Site icon Vistara News

NDTV | ಎನ್‌ಡಿಟಿವಿ ವಾರ್ಷಿಕ ಮಹಾ ಸಭೆ ಸೆಪ್ಟೆಂಬರ್‌ 27ಕ್ಕೆ ಮುಂದೂಡಿಕೆ

ndtv prannoy roy

ನವ ದೆಹಲಿ: ಅದಾನಿ ಗ್ರೂಪ್‌ನಿಂದ ೨೬% ಷೇರು ಖರೀದಿಸುವ ಆಫರ್‌ ಹಿನ್ನೆಲೆಯಲ್ಲಿ ಎನ್‌ಡಿಟಿವಿ (NDTV ) ತನ್ನ ವಾರ್ಷಿಕ ಮಹಾ ಸಭೆಯನ್ನು (ಎಜಿಎಂ) ಸೆಪ್ಟೆಂಬರ್‌ ೨೭ಕ್ಕೆ, ಅಂದರೆ ಒಂದು ವಾರ ಮುಂದೂಡಿದೆ.

ಎಜಿಎಂ ಅನ್ನು ಸೆಪ್ಟೆಂಬರ್‌ ೨೦ರಂದು ನಡೆಸಲು ಉದ್ದೇಶಿಸಲಾಗಿತ್ತು. ಕಳೆದ ವಾರ ಅದಾನಿ ಗ್ರೂಪ್‌ ಎನ್‌ಡಿಟಿವಿಯಲ್ಲಿನ ೨೯.೧೮ ಷೇರುಗಳನ್ನು ಪರೋಕ್ಷವಾಗಿ ಖರೀದಿಸಿತ್ತು. ಜತೆಗೆ ೨೬% ಹೆಚ್ಚುವರಿ ಷೇರುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸುವ ಆಫರ್‌ ಅನ್ನು ಮುಂದಿಟ್ಟಿತ್ತು.

ಎನ್‌ಡಿಟಿವಿಯ ೩೪ನೇ ಎಜಿಎಂ ೨೦೨೨ರ ಸೆಪ್ಟೆಂಬರ್‌ ೨೦ರಿಂದ ಸೆಪ್ಟೆಂಬರ್‌ ೨೭ಕ್ಕೆ ಮುಂದೂಡಿಕೆಯಾಗಿದೆ. ಅದಾನಿ ಗ್ರೂಪ್‌ನ ಅಧೀನ ಸಂಸ್ಥೆಯಾದ ವಿಸಿಪಿಎಲ್‌ ೨೬% ಷೇರುಗಳನ್ನು ಖರೀದಿಸುವ ಆಫರ್‌ ಮುಂದಿಟ್ಟಿರುವ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗಿದೆ ಎಂದು ಎನ್‌ ಡಿಟಿವಿ, ಷೇರು ವಿನಿಮಯ ಕೇಂದ್ರಕ್ಕೆ ತಿಳಿಸಿದೆ.

ಎಜಿಎಂ ಸೆ.೨೭ರಂದು ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಯಲಿದೆ. ಎನ್‌ಡಿಟಿವಿಯ ಪ್ರವರ್ತಕ ಸಂಸ್ಥೆ ಆರ್‌ಆರ್‌ಪಿಆರ್‌ ಹೋಲ್ಡಿಂಗ್‌ ಪ್ರೈವೇಟ್‌ ಲಿಮಿಟೆಡ್‌, ವಿಸಿಪಿಎಲ್‌ನಿಂದ ೨೦೦೯-೧೦ರಲ್ಲಿ ೪೦೩ ಕೋಟಿ ರೂ. ಸಾಲವನ್ನು ಪಡೆದಿತ್ತು. ಒಪ್ಪಂದದ ಪ್ರಕಾರ ಸಾಲ ಮರು ಪಾವತಿಸದಿದ್ದರೆ ಸಾಲವನ್ನು ಷೇರುಗಳಾಗಿ ಪರಿವರ್ತಿಸಬಹುದಿತ್ತು. ಆರ್‌ಆರ್‌ಪಿಆರ್‌ ಸಾಲವನ್ನು ಮರುಪಾವತಿಸದಿದ್ದುದರಿಂದ ವಿಸಿಪಿಎಲ್‌, ವಾರಂಟ್‌ ಹೊರಡಿಸಿ ಸಾಲವನ್ನು ಷೇತುಗಳನ್ನಾಗಿಸಿತ್ತು. ಈಗ ಎನ್‌ಡಿಟಿವಿಯ ಪ್ರವರ್ತಕರು, ತಮ್ಮ ಅನುಮತಿ ಇಲ್ಲದೆ ಇದು ನಡೆದಿದೆ ಎಂದಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಸೆಬಿಯು ಪ್ರಣಯ್‌ ರಾಯ್‌ ಮತ್ತು ರಾಧಿಕಾ ರಾಯ್‌ ವಿರುದ್ಧ ಷೇರು ಮಾರುಕಟ್ಟೆ ವ್ಯವಹಾರ ಮಾಡದಂತೆ ಎರಡು ವರ್ಷಗಳ ನಿಷೇಧ ವಿಧಿಸಿತ್ತು. ಹೀಗಾಗಿ ಸೆಬಿಯ ಅನುಮತಿ ಬೇಕು ಎಂದೂ ಪ್ರಣಯ್‌ ರಾಯ್‌ ಹೇಳಿದ್ದಾರೆ.ಆದರೆ ಸಾಲದ ಒಪ್ಪಂದದ ಪ್ರಕಾರ ವಿಸಿಪಿಎಲ್‌ ನಡೆದುಕೊಂಡಿದೆ ಎಂದು ಅದಾನಿ ಗ್ರೂಪ್‌ ಸಮರ್ಥಿಸಿದೆ.

ಇದನ್ನೂ ಓದಿ: Brand story | NDTV: ದೇಶದ ಮೊದಲ 24×7 ನ್ಯೂಸ್‌ ಚಾನೆಲ್ ಈಗ ಸುದ್ದಿಯಲ್ಲಿ!

Exit mobile version