ಮುಂಬಯಿ: ವಿತ್ತಾಪರಾಧಿ ನೀರವ್ ಮೋದಿ ಪ್ರಮುಖ ಆರೋಪಿಯಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಕುರಿತ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿರುವ ಬಾಂಬೆ ಹೈಕೋರ್ಟ್ ಮಂಗಳವಾರ, ಬ್ಯಾಂಕ್‌ನ ನಿಷ್ಕ್ರಿಯತೆ ಬಗ್ಗೆ ತರಾಟೆಗೆ ತೆಗೆದುಕೊಂಡಿದೆ. ಈ ಹಗರಣದಲ್ಲಿ ಸಾರ್ವಜನಿಕ ನೂರಾರು ಕೋಟಿ ರೂ. ದುಡ್ಡಿನ ಪ್ರಶ್ನೆಯೂ ಇದೆ. ಆದರೆ ಬ್ಯಾಂಕ್ ಯಾವುದೇ ಕ್ರಮವನ್ನು ಇನ್ನೂ ಕೈಗೊಂಡಿಲ್ಲ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಹೀಗೆಯೇ ಆದರೆ ಬ್ಯಾಂಕ್‌ನಿಂದ ಸಾಲ ಬಯಸುವ ಜನ ಸಾಮಾನ್ಯರ ಹಿತವನ್ನು ನೀಡುವವರು ಯಾರು? ಅವರ ಗತಿ ಏನು ಎಂದು ಬಾಂಬೆ ಹೈಕೋರ್ಟ್ ಪ್ರಶ್ನಿಸಿತು. ನೀರವ್ ಮೋದಿ ನಡೆಸಿದ ವರ್ಗಾವಣೆಗಳು, ತೆಗೆದುಕೊಂಡಿದ್ದ ಸಾಲಗಳು ಅನಧಿಕೃತ ಮತ್ತು ಕಾನೂನುಬಾಹಿರ ಎಂಬ ಅರಿವು ಆಗ ಗೊತ್ತಿರಲಿಲ್ಲ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ನ್ಯಾಯಾಲಯಕ್ಕೆ ತಿಳಿಸಿದೆ. ಹೈಕೋರ್ಟ್ ಇ.ಡಿ ಮತ್ತು ಬ್ಯಾಂಕಿಗೆ ಎರಡು ವಾರದೊಳಗೆ ತಮ್ಮ ಅಫಿಡವಿಟ್ ಸಲ್ಲಿಸಲು ಸೂಚಿಸಿದೆ.
ನ್ಯಾಯಮೂರ್ತಿ ರೇವತಿ ಮೊಹಿರೆ, ನ್ಯಾಯಮೂರ್ತಿ ಗೌರಿ ಗೋಡ್ಸೆ ಅವರನ್ನು ಒಳಗೊಂಡಿದ್ದ ಪೀಠವು, ವಿಶೇಷ ಕೋರ್ಟ್ ಹಗರಣಕ್ಕೆ ಸಂಬಂಧಿಸಿ ಮುಟ್ಟುಗೋಲು ಹಾಕಿದ್ದ 9 ಆಸ್ತಿಗಳನ್ನು ಬಿಡುಗಡೆಗೊಳಿಸಲು ನೀಡಿದ್ದ ಆದೇಶವನ್ನು ಪ್ರಶ್ನಿಸಿ ತನಿಖಾ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ಪ್ರಾಪರ್ಟಿಯ ಮೇಲೆ ತನಗೆ ಹಕ್ಕು ಇದೆ ಎಂದು ತನಿಖಾ ಏಜೆನ್ಸಿ ತಿಳಿಸಿತು. ಆದರೆ ಅದು ಬ್ಯಾಂಕಿಗೆ ಸೇರಬೇಕು ಎಂದು ಪಿಎನ್‌ಬಿ ವಾದಿಸಿದೆ.
