Site icon Vistara News

NDTV Adani deal | ಎನ್‌ಡಿಟಿವಿಗೆ ಅದಾನಿ ಮಾಲೀಕ, ಪ್ರಣಯ್‌ ರಾಯ್‌ ದಂಪತಿಯಿಂದ 602 ಕೋಟಿ ರೂ.ಗೆ ಷೇರು ಮಾರಾಟ

ndtv prannoy roy

ನವ ದೆಹಲಿ: ಎನ್‌ಡಿಟಿವಿಯ ಸಂಸ್ಥಾಪಕರಾದ ಪ್ರಣಯ್‌ ರಾಯ್‌ ಮತ್ತು ರಾಧಿಕಾ ರಾಯ್‌ ಅವರು ಸಂಸ್ಥೆಯಲ್ಲಿನ ತಮ್ಮ 27.26% ಷೇರುಗಳನ್ನು ಅದಾನಿ ಗ್ರೂಪ್‌ಗೆ ಮಾರಾಟ ಮಾಡಿದ್ದು, ಇದಕ್ಕೆ ಪ್ರತಿಯಾಗಿ 602 ಕೋಟಿ ರೂ.ಗಳನ್ನು ಗಳಿಸಿದ್ದಾರೆ. ಇದರೊಂದಿಗೆ ಎನ್‌ಡಿಟಿಯ ಮಾಲಿಕತ್ವ ಹಾಗೂ ಪೂರ್ಣ ನಿಯಂತ್ರಣ ಇದೀಗ (NDTV Adani deal ) ಅದಾನಿ ಸಮೂಹಕ್ಕೆ ಲಭಿಸಿದೆ.

ಪ್ರಣಯ್‌ ರಾಯ್‌ ದಂಪತಿ ಪ್ರತಿ ಷೇರಿಗೆ 342 ರೂ. ದರದಲ್ಲಿ ಷೇರುಗಳನ್ನು ಮಾರಾಟ ಮಾಡಿದ್ದಾರೆ. 294 ರೂ.ಗಳ ಆಫರ್‌ ದರವನ್ನು ಅದಾನಿ ಸಮೂಹ ಪ್ರಕಟಿಸಿತ್ತು. ಪ್ರಣಯ್‌ ರಾಯ್‌ ಅವರು ಎನ್‌ಡಿಟಿವಿಯಲ್ಲಿ 5% ಷೇರುಗಳನ್ನು ಹೊಂದಲಿದ್ದು, ಅದರ ಮೌಲ್ಯ 110 ಕೋಟಿ ರೂ.ಗಳಾಗಿದೆ.

ಎನ್‌ಡಿಟಿವಿಯ ಪ್ರವರ್ತಕ ಸಂಸ್ಥೆಯಾದ ಆರ್‌ಆರ್‌ಪಿಆರ್‌ 27.26% ಷೇರುಗಳನ್ನು ಹೊಂದಿತ್ತು. ಈ ಷೇರುಗಳ ಖರೀದಿಯೊಂದಿಗೆ ಎನ್‌ಡಿಟಿವಿಯಲ್ಲಿ ಅದಾನಿ ಎಂಟರ್‌ ಪ್ರೈಸಸ್‌ನ ಷೇರು ಪಾಲು 29.18%ರಿಂದ 56.45%ಕ್ಕೆ ಏರಿಕೆಯಾಗಿದೆ. ಅದಾನಿ ಸಮೂಹದ ಭಾಗವಾಗಿರುವ ವಿಶ್ವ ಪ್ರಧಾನ್‌ ಕಮರ್ಶಿಯಲ್‌ 8.27% ಷೇರುಗಳನ್ನು ಹೊಂದಿದೆ. ಹೀಗಾಗಿ ಅದಾನಿ ಎಂಟರ್‌ಪ್ರೈಸಸ್‌ ಒಟ್ಟಾರೆ 64.72% ಷೇರುಗಳನ್ನು ತನ್ನದಾಗಿಸಿದೆ. ಮಾಲಿಕತ್ವ ಬದಲಾವಣೆಯೊಂದಿಗೆ ಪ್ರಣಯ್‌ ರಾಯ್‌ ದಂಪತಿ ಮತ್ತು ಇತರ ನಾಲ್ವರು ನಿರ್ದೇಶಕರು ಎನ್‌ಡಿಟಿವಿಗೆ ರಾಜೀನಾಮೆ ನೀಡಿದ್ದಾರೆ. ಬಿಎಸ್‌ಇನಲ್ಲಿ ಶುಕ್ರವಾರ ಎನ್‌ಡಿಟಿವಿ ಷೇರು ದರ 345 ರೂ. ಆಸುಪಾಸಿನಲ್ಲಿತ್ತು.

Exit mobile version