ಬೆಂಗಳೂರು: ಕೆಎಂಎಫ್‌ನ ನಂದಿನಿ ಹಾಲಿನ ದರದಲ್ಲಿ (Nandini milk price) ಲೀಟರ್‌ಗೆ 2-3 ರೂ. ಏರಿಕೆಯಾಗುವ ಸಾಧ್ಯತೆ ಇದೆ.
ಇಂದು ಸಂಜೆ 5ಕ್ಕೆ ಪಶುಸಂಗೋಪನೆ ಸಚಿವರ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಲಿದ್ದಾರೆ.
ಕಳೆದ ವಾರದ ಆದೇಶಕ್ಕೆ ಸಿಎಂ ತಡೆ ಹಿಡಿದಿದ್ದರು. ಆಗ ಪ್ರತಿ ಲೀಟರ್ ಹಾಲಿನ ಮೇಲೆ 3 ರೂಪಾಯಿ ಏರಿಕೆ ಮಾಡಲಾಗಿತ್ತು. ಪ್ರತಿ ಕೆಜಿ ಮೊಸರಿನ ಮೇಲೆ 3 ರೂಪಾಯಿ ಏರಿಸಲಾಗಿತ್ತು. ಈ ಹಿನ್ನೆಲೆ ಇಂದು ಸಂಜೆ 5 ಗಂಟೆಗೆ ಸಭೆ ನಿಗದಿಯಾಗಿದೆ.
ಏರಿಕೆಯಾಗಲಿರುವ ದರವನ್ನು ನೇರವಾಗಿ ರೈತರಿಗೆ ತಲುಪಿಸುವುದಾಗಿ ಕೆಎಂಎಫ್ ತಿಳಿಸಿದೆ.