Site icon Vistara News

Mutual fund : ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲಿನ 11 ಕೆಟಗರಿಗಳ ವಿಶೇಷವೇನು?

cash

ಈಕ್ವಿಟಿ ಮ್ಯೂಚುವಲ್‌ ಫಂಡ್‌ ಯೋಜನೆಗಳ 11 ಕೆಟಗರಿಗಳು ಹಾಗೂ ಅವುಗಳ ವಿಶೇಷತೆಗಳ ಬಗ್ಗೆ ಈ ಅಧ್ಯಾಯದಲ್ಲಿ ತಿಳಿಯೋಣ. ಹಾಗಾದರೆ ಹನ್ನೊಂದು ಈಕ್ವಿಟಿ ಮ್ಯೂಚುವಲ್‌ ಫಂಡ್‌ ಕೆಟಗರಿಗಳು ( Mutual fund ) ಯಾವುದು ಎನ್ನುತ್ತೀರಾ. ಅವುಗಳೆಂದರೆ- ಮಲ್ಟಿ-ಕ್ಯಾಪ್‌, ಲಾರ್ಜ್-ಕ್ಯಾಪ್‌, ಲಾರ್ಜ್‌ ಆಂಡ್‌ ಮಿಡ್-ಕ್ಯಾಪ್‌, ಮಿಡ್-ಕ್ಯಾಪ್‌, ಸ್ಮಾಲ್-ಕ್ಯಾಪ್‌, ಡಿವಿಡೆಂಡ್‌ ಯೀಲ್ಡ್‌, ವಾಲ್ಯೂ/ ಕಾಂಟ್ರಾರಿಯನ್‌, ಫೋಕಸ್ಡ್‌, ಸೆಕ್ಟರಲ್/ಥೀಮ್ಯಾಟಿಕ್‌, ಇಎಲ್‌ಎಸ್‌ಎಸ್‌, ಫ್ಲೆಕ್ಸಿ-ಕ್ಯಾಪ್‌.

ಮಲ್ಟಿ-ಕ್ಯಾಪ್‌ : ಮಲ್ಟಿ ಕ್ಯಾಪ್‌ ಮ್ಯೂಚುವಲ್‌ ಫಂಡ್‌ ಕೆಟಗರಿಯ ಯೋಜನೆಯ ವಿಶೇಷತೆ ಏನೆಂದರೆ, ಹೂಡಿಕೆಯ ಒಟ್ಟು ಮೌಲ್ಯದಲ್ಲಿ 65% ಅನ್ನು ಈಕ್ವಿಟಿ ಮತ್ತು ಸಂಬಂಧಿತ ಸಾಧನಗಳಲ್ಲಿ ಹೂಡಿಕೆ ಮಾಡಲಾಗುವುದು. ಲಾರ್ಜ್-ಮಿಡ್‌ ಮತ್ತು ಸ್ಮಾಲ್-ಕ್ಯಾಪ್‌ ಸ್ಟಾಕ್ಸ್‌ಗಳಲ್ಲಿ ತಲಾ 25% ಹೂಡಿಕೆ ಮಾಡಲಾಗುವುದು.

ಲಾರ್ಜ್-ಕ್ಯಾಪ್:‌ ಲಾರ್ಜ್‌ ಕ್ಯಾಪ್‌ ಮ್ಯೂಚುವಲ್‌ ಫಂಡ್‌ ಕೆಟಗರಿಯ ಯೋಜನೆಗಳಲ್ಲಿ ಒಟ್ಟು ಆಸ್ತಿಯ ಕನಿಷ್ಠ 80% ಪಾಲನ್ನು ಲಾರ್ಜ್-ಕ್ಯಾಪ್‌ ಈಕ್ವಿಟಿ ಮತ್ತು ಸಂಬಂಧಿತ ಸಾಧನಗಳಲ್ಲಿ ಹೂಡಿಕೆ ಮಾಡಲಾಗುವುದು. ಲಾರ್ಜ್‌ ಕ್ಯಾಪ್‌ ಸ್ಟಾಕ್ಸ್‌ಗಳಲ್ಲಿ ಹೆಚ್ಚಾಗಿ ಹೂಡಿಕೆ ಮಾಡಲಾಗುತ್ತದೆ.

ಲಾರ್ಜ್-‌ ಆಂಡ್‌ ಮಿಡ್-ಕ್ಯಾಪ್‌ : ಒಟ್ಟು ಹೂಡಿಕೆಯಲ್ಲಿ 35% ಅನ್ನು ಲಾರ್ಜ್‌ ಮತ್ತು ಮಿಡ್‌ ಕ್ಯಾಪ್‌ ಷೇರುಗಳಲ್ಲಿ ಮತ್ತು ಸಂಬಂಧಿತ ಷೇರುಗಳಲ್ಲಿ ಹೂಡಿಕೆ ಮಾಡಲಾಗುವುದು.

ಮಿಡ್-ಕ್ಯಾಪ್:‌ ಒಟ್ಟು ಆಸ್ತಿಯಲ್ಲಿ 65% ಅನ್ನು ಮಿಡ್-ಕ್ಯಾಪ್‌ ಈಕ್ವಿಟಿ ಮತ್ತು ಸಂಬಂಧಿತ ಸಾಧನಗಳಲ್ಲಿ ಹೂಡಿಕೆ ಮಾಡಬೇಕು. ಇಲ್ಲಿ ಹೆಚ್ಚಾಗಿ ಮಿಡ್‌ ಕ್ಯಾಪ್‌ ಸ್ಟಾಕ್ಸ್‌ಗಳಲ್ಲಿಯೇ ಹೂಡಿಕೆ ಮಾಡಲಾಗುವುದು.

