Site icon Vistara News

New Financial Rules: ಜೂನ್ 1ರಿಂದ ಏನೆಲ್ಲಾ ಬದಲಾವಣೆಗಳಾಗಲಿವೆ ಗೊತ್ತಿದೆಯೆ?

New Financial Rules

ಮೇ ತಿಂಗಳಾಂತ್ಯದಲ್ಲಿ ಈಗ ನಾವಿದ್ದೇವೆ. ಹೀಗಾಗಿ ಮುಂದಿನ ತಿಂಗಳ ಆರಂಭದಿಂದಲೇ ವಿವಿಧ ಹಣಕಾಸು ನಿಯಮಗಳು (New Financial Rules) ಬದಲಾಗಲಿದೆ. ಜೂನ್ 1ರಿಂದ (june) ಯಾವೆಲ್ಲ ಹೊಸ ನಿಯಮಗಳು ಬರಲಿದೆ, ಹಣಕಾಸು ಕಾನೂನಿನಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿದೆ ಎಂಬ ಕುರಿತು ಮಾಹಿತಿ ಇಲ್ಲಿದೆ.

2024ರ ಜೂನ್ 1ರಿಂದ ಐದು ಪ್ರಮುಖ ಆರ್ಥಿಕ ಬೆಳವಣಿಗೆಗಳು ಸಂಭವಿಸುತ್ತಿವೆ. ಇದರಲ್ಲಿ ಮುಖ್ಯವಾಗಿ ಹೊಸ ಹಣಕಾಸು ನಿಯಮಗಳು ಜಾರಿಗೆ ಬರಲಿದೆ. ಅವುಗಳಲ್ಲಿ ಹಣಕಾಸು ನಿಯಮ (Financial Changes), ಎಲ್ ಪಿಜಿ ದರ (LPG Cylinder Prices), ಸಂಚಾರ ನಿಯಮ (New Traffic Rules), ಆಧಾರ್ ಕಾರ್ಡ್ (Aadhaar card update) ನವೀಕರಣ ಸೇರಿವೆ.

ಎಲ್ ಪಿ ಜಿ ಸಿಲಿಂಡರ್ ಬೆಲೆಗಳು

ತೈಲ ಮಾರುಕಟ್ಟೆ ಕಂಪೆನಿಗಳು ಪ್ರತಿ ತಿಂಗಳ ಮೊದಲನೇ ದಿನ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ನಿಗದಿ ಪಡಿಸುತ್ತದೆ ಎಂಬುದನ್ನು ಗಮನಿಸುವುದು ಅತ್ಯಗತ್ಯ. ಮೇ ತಿಂಗಳಲ್ಲಿ ಸಂಸ್ಥೆಗಳು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿದವು. ಆದರೂ ತೈಲ ಸಂಸ್ಥೆಗಳು ಜೂನ್ 1 ರಂದು ಮತ್ತೆ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಲಿವೆ.

ತೈಲ ಮಾರುಕಟ್ಟೆ ಕಂಪೆನಿಗಳು ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ನಿರ್ಧರಿಸುತ್ತವೆ. 14 ಕೆ.ಜಿ. ದೇಶೀಯ ಮತ್ತು 19 ಕೆ.ಜಿ. ವಾಣಿಜ್ಯ ಸಿಲಿಂಡರ್‌ಗಳ ಬೆಲೆ, ಸಿಎನ್‌ಜಿ ಮತ್ತು ಪಿಎನ್‌ಜಿ ಬೆಲೆಗಳಲ್ಲಿ ಜೂನ್ ಮೊದಲನೇ ತಾರೀಖಿನಂದು ಬದಲಾವಣೆ ಆಗುತ್ತವೆ.

ಬ್ಯಾಂಕುಗಳಿಗೆ ರಜೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬಿಡುಗಡೆ ಮಾಡಿದ ಬ್ಯಾಂಕ್ ಹಾಲಿಡೇ ಪಟ್ಟಿಯ ಪ್ರಕಾರ ಜೂನ್‌ನಲ್ಲಿ 10 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇದು ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರದ ರಜಾದಿನಗಳನ್ನು ಒಳಗೊಂಡಿದೆ. ಆದರೆ ಈ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ.


