Site icon Vistara News

Mutual funds : 10 ವರ್ಷದಲ್ಲಿ 2 ಕೋಟಿ ರೂ. ಗಳಿಸಲು ಎಷ್ಟು ಹೂಡಿಕೆ ಮಾಡಬೇಕು?

Mutual fund

ಮಂಗಳೂರಿನ ಸದಾಶಿವ ಎಂಬುವರು ಮ್ಯೂಚುವಲ್‌ ಫಂಡ್‌ಗಳಲ್ಲಿ, ‌ (Mutual funds ) ಮುಂದಿನ ಹತ್ತು ವರ್ಷಗಳಲ್ಲಿ ಪ್ರತಿ ತಿಂಗಳು 60,000 ರೂ. ಸಿಪ್‌ ಹೂಡಿಕೆ ಮಾಡಿ 2 ಕೋಟಿ ರೂ. ಸಂಪತ್ತನ್ನು ಸೃಷ್ಟಿಸಲು ಬಯಸಿದ್ದಾರೆ. ಇದು ಸಾಧ್ಯವೇ? ಸಾಧ್ಯವಿದ್ದರೆ ಯಾವ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಬಹುದು ಎಂದು ಕೇಳಿದ್ದಾರೆ.

ಈ ಪ್ರಶ್ನೆಗೆ ತಜ್ಞರ ಉತ್ತರ ಇಂತಿದೆ: ನಿಮ್ಮ ಹೂಡಿಕೆಗೆ ವಾರ್ಷಿಕ 12% ಬಡ್ಡಿ ಸಿಕ್ಕಿದರೂ 10 ವರ್ಷಗಳಲ್ಲಿ 2 ಕೋಟಿ ರೂ. ಸಿಗಬೇಕಿದ್ದರೆ ತಿಂಗಳಿಗೆ 86,081 ರೂ.ಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ನಿಮಗೆ ಎಷ್ಟು ಸಾಧ್ಯವಾಗುತ್ತದೆಯೋ, ಅಷ್ಟು ಹೂಡಿಕೆ ಮಾಡಿ, ನಿಮ್ಮ ವೇತನ ಹೆಚ್ಚಿದಂತೆ ಹೂಡಿಕೆಯ ಮೊತ್ತವನ್ನೂ ಏರಿಸಿ. ಈ ಕಾರ್ಯತಂತ್ರ ಪ್ರಯೋಜನಕಾರಿಯಾಗುತ್ತದೆ.

ಇದನ್ನೂ ಓದಿ: Suburban Rail: ಬೆಂಗಳೂರು ಉಪನಗರ ರೈಲು; ಜರ್ಮನಿಯ ಬ್ಯಾಂಕ್‌ ಜತೆ ಕೆ-ರೈಡ್‌ ಒಪ್ಪಂದ

ಮ್ಯೂಚುವಲ್‌ ಫಂಡ್‌ಗಳಲ್ಲಿ ಜನ ತಮ್ಮ ಗುರಿ ಮತ್ತು ರಿಸ್ಕ್‌ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಆಧರಿಸಿ ಹೂಡಿಕೆ ಮಾಡಬಹುದು. ನೀವು ಮಧ್ಯಮ ಪ್ರಮಾಣದಲ್ಲಿ ರಿಸ್ಕ್‌ ತೆಗೆದುಕೊಂಡು ಹೂಡಿಕೆಮಾಡಲು ಬಯಸುತ್ತಿದ್ದರೆ ಫ್ಲೆಕ್ಸಿ ಕ್ಯಾಪ್‌ ಮ್ಯೂಚುವಲ್‌ ಫಂಡ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳು ನಾನಾ ಬಗೆಯ ಮಾರುಕಟ್ಟೆ ಬಂಡವಾಳ ಇರುವ ಸೆಕ್ಟರ್‌ಗಳಲ್ಲಿ ಹಾಗೂ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ.

ಹೂಡಿಕೆದಾರರು ಹೆಚ್ಚು ರಿಟರ್ನ್‌ ಗಳಿಸುವ ಹಪಹಪಿಯಲ್ಲಿ ತೀರಾ ರಿಸ್ಕ್‌ ತೆಗೆದುಕೊಳ್ಳಬಾರದು. ಕೆಲವರು ಆತುರಪಟ್ಟು ಹೆಚ್ಚು ರಿಸ್ಕ್‌ ಇರುವ ಫಂಡ್‌ ಗಳಲ್ಲಿ ಹೂಡಿಕೆ ಮಾಡಿ ನಷ್ಟ ಅನುಭವಿಸುತ್ತಾರೆ.

ಸಾರ್ವಜನಿಕ ವಲಯದ ಉದ್ದಿಮೆ ಸಂಸ್ಥೆಗಳಿಗೆ ತಮ್ಮಲ್ಲಿರುವ ಹೆಚ್ಚುವರಿ ಹಣವನ್ನು ಖಾಸಗಿ ವಲಯದ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ( PSU Investment ) ಹಣಕಾಸು ಸಚಿವಾಲಯ ಇತ್ತೀಚೆಗೆ ಅನುಮತಿ ನೀಡಿದೆ. ಇದುವರೆಗೆ ಎಸ್‌ಬಿಐ, ಯುಟಿಐ, ಎಲ್‌ಐಸಿ ಮತ್ತು ಕೇಂದ್ರ ಸರ್ಕಾರ ಮಾತ್ರ ಪಿಎಸ್‌ಯುಗಳ ಹೆಚ್ಚುವರಿ ಹಣದ ಹೂಡಿಕೆ ಕುರಿತ ನಿರ್ಧಾರ ತೆಗೆದುಕೊಳ್ಳಲು ಅವಕಾಶ ಇತ್ತು. ಇದರ ಪರಿಣಾಮ ಸಾರ್ವಜನಿಕ ವಲಯದ ಕಂಪನಿಗಳಿಗೆ ನಿಗದಿತ ಆದಾಯ ಹೂಡಿಕೆ ಯೋಜನೆಗಳ ಹೊರತಾಗಿ ಹೆಚ್ಚಿನ ಆದಾಯ ಗಳಿಸಲು ಆಯ್ಕೆ ಸಿಕ್ಕಂತಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಖಾಸಗಿ ವಲಯದ ಕನಿಷ್ಠ 35 ಮ್ಯೂಚುವಲ್‌ ಫಂಡ್‌ಗಳಿಗೆ ಹೂಡಿಕೆಯ ಹರಿವು ಹೆಚ್ಚಳಕ್ಕೂ ಇದು ಸಹಕಾರಿಯಾಗಲಿದೆ.

Exit mobile version