Site icon Vistara News

KYC Update | ಕೆವೈಸಿ ಅಪ್‌ಡೇಟ್‌ ಮಾಡಲು ಬ್ಯಾಂಕ್‌ಗೆ ಹೋಗಬೇಕಿಲ್ಲ: ಆರ್‌ಬಿಐ

kyc

ಮುಂಬಯಿ: ಬ್ಯಾಂಕ್‌ ಖಾತೆದಾರರು ಈಗಾಗಲೇ ಸೂಕ್ತ ಗುರುತಿನ ದಾಖಲೆ ನೀಡಿದ್ದರೆ ಹಾಗೂ ವಿಳಾಸ ಬದಲಾಗಿರದಿದ್ದರೆ, ಕೆವೈಸಿ (Know your customer) ಅಪ್‌ಡೇಟ್‌ ಮಾಡುವ ಸಲುವಾಗಿ ಬ್ಯಾಂಕ್‌ ಶಾಖೆಗೆ ಹೋಗಬೇಕಾದ ಅಗತ್ಯ ಇಲ್ಲ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (KYC Update) ತಿಳಿಸಿದೆ.

ಕೆವೈಸಿ ಮಾಹಿತಿಗಳಲ್ಲಿ ಯಾವುದೇ ಬದಲಾವಣೆ ಇರದಿದ್ದರೆ, ಇ-ಮೇಲ್‌ ಮೂಲಕ ಸೆಲ್ಫ್‌ ಡಿಕ್ಲರೇಶನ್‌ ಮಾಡಬಹುದು. ನೋಂದಾಯಿತ ಮೊಬೈಲ್‌ ಸಂಖ್ಯೆ, ಎಟಿಎಂ ಅಥವಾ ಇತರ ಡಿಜಿಟಲ್‌ ವಿಧಾನಗಳ ಮೂಲಕ ಸೆಲ್ಫ್‌ ಡಿಕ್ಲರೇಷನ್‌ ಅನ್ನು ಸಲ್ಲಿಸಬಹುದು ಎಂದು ಆರ್‌ಬಿಐ ತಿಳಿಸಿದೆ.

ಬ್ಯಾಂಕ್‌ಗಳು ಕೆವೈಸಿ ಅಪ್‌ಡೇಟ್‌ ಮಾಡಿಸಿಕೊಳ್ಳಲು ಶಾಖೆಗೆ ಭೇಟಿ ನೀಡುವಂತೆ ಬಲವಂತ ಮಾಡಬಾರದು. ಯಾವುದೇ ಬದಲಾವಣೆ ಇರದಿದ್ದರೆ ಸೆಲ್ಫ್‌ ಡಿಕ್ಲರೇಶನ್‌ ಮೂಲಕ ಕೆವೈಸಿ ಪರಿಷ್ಕರಣೆಯನ್ನು ಮಾಡಬಹುದು ಎಂದು ಆರ್‌ಬಿಐ ತಿಳಿಸಿದೆ.

ವಿಳಾಸದಲ್ಲಿ ಬದಲಾವಣೆ ಇದ್ದರೆ ಇ-ಮೇಲ್‌, ಆನ್‌ಲೈನ್‌ ಮೂಲಕವೂ ಸೂಕ್ತ ದಾಖಲಾತಿಗಳನ್ನು ಸಲ್ಲಿಸಿ ಬದಲಿಸಬಹುದು. ಎರಡು ತಿಂಗಳಿನೊಳಗೆ ಬ್ಯಾಂಕ್‌ ಇದರ ವೆರಿಫಿಕೇಶನ್‌ ನಡೆಸುತ್ತದೆ. ಇದರಿಂದಾಗಿ ಗ್ರಾಹಕರಿಗೆ ಕೆವೈಸಿ ಪರಿಷ್ಕರಣೆ ಸುಲಭವಾಗಲಿದೆ.‌ 2022 ಡಿಸೆಂಬರ್‌ ತನಕ ಗ್ರಾಹಕರು ಬ್ಯಾಂಕ್‌ ಕಚೇರಿಗೆ ವೈಯಕ್ತಿಕವಾಗಿ ತೆರಳಿ ಕೆವೈಸಿ ಮಾಹಿತಿ ನೀಡಬೇಕಾಗುತ್ತಿತ್ತು.

Exit mobile version