ಸ್ಮಾಲ್-ಕ್ಯಾಪ್‌ : ಒಟ್ಟು ಹೂಡಿಕೆಯಲ್ಲಿ ಸ್ಮಾಲ್‌ -ಕ್ಯಾಪ್‌ ಈಕ್ವಿಟಿ ಮತ್ತು ಸಂಬಂಧಿತ ಸಾಧನಗಳಲ್ಲಿ 65% ಹೂಡಿಕೆಯನ್ನು ಮಾಡಬೇಕು. ಸ್ಮಾಲ್-ಕ್ಯಾಪ್‌ ಸ್ಟಾಕ್ಸ್‌ಗಳಲ್ಲಿ ಇನ್ವೆಸ್ಟ್‌ ಮಾಡುತ್ತಾರೆ.

ಡಿವಿಡೆಂಡ್‌ ಯೀಲ್ಡ್‌ : ಒಟ್ಟು ಹೂಡಿಕೆಯಲ್ಲಿ 65% ಅನ್ನು ಡಿವಿಡೆಂಡ್‌ ಯೀಲ್ಡಿಂಗ್‌ ಷೇರುಗಳಲ್ಲಿ ಹೂಡಿಕೆ ಮಾಡುತ್ತಾರೆ. ಡಿವಿಡೆಂಡ್‌ ತರುವ ಸ್ಟಾಕ್ಸ್‌ಗಳಲ್ಲಿಯೇ ಹೆಚ್ಚು ಹೂಡಿಕೆ ಮಾಡುತ್ತಾರೆ.

ವಾಲ್ಯೂ/ ಕಾಂಟ್ರಾ: ಒಟ್ಟು ಹೂಡಿಕೆಯಲ್ಲಿ 65% ಭಾಗವನ್ನು ವಾಲ್ಯೂ ಸ್ಟಾಕ್ಸ್‌ ಅಥವಾ ಕಾಂಟ್ರಾರಿಯನ್‌ ಷೇರುಗಳಲ್ಲಿ ಹೂಡಿಕೆ ಮಾಡುತ್ತಾರೆ. ವಾಲ್ಯೂ ಸ್ಟಾಕ್ಸ್‌ಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಲಾಗುತ್ತದೆ.

ಫೋಕಸ್ಡ್‌ : ಒಟ್ಟು ಆಸ್ತಿಯಲ್ಲಿ 65% ಅನ್ನು ಗರಿಷ್ಠ 30 ಸ್ಟಾಕ್ಸ್‌ಗಳಲ್ಲಿ ಹೂಡಿಕೆ ಮಾಡಲಾಗುವುದು. ಲಾರ್ಜ್‌, ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಫಂಡ್‌ಗಳಲ್ಲಿ ಹೂಡಿಕೆಯ ಮಿಶ್ರಣವನ್ನು ಇಲ್ಲಿ ಕಾಣಬಹುದು.

ಇದನ್ನೂ ಓದಿ: Mutual fund : 2,500ಕ್ಕೂ ಹೆಚ್ಚು ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳಲ್ಲಿ ಆಯ್ಕೆ ಮಾಡಿಕೊಳ್ಳುವುದು ಹೇಗೆ?

ಇಎಲ್‌ಎಸ್‌ಎಸ್‌ : ನಿರ್ದಿಷ್ಟ ಈಕ್ವಿಟಿ ಮತ್ತು ಸಂಬಂಧಿತ ಹೂಡಿಕೆಯ ಸಾಧನಗಳಲ್ಲಿ 80% ಹೂಡಿಕೆಯನ್ನು ಇಲ್ಲಿ ಕಾಣಬಹುದು. ಈ ಸ್ಕೀಮ್‌ನಲ್ಲಿ ಮೂರು ವರ್ಷಗಳ ಲಾಕ್‌ ಇನ್‌ ಅವಧಿ ಇರುತ್ತದೆ. ಸೆಕ್ಷನ್‌ 80 ಸಿ ಅಡಿಯಲ್ಲಿ ಡಿಡಕ್ಷನ್‌ ಸೌಲಭ್ಯ ಸಿಗುತ್ತದೆ.

ಫ್ಲೆಕ್ಸಿ ಕ್ಯಾಪ್:‌ ಫ್ಲೆಕ್ಸಿ ಕ್ಯಾಪ್‌ ಮ್ಯೂಚುವಲ್‌ ಫಂಡ್‌ ಯೋಜನೆಗಳಲ್ಲಿ ಒಟ್ಟು ಹೂಡಿಕೆಯಲ್ಲಿ 65% ಪಾಲನ್ನು ಈಕ್ವಿಟಿ ಮತ್ತು ಸಂಬಂಧಿತ ಆಸ್ತಿಗಳಲ್ಲಿ ಹೂಡಿಕೆ ಮಾಡುತ್ತಾರೆ. ಲಾರ್ಜ್‌, ಮಿಡ್‌, ಸ್ಮಾಲ್‌ ಕ್ಯಾಪ್‌ ಷೇರುಗಳಲ್ಲಿ ಹೆಚ್ಚಿನ ಹೂಡಿಕೆ ಸಾಮಾನ್ಯ.

Exit mobile version