ನವ ದೆಹಲಿ: ಕೇಂದ್ರ ಸರ್ಕಾರ 12 ಸಾವಿರ ರೂ.ಗಿಂತ ಕಡಿಮೆ ಬೆಲೆಯ ಚೀನಾದ ಮೊಬೈಲ್ ಫೋನ್‌ಗಳನ್ನು ( Chinese mobile) ನಿಷೇಧಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ಭಾರತದಿಂದ ಸ್ಮಾರ್ಟ್‌ಫೋನ್‌ಗಳ ರಫ್ತನ್ನು ಹೆಚ್ಚಿಸುವಂತೆ ಚೀನಿ ಟೆಲಿಕಾಂ ಕಂಪನಿಗಳಿಗೆ ತಿಳಿಸಲಾಗಿದೆ. ಆದರೆ ಆ ಕಂಪನಿಗಳ 12,000 ರೂ.ಗಿಂತ ಕಡಿಮೆ ದರದ ಮೊಬೈಲ್ ಫೋನ್‌ಗಳ ನಿಷೇಧ ಪ್ರಸ್ತಾಪ ಇಲ್ಲ ಎಂದು ಅವರು ತಿಳಿಸಿದರು.
ಭಾರತೀಯ ಕಂಪನಿಗಳು ಕೂಡ ದೇಶದ ಎಲೆಕ್ಟ್ರಾನಿಕ್ ವಲಯದಲ್ಲಿ ನಿರ್ಣಾಯಕವಾದ ಪಾತ್ರವನ್ನು ವಹಿಸಬೇಕಾಗಿದೆ. ಅವುಗಳಿಗೆ ಉತ್ತೇಜನ ಅಗತ್ಯ. ಹಾಗಂತ ವಿದೇಶಿ ಬ್ರಾಂಡ್‌ಗಳನ್ನು ಹೊರಗಿಡುವ ಪ್ಲಾನ್ ಸರ್ಕಾರಕ್ಕಿಲ್ಲ ಎಂದರು.
ಚೀನಿ ಟೆಲಿಕಾಂ ಕಂಪನಿಗಳು ಭಾರತದಲ್ಲಿ ಹೆಚ್ಚು ಮೊಬೈಲ್‌ಗಳನ್ನು ಉತ್ಪಾದಿಸಿ ರಫ್ತು ಮಾಡಬೇಕು ಎಂದು ನಾವು ಕೇಳಿದ್ದೇವೆ. ಇದರಿಂದ ಸ್ಥಳೀಯ ಕಂಪನಿಗಳ ಹಿತಾಸಕ್ತಿಗೆ ಧಕ್ಕೆಯಾಗುವುದಿಲ್ಲ. ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಬಹುದು ಎಂದರು. ಕೇಂದ್ರ ಸರ್ಕಾರ 12 ಸಾವಿರ ರೂ.ಗಿಂತ ಕಡಿಮೆ ದರದ ಚೀನಿ ಮೊಬೈಲ್‌ಗಳ ಮಾರಾಟಕ್ಕೆ ನಿರ್ಬಂಧ ವಿಧಿಸಬಹುದು ಎಂದು ಇತ್ತೀಚೆಗೆ ವರದಿಯಾಗಿತ್ತು. ಈ ಕುರಿತ ಊಹಾಪೋಹಗಳಿಗೆ ಸಚಿವರು ತೆರೆ ಎಳೆದಿದ್ದಾರೆ.