Site icon Vistara News

ನೀತಿ ಆಯೋಗದ ನೂತನ ಅಧ್ಯಕ್ಷರಾಗಿ ಪರಮೇಶ್ವರನ್‌ ಅಯ್ಯರ್‌ ನೇಮಕ

niti ayog ceo parameswaran iyer

ನವದೆಹಲಿ: ನೀತಿ ಆಯೋಗದ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ಪರಮೇಶ್ವರನ್‌ ಅಯ್ಯರ್‌ ನೇಮಕವಾಗಿದ್ದಾರೆ.

ಹಾಲಿ ಸಿಇಒ ಅಮಿತಾಭ್‌ ಕಾಂತ್‌ ಅವರ ಸೇವಾವಧಿ ಜೂನ್‌ ೩೦ಕ್ಕೆ ಮುಕ್ತಾಯವಾಗಲಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅವರ ನೇಮಕವನ್ನು ಘೋಷಿಸಿದೆ. ಅವರ ಅಧಿಕಾರದ ಅವಧಿ ಮುಂದಿನ ಎರಡು ವರ್ಷಗಳಾಗಿವೆ.

ಪರಮೇಶ್ವರನ್‌ ಅಯ್ಯರ್‌ ಅವರು ಉತ್ತರಪ್ರದೇಶದ ೧೯೮೧ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದು, ಕುಡಿಯುವ ನೀರಿನ ಯೋಜನೆಗಳು ಮತ್ತು ನೈರ್ಮಲ್ಯ ಯೋಜನೆಗಳಲ್ಲಿ ಸೇವೆ ಸಲ್ಲಿಸಿ ಗಮನ ಸೆಳೆದಿದ್ದಾರೆ. ಕಳೆದ ವರ್ಷ ಇದೇ ವಿಭಾಗದ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತರಾಗಿದ್ದರು. ವಿಶ್ವಸಂಸ್ಥೆಯ ಕುಡಿಯುವ ನೀರಿನ ಯೋಜನೆಗಳಲ್ಲಿ ಕೆಲಸ ಮಾಡಿದ್ದರು.

Exit mobile version