ಮುಂಬಯಿ: ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್ (National stock exchange) 4 ಅದಾನಿ ಕಂಪನಿಗಳ ಷೇರುಗಳನ್ನು ನಿಫ್ಟಿ ಅಲ್ಫಾ 50 ಇಂಡೆಕ್ಸ್‌ನಿಂದ (Nifty alpha 50 Index) ಹೊರಗಿಟ್ಟಿದೆ. ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಟ್ರಾನ್ಸ್‌ಮಿಶನ್, ಅದಾನಿ ಟೋಟಲ್ ಗ್ಯಾಸ್ ಷೇರುಗಳನ್ನು ನಿಫ್ಟಿ ಅಲ್ಫಾ ಇಂಡೆಕ್ಸ್ ನಿಂದ ಹೊರಗಿಡಲಾಗಿದೆ.
ಇದಲ್ಲದೆ ಅದಾನಿ ಪೋರ್ಟ್ಸ್ ಷೇರನ್ನು ನಿಫ್ಟಿ 100 ಅಲ್ಫಾ 30 ಇಂಡೆಕ್ಸ್‌ನಿಂದ ಹೊರಗಿಡಲಾಗಿದೆ. ಅದಾನಿ ಷೇರುಗಳು ಮಾತ್ರವಲ್ಲದೆ, ಆದಿತ್ಯ ಬಿರ್ಲಾ ಫ್ಯಾಷನ್, ಏಂಜೆಲ್ ವನ್, ಗುಜರಾತ್ ನರ್ಮದಾ ವ್ಯಾಲಿ ಫರ್ಟಿಲೈಸರ್ಸ್, ಪೇಜ್ ಇಂಡಸ್ಟ್ರೀಸ್ ಷೇರುಗಳನ್ನು ಕೂಡ ನಿಫ್ಟಿ ಅಲ್ಫಾ 50 ಇಂಡೆಕ್ಸ್‌ನಿಂದ ಹೊರಗಿಡಲಾಗಿದೆ. ಮಾರುಕಟ್ಟೆಯಲ್ಲಿ ಷೇರುಗಳ ಪರ್‌ಫಾರ್ಮೆನ್ಸ್ ಪರಿಗಣಿಸಿ ಈ ಇಂಡೆಕ್ಸ್ ಅನ್ನು ರಚಿಸಲಾಗುತ್ತದೆ.