Site icon Vistara News

Nifty all time high | ನಿಫ್ಟಿ ಸಾರ್ವಕಾಲಿಕ ಎತ್ತರಕ್ಕೆ ಏರಿಕೆ, 18,606ಕ್ಕೆ ಜಿಗಿತ

NSE

ಮುಂಬಯಿ: ಷೇರು ಮಾರುಕಟ್ಟೆಯಲ್ಲಿ ಎನ್‌ಎಸ್‌ಇ ಸೂಚ್ಯಂಕ ಸೋಮವಾರ ಸಾರ್ವಕಾಲಿಕ ದಾಖಲೆಯ ಎತ್ತರಕ್ಕೇರಿತು. 18,606ಕ್ಕೆ ತಲುಪಿತು. (Nifty all time high) ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಮಧ್ಯಾಹ್ನದ ವೇಳೆಗೆ 375 ಅಂಕ ಏರಿಕೊಂಡು ೬೨,೬೬೮ರ ಮಟ್ಟದಲ್ಲಿತ್ತು.

ತಂತ್ರಜ್ಞಾನ ಕಂಪನಿಗಳು ಹಾಗೂ ತೈಲ ವಲಯದ ಕಂಪನಿಗಳ ಷೇರುಗಳ ದರ ವೃದ್ಧಿಸಿತು. ವಾಯಿದಾ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರದಲ್ಲಿ ಪ್ರತಿ ಬ್ಯಾರೆಲ್‌ಗೆ 2 ಡಾಲರ್ ಇಳಿಯಿತು. ಅಂದರೆ 80.61 ಡಾಲರ್‌ಗೆ ತಗ್ಗಿತು.

ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ದರದಲ್ಲಿ 2.6% ಹೆಚ್ಚಳ ದಾಖಲಾಯಿತು. ೧೦೦ಕ್ಕೂ ಹೆಚ್ಚು ಷೇರುಗಳು ಕಳೆದ 52 ವಾರಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿತು.

Exit mobile version