Site icon Vistara News

NDTV | ಎನ್‌ಡಿಟಿವಿ ಖರೀದಿಸಲು ಗೌತಮ್‌ ಅದಾನಿಗೆ ಸೆಬಿ ಒಪ್ಪಿಗೆ, ಹಾದಿ ಸುಗಮ

Adani stocks

ಮುಂಬಯಿ: ಬಿಲಿಯನೇರ್‌ ಉದ್ಯಮಿ ಗೌತಮ್‌ ಅದಾನಿಗೆ ಎನ್‌ಡಿಟಿವಿ (NDTV) ಚಾನೆಲ್‌ ಅನ್ನು ಖರೀದಿಸಲು ಹಾದಿ ಮತ್ತಷ್ಟು ಸುಗಮವಾಗಿದೆ. ಎನ್‌ಡಿಟಿವಿಯಲ್ಲಿ ಹೆಚ್ಚುವರಿ 26% ಷೇರುಗಳನ್ನು ಖರೀದಿಸಲು ಮಾರುಕಟ್ಟೆ ನಿಯಂತ್ರಕ ಸೆಬಿ ಅನುಮೋದನೆ ಕೊಟ್ಟಿದೆ.

ಇದರೊಂದಿಗೆ ಎನ್‌ಡಿಟಿವಿಯನ್ನು ಸ್ವಾಧೀನಪಡಿಸುವ ನಿಟ್ಟಿನಲ್ಲಿ ಗೌತಮ್‌ ಅದಾನಿಗೆ ಭಾರಿ ಮುನ್ನಡೆ ಲಭಿಸಿದಂತಾಗಿದೆ. ಕಂಪನಿಯ ಸಂಸ್ಥಾಪಕ ಪ್ರಣಯ್‌ ರಾಯ್‌ಗೆ ಹಿನ್ನಡೆಯಾಗಿದೆ.

ಅದಾನಿ ಗ್ರೂಪ್‌, ಎನ್‌ಡಿಟಿವಿಯಲ್ಲಿನ ಹೆಚ್ಚುವರಿ 26% ಷೇರುಗಳನ್ನು ಖರೀದಿಸಲು ಕಂಪನಿಯ ಷೇರುದಾರರಿಗೆ ಮುಕ್ತ ಆಫರ್‌ ನೀಡಿತ್ತು. ಡಿಸೆಂಬರ್‌ 5ಕ್ಕೆ ಇದರ ಅವಧಿ ಮುಕ್ತಾಯವಾಗಲಿದೆ.

ಕಳೆದ ಆಗಸ್ಟ್‌ನಲ್ಲಿ ಎನ್‌ಡಿಟಿವಿಯಲ್ಲಿನ 29.18% ಷೇರುಗಳನ್ನು ಅದಾನಿ ಗ್ರೂಪ್‌, ಪರೋಕ್ಷವಾಗಿ ಖರೀದಿಸಿತ್ತು. ಈ ನಡೆಯನ್ನು ಎನ್‌ಡಿಟಿವಿ ಸಂಸ್ಥಾಪಕ ಪ್ರಣಯ್‌ ರಾಯ್‌ ಹಾಗೂ ರಾಧಿಕಾ ರಾಯ್‌ ವಿರೋಧಿಸಿದ್ದರು. ಪ್ರತಿ ಷೇರಿಗೆ 294 ರೂ.ಗಳಂತೆ ಖರೀದಿಸುವ ಪ್ರಸ್ತಾಪವನ್ನು ಅದಾನಿ ಗ್ರೂಪ್‌ ಮುಂದಿಟ್ಟಿತ್ತು.

Exit mobile version