ಮುಂಬಯಿ: ಭಾರತದ ಬ್ಯಾಂಕ್‌ಗಳಲ್ಲಿನ ವಸೂಲಾಗದ ಸಾಲದ ಪ್ರಮಾಣ (non-performing assets) 2023-24ರ ಅಂತ್ಯಕ್ಕೆ 3.8%ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಕ್ರಿಸಿಲ್ (Crisil) ತಿಳಿಸಿದೆ. 2022-23ರ ಸಾಲಿನಲ್ಲಿ ಎನ್‌ಪಿಎ 4.2%ಕ್ಕೆ ಇಳಿಕೆಯಾಗಿತ್ತು. 2021-22ರಲ್ಲಿ 5.9% ಇತ್ತು. ಕಾರ್ಪೊರೇಟ್ ವಲಯದ ಲೋನ್ ಬುಕ್‌ಗಳಲ್ಲಿ ಗಣನೀಯ ಸುಧಾರಣೆಯಾಗಿರುವುದು ಇದಕ್ಕೆ ಕಾರಣ. ಈ ವಿಭಾಗದಲ್ಲಿ ಎನ್‌ಪಿಎ 2%ಕ್ಕಿಂತ ಕಡಿಮೆಯಾಗಿದೆ ಎಂದು ಕ್ರಿಸಿಲ್ ವರದಿ ತಿಳಿಸಿದೆ.
ಕಾರ್ಪೊರೇಟ್ ವಲಯದ ಕಂಪನಿಗಳು ಸಾಲದ ಮರು ಪಾವತಿಯಲ್ಲೂ ಗಣನೀಯ ಸುಧಾರಣೆಯನ್ನು ದಾಖಲಿಸಿವೆ. ಬ್ಯಾಂಕ್‌ಗಳೂ ಸಾಕಷ್ಟು ಮುನ್ನೆಚ್ಚರ ವಹಿಸಿ ಸಾಲ ವಿತರಿಸುತ್ತಿವೆ ಎಂದು ಕ್ರಿಸಿಲ್ ತಿಳಿಸಿದೆ.
ಬ್ಯಾಂಕಿಂಗ್ ವಲಯದಲ್ಲಿ ರಿಟೇಲ್ ಸಾಲಗಳಿಗೆ 26% ಎಕ್ಸ್‌ಪೋಶರ್ ಇದೆ. ಇದರದಲ್ಲಿ ಅರ್ಧಪಾಲು ಗೃಹ ಸಾಲ ಹಾಗೂ ನಾಲ್ಕನೇ ಒಂದರಷ್ಟು ಪಾಲು ವಾಹನ ಸಾಲವಾಗಿದೆ. ಬ್ಯಾಂಕ್‌ಗಳ ರಿಸ್ಕ್ ಮ್ಯಾನೇಜ್‌ಮೆಂಟ್‌ನಲ್ಲೂ ಸುಧಾರಣೆಯಾಗಿದೆ ಎಂದು ಏಜೆನ್ಸಿ ತಿಳಿಸಿದೆ.
ಬ್ಯಾಂಕಿಂಗ್ ವಲಯದಲ್ಲಿ 2023-24ರ ಸಾಲಿನಲ್ಲಿ ಸಾಲದ ಬೆಳವಣಿಗೆ 15% ರ ಮಟ್ಟದಲ್ಲಿತ್ತು. ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲೂ ಸ್ವತ್ತಿನ ಗುಣಮಟ್ಟದ ಕುರಿತಾಗಿ ಇದ್ದ ಕಳವಳಗಳು ನಿವಾರಣೆಯಾಗುತ್ತಿದೆ. ಎನ್‌ಬಿಎಫ್‌ಸಿಗಳ ನಿರ್ವಹಣೆಯಲ್ಲಿರುವ ಆಸ್ತಿಗಳ ಮೌಲ್ಯದಲ್ಲಿ 13-14% ಏರಿಕೆಯಾಗಿದ್ದು, 34 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.