ನ್ಯೂಯಾರ್ಕ್: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಯೊಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಸೇರಿದಂತೆ 6 ಮಹಿಳೆಯರು ಫೋರ್ಬ್ಸ್ ನಿಯತಕಾಲಿಕೆಯ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 36ನೇ ರ್ಯಾಂಕ್ ಗಳಿಸಿದ್ದು, ಸತತ ನಾಲ್ಕನೇ ಬಾರಿಗೆ ಪಟ್ಟಿಯಲ್ಲಿದ್ದಾರೆ. ನೈಕಾ ಕಂಪನಿಯ ಫಲ್ಗುಣಿ ನಾಯರ್, ಎಚ್ಸಿಎಲ್ ಟೆಕ್ನ ಮುಖ್ಯಸ್ಥೆ ರೋಶ್ನಿ ನಡಾರ್ (53), ಸೆಬಿ ಮುಖ್ಯಸ್ಥೆ ಮಧಾಬಿ ಪುರಿ ಬಚ್ (54), ಉಕ್ಕು ಪ್ರಾಧಿಕಾರದ ಮುಖ್ಯಸ್ಥೆ ಸೋಮ ಮಂಡಲ್ (67) ಪಟ್ಟಿಯಲ್ಲಿದ್ದಾರೆ.