ನವ ದೆಹಲಿ: ಭಾರತವು ಚೀನಾ ಮೂಲದ ೮೦ ವಿದೇಶಿ ನೇರ ಬಂಡವಾಳ ಹೂಡಿಕೆ ಯೋಜನೆಗಳಿಗೆ (FDI) ಅನುಮೋದಿಸಿದೆ.
ಗಲ್ವಾನ್ ಕಣಿವೆಯಲ್ಲಿ ಸಂಘರ್ಷದ ಬಳಿಕ ಭಾರತವು ೨೦೨೦ರಲ್ಲಿ ಎಫ್‌ಡಿಐ ನಿಯಮಾವಳಿಗಳನ್ನು ಬದಲಿಸಿತ್ತು. ಭಾರತದ ಜತೆಗೆ ಗಡಿಯನ್ನು ಹಂಚಿಕೊಂಡಿರುವ ದೇಶಗಳಿಂದ ಬರುವ ವಿದೇಶಿ ನೇರ ಹೂಡಿಕೆಗಳ ಮೇಲೆ ಕೆಲ ನಿರ್ಬಂಧಗಳನ್ನು ವಿಧಿಸಿತ್ತು. ಅಂದರೆ ಗಡಿ ಹಂಚಿಕೊಂಡಿರುವ ದೇಶಗಳಿಂದ ಎಫ್‌ಡಿಐ ಪ್ರಸ್ತಾಪಗಳಿಗೆ ಭದ್ರತೆಗೆ ಸಂಬಂಧಿಸಿ ಕ್ಲಿಯರೆನ್ಸ್ ಕಡ್ಡಾಯ. ಸರ್ಕಾರದ ಪೂರ್ವಾನುಮತಿಯೂ ಅಗತ್ಯ. ಇದರಿಂದಾಗಿ ಚೀನಾ ಮೂಲದ ಎಫ್‌ಡಿಐ ಮೇಲೆ ನಿಯಂತ್ರಣ ಸಾಧ್ಯವಾಗಿತ್ತು.
ಇಷ್ಟಾದರೂ ಚೀನಾದಿಂದ ಭಾರತಕ್ಕೆ ಎಫ್‌ಡಿಐ ಪ್ರಸ್ತಾಪಗಳು ಮುಂದುವರಿದಿತ್ತು. ಅಲ್ಲಿಂದ ಇಲ್ಲಿಯವರೆಗೆ ೩೮೨ ಪ್ರಸ್ತಾಪಗಳು ಬಂದಿವೆ. ಇದೀಗ ೮೦ ಪ್ರಸ್ತಾಪಗಳನ್ನು ಅಂಗೀಕರಿಸಲಾಗಿದೆ. ಒಟ್ಟು ಎಷ್ಟು ಪ್ರಸ್ತಾಪಗಳನ್ನು ತಿರಸ್ಕರಿಸಲಾಗಿದೆ ಎಂಬುದು ತಿಳಿದುಬಂದಿಲ್ಲ.