Site icon Vistara News

GST | ಅಕ್ಕಿ, ಗೋಧಿ, ಬೇಳೆ ಕಾಳುಗಳ ಚಿಲ್ಲರೆ ಮಾರಾಟಕ್ಕೆ ಜಿಎಸ್‌ಟಿ ಇಲ್ಲ: ಕೇಂದ್ರ ಸ್ಪಷ್ಟನೆ

loose sale

ನವದಹಲಿ: ದಿನ ಬಳಕೆಯ ಆಹಾರ ವಸ್ತುಗಳ ಮೇಲೆ ೫% ಜಿಎಸ್‌ಟಿ ವಿಧಿಸಿರುವ ಬಗ್ಗೆ ಜನಾಕ್ರೋಶ ಹಾಗೂ ಗೊಂದಲಗಳ ಬೆನ್ನಲ್ಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಗಳವಾರ ಕೆಲವು ಸ್ಪಷ್ಟೀಕರಣಗಳನ್ನು ನೀಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅಕ್ಕಿ, ಗೋಧಿ, ಬೇಳೆಕಾಳುಗಳು, ಮೊಸರು, ಲಸ್ಸಿ ಇತ್ಯಾದಿಗಳ ಚಿಲ್ಲರೆ ಮಾರಾಟಕ್ಕೆ (loose sale) ಜಿಎಸ್‌ಟಿ ಅನ್ವಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಅಂಗಡಿಗಳು, ಶಾಪಿಂಗ್‌ ಮಾಲ್‌ಗಳಲ್ಲಿ ನೀವು ಲೇಬಲ್‌ ಹೊಂದಿರುವ ಮತ್ತು ಪ್ಯಾಕೇಟ್‌ಗಳಲ್ಲಿ ಮಾರಾಟ ಮಾಡುವ ಅಕ್ಕಿ, ಗೋಧಿ, ಮೈದಾ, ರಾಗಿ, ತೊಗರಿ ಇತ್ಯಾದಿಗಳನ್ನೂ ಪಡೆಯಬಹುದು. ದೊಡ್ಡ ಕಂಟೈನರ್‌ಗಳಲ್ಲಿ ಓಪನ್‌ ಆಗಿ ಇಟ್ಟಿರುವ ಇದೇ ಧಾನ್ಯಗಳನ್ನೂ ಕಾಣಬಹುದು. ಕಂಟೈನರ್‌ಗಳಲ್ಲಿ, ಗೋಣಿ ಚೀಲಗಳಲ್ಲಿ ತುಂಬಿ ಮಾರಾಟ ಮಾಡುವ ಆಹಾರ ಧಾನ್ಯ, ಬೇಳೆ ಕಾಳುಗಳಿಗೆ ೫% ಜಿಎಸ್‌ಟಿ ಇರುವುದಿಲ್ಲ.

ತೆರಿಗೆ ವಂಚನೆ ತಡೆಗಾಗಿ ನಿರ್ಧಾರ: ಜಿಎಸ್‌ಟಿ ಮಂಡಳಿಯಲ್ಲಿ ಯಾವುದೇ ಒಬ್ಬ ಸದಸ್ಯರಿಂದ ತೀರ್ಮಾನಗಳನ್ನು ತೆಗೆದುಕೊಳ್ಳುವುದಿಲ್ಲ. ಇತ್ತೀಚೆಗೆ ಮಂಡಳಿಯ ೪೭ನೇ ಸಭೆಯಲ್ಲಿ ನಿರ್ದಿಷ್ಟ ಆಹಾರ ಧಾನ್ಯಗಳನ್ನು, ಬೇಳೆ ಕಾಳುಗಳನ್ನು, ಹಿಟ್ಟುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಲು ನಿರ್ಧರಿಸಲಾಗಿತ್ತು. ಇದರ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳು ಉಂಟಾಗಿವೆ. ಆದರೆ ‌ಆಹಾರ ಧಾನ್ಯಗಳ ಮಾರಾಟದಲ್ಲಿ ತೆರಿಗೆ ವಂಚನೆ ತಡೆಗಾಗಿ ಈ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಸರಣಿ ಟ್ವೀಟ್‌ಗಳ ಮೂಲಕ ತಿಳಿಸಿದ್ದಾರೆ.

