ನವ ದೆಹಲಿ: ಬ್ಯಾಂಕ್‌ಗಳು ಸಾಲ ಮನ್ನಾ ಅಥವಾ ಒನ್ ಟೈಮ್ ಸೆಟ್ಲ್‌ಮೆಂಟ್ ಮೇಲೆ 10% ಟಿಡಿಎಸ್ (TDS ) ಕಡಿತಗೊಳಿಸಬೇಕಾದ ಅಗತ್ಯ ಇಲ್ಲ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ತಿಳಿಸಿದೆ. ಬ್ಯಾಂಕ್‌ಗಳಿಗೆ ಇದರಿಂದ ನಿರಾಳವಾದಂತಾಗಿದೆ.
ಬ್ಯಾಂಕ್‌ಗಳ ಸಾಲ ಮನ್ನಾ ಅಥವಾ ಒನ್ ಟೈಮ್ ಸೆಟ್ಲ್‌ಮೆಂಟ್ ಎಂದರೆ “ಲಾಭʼ ( Benefit) ಎಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ ಅದರ ಮೇಲೆ ಟಿಡಿಎಸ್ ಅನ್ವಯ ಆಗುವುದಿಲ್ಲ ಎಂದು ಸಿಬಿಡಿಟಿ ತಿಳಿಸಿದೆ.
ಈ ವಿನಾಯಿತಿಯು ಎಲ್ಲ ಸಾರ್ವಜನಿಕ ಹಣಕಾಸು ಸಂಸ್ಥೆಗಳು, ವರ್ಗೀಕೃತ ಬ್ಯಾಂಕ್‌ಗಳು, ಸಹಕಾರ ಬ್ಯಾಂಕ್‌ಗಳು, ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳು, ರಾಜ್ಯ ಹಣಕಾಸು ನಿಗಮಗಳು, ರಾಜ್ಯ ಕೈಗಾರಿಕಾ ಹೂಡಿಕೆ ಸಂಸ್ಥೆಗಳಿಗೆ ಸಿಗಲಿದೆ. ಠೇವಣಿ ತೆಗೆದುಕೊಳ್ಳುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಕೂಡ ವಿನಾಯಿತಿ ಪಡೆದಿದೆ.