ಪಿಎಂಎಲ್‌ಎ ವಿಶೇಷ ನ್ಯಾಯಾಲಯವು (prevention of money laundereing act) ಪಿಎಂಎಲ್‌ಎ ಕಾಯಿದೆಯ ಅಡಿಯಲ್ಲಿ 500 ಕೋಟಿ ರೂ. ಮೌಲ್ಯದ 12 ಆಸ್ತಿಗಳನ್ನು ಮುಟ್ಟುಗೋಲಿಗೆ (ಇ.ಡಿ) ತನಿಖಾ ಸಂಸ್ಥೆಗೆ ಅನುಮತಿ ನೀಡಿತ್ತು. ಈ 12 ಆಸ್ತಿಗಳಲ್ಲಿ ಎಲ್ಲದರ ಮೇಲೆಯೂ ತನ್ನ ಹಕ್ಕಿದೆ ಎಂದು ಪಿಎನ್‌ಬಿ ಪ್ರತಿಪಾದಿಸಿದೆ.
: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ನಡೆದಿರುವ 13,000 ಕೋಟಿ ರೂ. ಸಾಲ ಹಗರಣದ ಪ್ರಮುಖ ಆರೋಪಿ, ವಿತ್ತಾಪರಾಧಿ ಜ್ಯುವೆಲ್ಲರ್ ಮೆಹುಲ್ ಚೋಕ್ಸಿ (Mehul Choksi) ವಿರುದ್ಧದ ರೆಡ್ ಕಾರ್ನರ್ ನೋಟಿಸ್ ಅನ್ನು ಇಂಟರ್‌ಪೋಲ್ ಕೈಬಿಟ್ಟಿದೆ. ಇದರಿಂದಾಗಿ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಹಿನ್ನಡೆಯಾದಂತಾಗಿದೆ. ಇಂಟರ್‌ಪೋಲ್ ವೆಬ್‌ಸೈಟ್‌ನಲ್ಲಿ ಈಗ ಚೋಕ್ಸಿ ವಿರುದ್ಧದ ನೋಟಿಸ್ ಇಲ್ಲ ಎಂದು ಅವರ ಪರ ವಕೀಲರಾದ ವಿಜಯ್ ಅಗ್ರವಾಲ್ ತಿಳಿಸಿದ್ದಾರೆ. ಸಿಬಿಐ ಈ ಬಗ್ಗೆ ಹೇಳಿಕೆ ನೀಡಲು ನಿರಾಕರಿಸಿದೆ.
2021ರಲ್ಲಿ ಚೋಕ್ಸಿ ತಮ್ಮನ್ನು ಆಂಡಿಗುವಾ & ಬಾರ್ಬುಡಾದಿಂದ ಡೊಮಿನಿಕಾ ದ್ವೀಪ ರಾಷ್ಟ್ರಕ್ಕೆ ಅಪಹರಿಸುವ ಯತ್ನ ನಡೆದಿದೆ. ಇದರ ಉದ್ದೇಶ ಭಾರತಕ್ಕೆ ಗಡಿಪಾರು ಮಾಡುವುದಾಗಿದೆ ಎಂದು ದೂರಿದ್ದರು. ಮೂಲಗಳ ಪ್ರಕಾರ, ಚೋಕ್ಸಿ ಅವರನ್ನು ಅಪಹರಿಸುವ ಯತ್ನ ನಡೆದಿರುವ ಸಾಧ್ಯತೆ ಇದೆ ಎಂದು ಇಂಟರ್‌ಪೋಲ್ ಕೂಡ ಭಾವಿಸಿದೆ.
ಇದನ್ನೂ ಓದಿ: Nirav Modi | ನೀರವ್ ಮೋದಿ ಅರ್ಜಿ ವಜಾಗೊಳಿಸಿದ ಬ್ರಿಟನ್ ಹೈಕೋರ್ಟ್, ಭಾರತಕ್ಕೆ ಹಸ್ತಾಂತರ ಸನ್ನಿಹಿತ