Site icon Vistara News

Sugar production : ಸಕ್ಕರೆ ದಾಸ್ತಾನಿಗೆ ಯಾವುದೇ ಕೊರತೆ ಇಲ್ಲ: ಕೇಂದ್ರ ಸರ್ಕಾರ

sugar

ನವ ದೆಹಲಿ: ದೇಶೀಯ ಅಗತ್ಯಗಳಿಗೆ ಬೇಕಾಗುವಷ್ಟು ಸಕ್ಕರೆ (sugar production) ದಾಸ್ತಾನು ಇದೆ ಎಂದು ಆಹಾರ ಸಚಿವಾಲಯವು ಸೋಮವಾರ ಸಂಜೆ ತಿಳಿಸಿದೆ. ವರ್ಷದುದ್ದಕ್ಕೂ ಯುಕ್ತದರದಲ್ಲಿ ಸಕ್ಕರೆ ಪೂರೈಸಲು ಸಾಕಾಗುವಷ್ಟು ಸಂಗ್ರಹ ಇದೆ. 2022-23( ಅಕ್ಟೋಬರ್-ಸೆಪ್ಟೆಂಬರ್)‌ ಅವಧಿಯಲ್ಲಿ ಭಾರತವು 336 ಲಕ್ಷ ಟನ್‌ ಸಕ್ಕರೆಯನ್ನು ಉತ್ಪಾದಿಸುವ ಸಾಧ್ಯತೆ ಇದೆ. ಸುಮಾರು 50 ಲಕ್ಷ ಟನ್‌ ಎಥೆನಾಲ್‌ ತಯಾರಿಕೆಗೆ ಬಳಕೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಒಟ್ಟು 386 ಲಕ್ಷ ಟನ್‌ ಉತ್ಪಾದನೆಯಾಗುವ ಸಾಧ್ಯತೆ ಇದೆ.

ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಈ ವರ್ಷ ನಿರೀಕ್ಷೆಗಿಂತ ಕಡಿಮೆ ಸಕ್ಕರೆ ಉತ್ಪಾದನೆ ನಿರೀಕ್ಷಿಸಲಾಗಿದೆ. ಹೀಗಿದ್ದರೂ ತಮಿಳುನಾಡಿನಲ್ಲಿ ಉತ್ಪಾದನೆ ಹೆಚ್ಚಳವನ್ನು ನಿರೀಕ್ಷಿಸಲಾಗಿದೆ. ಆದ್ದರಿಂದ ಒಟ್ಟಾರೆ ಸಕ್ಕರೆ ಉತ್ಪಾದನೆ 2021-22ಕ್ಕಿಂತ 3% ಇಳಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.

Exit mobile version