ಈ ಹಿಂದೆ ಹಲವು ರಾಜ್ಯಗಳು ಇದೇ ರೀತಿ ತೆರಿಗೆ ಹಾಕಿದ್ದವು. ಇದು ಹೊಸತೇನಲ್ಲ. ಆದರೆ ತೆರಿಗೆಯನ್ನು ತೆಗೆದಿದ್ದರಿಂದಾಗಿ ವ್ಯಾಪಾರಸ್ಥರಿಂದ ವಂಚನೆ ಆಗುತ್ತಿತ್ತು. ಜಿಎಸ್ ಟಿ ಆದಾಯವೂ ಕುಸಿತವಾಗಿತ್ತು. ಇಂತಹ ದುರ್ಬಳಕೆಯ ತಡೆಗಾಗಿಯೇ ಎಲ್ಲ ಪ್ಯಾಕೇಜ್ಡ್​ ಸರಕುಗಳ ಮೇಲೆ ಏಕರೂಪವಾಗಿ ಜಿಎಎಸ್‌ಟಿ ವಿಧಿಸುವಂತೆ ಪ್ರಾಮಾಣಿಕ ತೆರಿಗೆದಾರರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಹೀಗಾಗಿಯೇ ಜಿಎಎಸ್‌ಟಿ ವಿಧಿಸುವ ನಿರ್ಧಾರ ಕೈಗೊಳ್ಳಲಾಯಿತೆಂದು ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಂಡಿದ್ದಾರೆ.

ಕೆಳಕಂಡ ಆಹಾರ ಧಾನ್ಯಗಳ ಚಿಲ್ಲರೆ ಮಾರಾಟಕ್ಕೆ ಜಿಎಸ್‌ಟಿ ಇಲ್ಲ

HSNಆಹಾರ ಧಾನ್ಯ
0713ಬೇಳೆ ಕಾಳುಗಳು
1001ಗೋಧಿ
1002ಸಣ್ಣ ಗೋಧಿ
1004ಓಟ್ಸ್
1005ಜೋಳ
1006ಅಕ್ಕಿ
1001ಗೋಧಿ ಹಿಟ್ಟು
1103ಸೂಜಿ/ ರವೆ
1106ಕಡ್ಲೆ ಹುಡಿ
1904ಮಂಡಕ್ಕಿ
0403ಮೊಸರು/ಲಸ್ಸಿ

ಕೇಂದ್ರ ಸರ್ಕಾರದ ಏಕಪಕ್ಷೀಯ ತೀರ್ಮಾನವಲ್ಲ
ರಾಜ್ಯಗಳ ಜತೆಗಿನ‌ ಸಭೆಯಲ್ಲಿ ತೆರಿಗೆ ದುರುಪಯೋಗ ತಡೆಗೆ ಕ್ರಮಕೈಗೊಳ್ಳಬೇಕೆಂಬ ಬೇಡಿಕೆ ಇತ್ತು
ಈ ಹಿನ್ನೆಲೆಯಲ್ಲಿ ಜಿಎಎಸ್‌ಟಿ ಮಂಡಳಿಯ 47ನೇ ಸಭೆಯಲ್ಲಿ ನಿರ್ದಿಷ್ಟ ಆಹಾರ ಧಾನ್ಯಗಳಿಗೆ ಜಿಎಸ್‌ಟಿ ನಿಗದಿಪಡಿಸಲು ನಿರ್ಧರಿಸಲಾಯಿತು. ಇದು ಸರ್ವಾನುಮತದ ತೀರ್ಮಾನವೇ ಹೊರತು ಕೇಂದ್ರ ಸರ್ಕಾರದ ಏಕಪಕ್ಷೀಯ ತೀರ್ಮಾನವಲ್ಲ ಎಂದು ವಿತ್ತ ಸಚಿವರು ಹೇಳಿದ್ದಾರೆ.

Exit mobile version