ನವ ದೆಹಲಿ: ಹೊಸ ವರ್ಷ 2023ರ ಜನವರಿ 1 ರಿಂದ ಎನ್‌ಪಿಎಸ್‌ನ ಭಾಗಶಃ ಹಿಂತೆಗೆತಕ್ಕೆ ಸಂಬಂಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ (ಚಂದಾದಾರರು) ನಿಯಮಾವಳಿಗಳಲ್ಲಿ (NPS Rule) ಬದಲಾವಣೆಯಾಗಲಿದೆ.
ಕೋವಿಡ್-19 ಬಿಕ್ಕಟ್ಟಿನ ಸಂದರ್ಭ ಎನ್‌ಪಿಎಸ್ ಚಂದಾದಾರರಿಗೆ ಆನ್‌ಲೈನ್‌ನಲ್ಲಿ ಸ್ವಯಂ ಘೋಷಣೆಯ (self declaration) ಮೂಲಕ ಭಾಗಶಃ ಹಿಂತೆಗೆತಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಜನವರಿ 1ರಿಂದ ಈ ಸೌಲಭ್ಯವು ಸರ್ಕಾರಿ ವಲಯದ ಚಂದಾದಾರರಿಗೆ ಲಭ್ಯವಿರುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ, ಕೇಂದ್ರೀಯ ಸ್ವಾಯತ್ತ ಮಂಡಳಿಗಳು ಸೇರಿವೆ.
ಕೋವಿಡ್ ಬಿಕ್ಕಟ್ಟಿನ ಸಂದರ್ಭ ಲಾಕ್ ಡೌನ್ ಮತ್ತಿತರ ನಿರ್ಬಂಧಗಳಿದ್ದುದರಿಂದ ಈ ಸೌಲಭ್ಯ ಒದಗಿಸಲಾಗಿತ್ತು ಎಂದು ಪಿಎಫ್‌ಆರ್‌ಡಿಎ ತಿಳಿಸಿದೆ.