ಮುಂದಿನ ದಿನಗಳಲ್ಲಿ ಧಾರವಾಡದಲ್ಲಿ ಮತ್ತೊಂದು ಘಟಕವನ್ನು ಸ್ಥಾಪಿಸಲು ಯೋಜಿಸಿದ್ದಾರೆ ಎಂಬ ಸಂಗತಿಯನ್ನೂ ಪಾಟೀಲ್ ಬಹಿರಂಗಪಡಿಸಿದ್ದಾರೆ.

Exit mobile version