ನವ ದೆಹಲಿ: ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ಶೀಘ್ರದಲ್ಲಿಯೇ (Netflix Password Sharing) ಪಾಸ್ ವರ್ಡ್ ಶೇರ್ ಮಾಡುವ ಸೌಲಭ್ಯ ಅಂತ್ಯವಾಗಲಿದೆ.
ವಿಡಿಯೊ ಸ್ಟ್ರೀಮಿಂಗ್ ಆ್ಯಪ್ ಮುಂಬರುವ ಏಪ್ರಿಲ್‌ನಿಂದ ಹೊಸ ಪಾಸ್ ವರ್ಡ್ ಹಂಚಿಕೆ ನಿಯಮಾವಳಿಗಳನ್ನು ಜಾರಿಗೊಳಿಸಲಿದೆ. ಹಾಗೂ ಪಾಸ್ ವರ್ಡ್ ಶೇರ್ ಮಾಡಲು ಶುಲ್ಕ ಸಂಗ್ರಹಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ನೆಟ್ ಫ್ಲಿಕ್ಸ್ ಅನ್ನು ಇತರರಿಗೆ ಹಂಚಿಕೊಳ್ಳಲು ಬಯಸುವುದಿದ್ದರೆ, ಹೆಚ್ಚಿನ ಹಣ ಪಾವತಿಸಿ ಸೇವೆ ವಿತರಿಸಲು ಕಂಪನಿ ಸೂಕ್ತ ಯೋಜನೆಯನ್ನು ಏಪ್ರಿಲ್‌ನಿಂದ ಜಾರಿಗೊಳಿಸಲಿದೆ ಎಂದು ವರದಿಯಾಗಿದೆ. ನೆಟ್‌ಫ್ಲಿಕ್ಸ್‌ನ ಸಹ ಸಂಸ್ಥಾಪಕ ರೀಡ್ ಹೇಸ್ಟಿಂಗ್ಸ್ ಅವರು ಸಿಇಒ ಹುದ್ದೆಯಿಂದ ಕೆಳಗಿಳಿಯಲಿದ್ದು, ಟೆಡ್ ಸರಾನಡೋಸ್ ಹೊಸ ಯೋಜನೆಯ ವಿವರಗಳನ್ನು ನೀಡುವ ನಿರೀಕ್ಷೆ ಇದೆ.
ಭಾರತೀಯ ಬಳಕೆದಾರರ ಮೇಲೆ ಪರಿಣಾಮ?: ಹೊಸ ನಿಯಮಾವಳಿಗಳ ವಿವರಗಳು ಇನ್ನೂ ಪ್ರಕಟವಾಗಿಲ್ಲ. ಆದರೆ ಏಪ್ರಿಲ್ ಬಳಿಕ ನೆಟ್ ಫ್ಲಿಕ್ಸ್ ಬಳಕೆದಾರರು ಪಾಸ್ ವರ್ಡ್ ಶೇರ್ ಮಾಡಲು ಶುಲ್ಕ ಪಾವತಿಸಬೇಕಾಗಿ ಬರಬಹುದು ಎಂದು ವರದಿಯಾಗಿದೆ.