Site icon Vistara News

Sudha Murthy : ನನ್ನ ಮಗಳು ಗಂಡನನ್ನು ಪ್ರಧಾನಿ ಮಾಡಿದ್ದಾಳೆ: ಸುಧಾಮೂರ್ತಿ ಬಣ್ಣನೆ

My daughter made her husband the Prime Minister Sudha Murthy

#image_title

ಬೆಂಗಳೂರು: ನಮ್ಮ ಅಳಿಯ ಪಂಜಾಬಿ. ಅವರ ಕುಟುಂಬದ ಪೂರ್ವಜರು 15೦ ವರ್ಷದಿಂದ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದಾರೆ. ಅವನು ತುಂಬ ಧಾರ್ಮಿಕ ವ್ಯಕ್ತಿ. ಮದುವೆ ಆದ ಮೇಲೆ ಗುರುವಾರ ಉಪವಾಸ ಮಾಡುತ್ತಾನೆ. ರಾತ್ರಿ ಹೊತ್ತು ಮಾತ್ರ ಊಟ ಮಾಡುತ್ತಾನೆ. (Sudha Murthy) ಯಾಕೆಂದರೆ ಅದು ಹೆಂಡ್ತಿ ಮಹಿಮೆ. ಹೆಂಡತಿ ಗಂಡನನ್ನು ಹೇಗೆ ಬದಲಿಸಬಹುದು ನೋಡ್ರಿ. ಆದ್ರೆ ನಾನು ಮಾತ್ರ ನನ್ನ ಯಜಮಾನರನ್ನ ಚೇಂಜ್‌ ಮಾಡ್ಲಿಕ್ಕೆ ಸಾಧ್ಯವಾಗಲಿಲ್ಲ. ನಾನು ನನ್ನ ಗಂಡನನ್ನು ಬಿಸಿನೆಸ್‌ ಮ್ಯಾನ್‌ ಮಾಡಿದ್ದೇನೆ. ನನ್ನ ಮಗಳು ತನ್ನ ಗಂಡನನ್ನು (UK Prime Minister Rishi Sunak) ಪ್ರೈಮ್‌ ಮಿನಿಸ್ಟರ್‌ ಮಾಡಿದ್ದಾಳೆ.

ಹೀಗೆ ಲಘು ಹರಟೆಯಲ್ಲಿ ನಕ್ಕು ನಗಿಸುತ್ತಾ ವಿರಾಮದಲ್ಲಿ ಹೇಳಿದವರು ಇನ್ಫೋಸಿಸ್ ಫೌಂಡೇಷನ್‌ನ ಅಧ್ಯಕ್ಷೆ ಸುಧಾ ಮೂರ್ತಿ. ಇತ್ತೀಚೆಗೆ ಆಪ್ತರೊಡನೆ ಕುಶಲೋಪರಿ ವಿಚಾರಿಸುತ್ತಿದ್ದ ಸಂದರ್ಭ ಮಗಳು ಅಕ್ಷತಾ ಮೂರ್ತಿ (Akshata Murthy) ಅವರು ತಮ್ಮ ಪತಿ ಹಾಗೂ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಯೋಗಕ್ಷೇಮದ ಬಗ್ಗೆ ಪ್ರಸ್ತಾಪಿಸಿದರು. ರಿಷಿ ಸುನಕ್‌ ಅವರು 2009ರಲ್ಲಿ ಬೆಂಗಳೂರಿನಲ್ಲಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿದ್ದರು.

ಮಂತ್ರಾಲಯದ ಗುರು ರಾಘವೇಂದ್ರ ರಾಯರ ಭಕ್ತರಾಗಿರುವ ನಾರಾಯಣ ಮೂರ್ತಿ ದಂಪತಿ ಇನ್ಫೋಸಿಸ್‌ ಅನ್ನೂ ಗುರುವಾರ ಆರಂಭಿಸಿದ್ದರು. ಮೂರ್ತಿ ಕುಟುಂಬದಲ್ಲಿ ಗುರುವಾರಕ್ಕೆ ವಿಶೇಷ ಮಹತ್ವ ನೀಡುತ್ತಿದ್ದುದನ್ನು ಸುನಕ್‌ ಅವರೂ ಗಮನಿಸಿದ್ದರು. ಆಗ ರಾಘವೇಂದ್ರ ಸ್ವಾಮಿಗಳ ಆರಾಧಕರಾಗಿರುವುದನ್ನು ತಿಳಿದುಕೊಂಡಿದ್ದರು. ನನ್ನ ಅಳಿಯನ ಅಮ್ಮ ಪ್ರತಿ ಸೋಮವಾರ ಉಪವಾಸ ಮಾಡುತ್ತಾರೆ. ಆದರೆ ಅಳಿಯ ಗುರುವಾರ ಉಪವಾಸ ಮಾಡುತ್ತಾನೆ ಎಂದು ಸುಧಾಮೂರ್ತಿ ವಿವರಿಸಿದ್ದಾರೆ.

ಒಟ್ಟಾರೆಯಾಗಿ ಯಾವುದೇ ಕುಟುಂಬದಲ್ಲಿ ಹೆಣ್ಣು ಮಕ್ಕಳು ಪ್ರಭಾವಶಾಲಿಯಾಗಿರುತ್ತಾರೆ. ಪತಿಯ ಸಾಧನೆಯಲ್ಲಿ ಪತ್ನಿಯ ಪಾತ್ರ ಮತ್ತು ಪ್ರಭಾವ ದೊಡ್ಡದಿರುತ್ತದೆ ಎಂಬುದನ್ನು ಸುಧಾಮೂರ್ತಿ ಅವರು ಹೆಮ್ಮೆಯಿಂದ ಹೇಳಿದರು.

Exit mobile version