ಬೆಂಗಳೂರು/ಮುಂಬಯಿ: ಕಾರ್ಪೊರೇಟ್ ವಲಯದಲ್ಲಿ ಹೊಸ ವರ್ಷ 2023ರಲ್ಲಿ ಮಹಿಳೆಯರಿಗೆ (Jobs for women) ಹೆಚ್ಚಿನ ಉದ್ಯೋಗಾವಕಾಶ ದೊರೆಯುವ ನಿರೀಕ್ಷೆ ಇದೆ.
ಕಾಗ್ನಿಜೆಂಟ್, ಲಾರ್ಸನ್ & ಟೂಬ್ರೊ, ಎಚ್‌ಡಿಎಫ್‌ಸಿ ಬ್ಯಾಂಕ್, ಐಟಿಸಿ, ಕೆಪಿಎಂಜಿ, ಎಕ್ಸಿಸ್ ಬ್ಯಾಂಕ್, ಸಿಪ್ಲಾ, ಪ್ರೊಕ್ಟರ್ & ಗ್ಯಾಂಬಲ್ ಕಂಪನಿಗಳು ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ನೀಡಲು ನಿರ್ಧರಿಸಿವೆ. ಈ ಮೂಲಕ ಉದ್ಯೋಗ ಸ್ಥಳದಲ್ಲಿ ಲಿಂಗ ತಾರತಮ್ಯ ನಿವಾರಿಸಲು ಮುಂದಾಗಿವೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಮುಂದಿನ ವರ್ಷ ಗುಜರಾತ್‌ನಲ್ಲಿ 100 ಹೊಸ ಬ್ಯಾಂಕ್ ಶಾಖೆಗಳನ್ನು ತೆರೆಯಲು ಉದ್ದೇಶಿಸಿದೆ. ಈ ಶಾಖೆಗಳಲ್ಲಿ ಸುಮಾರು 1,000 ಉದ್ಯೋಗ ಸೃಷ್ಟಿ ನಿರೀಕ್ಷಿಸಲಾಗಿದೆ.
ಎಫ್ ಎಂಸಿಜಿ ವಲಯದ ದಿಗ್ಗಜ ಐಟಿಸಿ ಕಂಪನಿಯು ತನ್ನ ಕಾರ್ಖಾನೆಗಳಲ್ಲಿ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಲು ನಿರ್ಧರಿಸಿದೆ. ತಮಿಳುನಾಡಿನ ತಿರುಚ್ಚಿಯಲ್ಲಿನ ಕಂಪನಿಯ ಕಾರ್ಖಾನೆಯಲ್ಲಿ 1,500 ಮಹಿಳೆಯರು ಕೆಲಸ ಮಾಡುತ್ತಾರೆ. ಸುಮಾರು 75% ಮಂದಿ ಮಹಿಳೆಯರು ಕಾರ್ಯ ನಿರ್ವಹಿಸುತ್ತಾರೆ. 2022ರಲ್ಲಿ ಟಿಸಿಎಸ್, ವಿಪ್ರೊ, ರಿಲಯನ್ಸ್ ಇಂಡಸ್ಟ್ರೀಸ್ ಸೇರಿ ಹಲವು ಕಂಪನಿಗಳಲ್ಲಿ ಮಹಿಳೆಯರಿಗೆ ಉದ್ಯೋಗಾವಕಾಶದಲ್ಲಿ ಹೆಚ್ಚಳ ಕಂಡು ಬಂದಿತ್ತು. ಈ ಟ್ರೆಂಡ್ ಮುಂದುವರಿಯುವ ಸಾಧ್ಯತೆ ಇದೆ.
2022ರಲ್ಲಿ ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡಿರುವ ಕಂಪನಿಗಳು: ಟಿಸಿಎಸ್, ವಿಪ್ರೊ, ಎಚ್‌ಸಿಎಲ್, ರಿಲಯನ್ಸ್ ಇಂಡಸ್ಟ್ರೀಸ್, ಟೆಕ್ ಮಹೀಂದ್ರಾ, ಐಸಿಐಸಿಐ ಬ್ಯಾಂಕ್.