ನವ ದೆಹಲಿ: ಭಾರತ ಶೀಘ್ರದಲ್ಲಿಯೇ ವೈಮಾನಿಕ ಇಂಧನ ದರ ನಿಗದಿಗೆ ( ಏರ್ ಟರ್ಬೈನ್ ಫ್ಯುಯೆಲ್-ATF) ಹೊಸ ಪದ್ಧತಿಯನ್ನು ಜಾರಿಗೆ ತರಲಿದೆ. ಇದರಿಂದ ಎಟಿಎಫ್ ದರದಲ್ಲಿ ಕನಿಷ್ಠ ೧೫% ಇಳಿಕೆಯಾಗಲಿದೆ ಎಂದು ವರದಿಯಾಗಿದೆ.
ಹೊಸ ಪದ್ಧತಿಯಿಂದ ಎಟಿಎಫ್ ದರದಲ್ಲಿ ೧೫% ಇಳಿಕೆಯಾಗಲಿದ್ದು, ದೇಶಿ ವಿಮಾನಯಾನ ಉದ್ದಿಮೆಗೆ ಪುಷ್ಟಿ ನೀಡಲಿದೆ. ಭಾರತೀಯ ಏರ್‌ಲೈನ್‌ಗಳಿಗೆ ೪೦% ವೆಚ್ಚವು ಎಟಿಎಫ್‌ಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ೧೫% ದರ ಇಳಿಕೆಯಾದರೆ ಏರ್‌ಲೈನ್‌ಗಳಿಗೆ ಗಣನೀಯ ರಿಲೀಫ್ ಸಿಗಲಿದೆ. ಇದರ ಪ್ರಯೋಜನವನ್ನು ಪ್ರಯಾಣಿಕರಿಗೆ ವರ್ಗಾಯಿಸಿದರೆ ಏರ್ ಟಿಕೆಟ್ ದರ ಇಳಿಕೆಯಾಗಲಿದೆ.
ಕಳೆದ ಜನವರಿಯಿಂದ ಎಟಿಎಫ್ ದರದಲ್ಲಿ ೫೦% ಕಡಿತವಾಗಿತ್ತು. ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಏರಿಕೆಯಾದಾಗ ಎಟಿಎಫ್ ದರ ಕೂಡ ಏರಿಕೆಯಾಗುತ್ತದೆ. ನಾಗರಿಕ ವಿಮಾನಯಾನ ಸಚಿವಾಲಯವು ರಾಜ್ಯಗಳ ಜತೆಗೆ ಮಾತುಕತೆ ನಡೆಸಿ ಎಟಿಎಫ್ ಮೇಲಿನ ವ್ಯಾಟ್ ಅನ್ನು ೧-೪%ಕ್ಕೆ ಸೀಮಿತಗೊಳಿಸಲು ಯತ್ನಿಸುತ್ತಿದೆ. ಎಟಿಎಫ್ ಮೇಲಿನ ವ್ಯಾಟ್ ೨೬ ರಾಜ್ಯಗಳಲ್ಲಿ ೧೫-೩೦% ಶ್ರೇಣಿಯಲ್ಲಿದೆ.