ನವ ದೆಹಲಿ: ರಾಜ್ಯಗಳಿಗೆ ೨೦೨೨ರ ಜೂನ್ ೩೦ರ ಬಳಿಕ ಜಿಎಸ್‌ಟಿ ನಷ್ಟ ಪರಿಹಾರಕ್ಕೆ ಸಂಬಂಧಿಸಿ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.
ಚಂಡಿಗಢದಲ್ಲಿ ನಡೆದ ಜಿಎಸ್‌ಟಿ ಮಂಡಳಿಯ 47ನೇ ಸಭೆಯ ಬಳಿಕ ಮಾತನಾಡಿದ ಅವರು, ಜಿಎಸ್‌ಟಿ ನಷ್ಟ ಪರಿಹಾರವನ್ನು ಮತ್ತೆ ೫ ವರ್ಷಗಳ ಅವಧಿಗೆ ವಿಸ್ತರಿಸಬೇಕು ಎಂಬ ಮನವಿ ಬಂದಿದೆ. ಆದರೆ ಈ ಕುರಿತು ನಿರ್ಧಾರ ಆಗಿಲ್ಲ ಎಂದು ತಿಳಿಸಿದರು.
ಕೆಲವು ರಾಜ್ಯಗಳು ನಷ್ಟ ಪರಿಹಾರವನ್ನು ಕೆಲ ವರ್ಷ ಮುಂದುವರಿದರೆ ಸಾಕು ಎಂದಿವೆ. ೩-೪ ರಾಜ್ಯಗಳು ಪರಿಹಾರ ವಿತರಣೆಯನ್ನು ಅಂತ್ಯಗೊಳಿಸಬಹುದು ಎಂದೂ ತಿಳಿಸಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಆನ್‌ಲೈನ್ ಗೇಮಿಂಗ್, ಕ್ಯಾಸಿನೊ ಸೇವೆಗಳಿಗೆ ಜಿಎಸ್‌ಟಿ ದರ ಪರಿಷ್ಕರಣೆ ಬಗ್ಗೆ ಸಚಿವರುಗಳ ಗುಂಪಿನ ಸಮಿತಿ ಜುಲೈ ೧೫ರೊಳಗೆ ತನ್ನ ವರದಿ ಸಲ್ಲಿಸಲಿದೆ ಎಂದು ತಿಳಿಸಿದರು.
ದಿನ ನಿತ್ಯ ಬಳಕೆಯ ವಸ್ತುಗಳ ಮೇಲೆ ಜಿಎಸ್‌ಟಿಗೆ ಖರ್ಗೆ ಖಂಡನೆ
ಜಿಎಸ್‌ಟಿ ಮಂಡಳಿಯಲ್ಲಿ ದಿನ ನಿತ್ಯ ಬಳಕೆಯ ನಾನಾ ವಸ್ತುಗಳಿಗೆ ಜಿಎಸ್‌ಟಿ ತೆರಿಗೆ ವಿನಾಯಿತಿ ರದ್ದುಪಡಿಸಿರುವುದಕ್ಕೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಖಂಡಿಸಿದ್ದಾರೆ. ಇದರಿಂದ ಜನ ಸಾಮಾನ್ಯರ ಮೇಲೆ ಬೆಲೆ ಏರಿಕೆಯ ಹೊರೆ ಮತ್ತಷ್ಟು ಹೆಚ್ಚಲಿದೆ. ಅಕ್ಕಿ, ಹಿಟ್ಟು ಇತ್ಯಾದಿ ದಿನ ಬಳಕೆಯ ಆಹಾರ ವಸ್ತುಗಳ ಮೇಲೆಯೂ ಜಿಎಸ್‌ಟಿ ಸಲ್ಲದು ಎಂದಿದ್ದಾರೆ.
ಇದನ್ನೂ ಓದಿ: GST rate hike | ದಿನ ಬಳಕೆಯ ಹಲವು ವಸ್ತು, ಸೇವೆಗಳ ಬೆಲೆ ಏರಿಕೆ ಶೀಘ್ರ, ಯಾವುದು ದುಬಾರಿ?
ಇದನ್ನೂ ಓದಿ: GST rate hike | ದಿನ ಬಳಕೆಯ ಹಲವು ವಸ್ತು, ಸೇವೆಗಳ ಬೆಲೆ ಏರಿಕೆ ಶೀಘ್ರ, ಯಾವುದು ದುಬಾರಿ?