ಡ್ರೈವಿಂಗ್ ಲೈಸೆನ್ಸ್ ನಿಯಮ

ಹೊಸ ಡ್ರೈವಿಂಗ್ ಲೈಸೆನ್ಸ್ ನಿಯಮಗಳು ಜೂನ್ ತಿಂಗಳಿನಿಂದ ಅನ್ವಯವಾಗಲಿದೆ. ಹೊಸ ನಿಯಮದ ಪ್ರಕಾರ ಅತೀ ವೇಗದಲ್ಲಿ ವಾಹನ ಚಲಾಯಿಸಿದರೆ 1000ರಿಂದ 2000 ರೂ.ವರೆಗೆ ದಂಡ ತೆರಬೇಕಾಗಬಹುದು. ಅದೇ ಸಮಯದಲ್ಲಿ, ಪರವಾನಗಿ ಇಲ್ಲದೆ ವಾಹನ ಚಲಾಯಿಸಿದರೆ 500 ರೂ ದಂಡವನ್ನು ಪಾವತಿಸಬೇಕಾಗುತ್ತದೆ.
ಇದಲ್ಲದೇ ಚಾಲಕ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದರೆ ದಂಡದ ಮೊತ್ತ ಈಗ ಇರುವುದಕ್ಕಿಂತ ಹೆಚ್ಚಾಗುತ್ತದೆ.

ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು 18 ವರ್ಷ ಪೂರ್ಣಗೊಂಡಿರಬೇಕು ಎಂಬುದು ಹಳೆಯ ನಿಯಮ. ಹೊಸ ನಿಯಮಗಳ ಅಡಿಯಲ್ಲಿ ಅಪ್ರಾಪ್ತರು ವಾಹನ ಚಲಾಯಿಸಿದರೆ 25,000 ರೂ.ವರೆಗೆ ದಂಡ ವಿಧಿಸಲಾಗುತ್ತದೆ.

ಜೂನ್ 1ರಿಂದ ಆರ್ ಟಿಒ ಗಳಿಗಿಂತ ಖಾಸಗಿ ಡ್ರೈವಿಂಗ್ ತರಬೇತಿ ಕೇಂದ್ರಗಳಲ್ಲಿ ಡ್ರೈವಿಂಗ್ ಪರೀಕ್ಷೆಯನ್ನು ನಡೆಸಬಹುದು. ಅಲ್ಲದೇ ಅಪ್ರಾಪ್ತ ವಯಸ್ಕರು ಚಾಲನೆ ಮಾಡುವಾಗ ಅಪಘಾತ ಉಂಟು ಮಾಡಿದರೆ ಅವರು 25 ವರ್ಷ ವಯಸ್ಸಿನವರೆಗೆ ಚಾಲನಾ ಪರವಾನಗಿಯನ್ನು ಪಡೆಯಲು ಅರ್ಹರಾಗಿರುವುದಿಲ್ಲ. ಹೆಚ್ಚುವರಿಯಾಗಿ, ಅವರ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳಬಹುದು. ಅವರ ಪೋಷಕರನ್ನು ಜೈಲಿಗೆ ಕಳುಹಿಸಲಾಗುತ್ತದೆ.

ಇದನ್ನೂ ಓದಿ: Money Guide: 1 ಕೋಟಿ ರೂ. ದುಡಿಯಬೇಕೆ? ಈ ಅಪಾಯ ರಹಿತ ಯೋಜನೆಯಲ್ಲಿ ಹೂಡಿಕೆ ಮಾಡಿ


ಆಧಾರ್ ಕಾರ್ಡ್ ನಿಯಮ

ಜೂನ್ 14 ರ ಮೊದಲು ಆಧಾರ್ ಕಾರ್ಡ್ ಅನ್ನು ನವೀಕರಿಸದಿದ್ದರೆ ಮುಂದೆ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸರಳವಾಗಿ ಹೇಳುವುದಾದರೆ ಜೂನ್ 14 ರ ಅನಂತರ ಆಧಾರ್ ಕಾರ್ಡ್ ನವೀಕರಿಸಲು ಶುಲ್ಕ ವಿಧಿಸಲಾಗುತ್ತದೆ.

ಯುಐಡಿಎಐ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸುವ ದಿನಾಂಕವನ್ನು ಜೂನ್ 14 ರವರೆಗೆ ವಿಸ್ತರಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಆಧಾರ್ ಹೊಂದಿರುವವರು ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಅನ್ನು ಸುಲಭವಾಗಿ ನವೀಕರಿಸಬಹುದು. ಆದರೂ ಆಫ್‌ಲೈನ್ ಅಪ್‌ಡೇಟ್‌ಗಾಗಿ ಜೂನ್ 14 ರ ಬಳಿಕ ಆಧಾರ್ ಕೇಂದ್ರಕ್ಕೆ ಹೋಗುವಾಗ ಪ್ರತಿ ಅಪ್‌ಡೇಟ್‌ಗೆ 50 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Exit mobile version