Site icon Vistara News

Oil demand | ಅಕ್ಟೋಬರ್‌ನಲ್ಲಿ ಪೆಟ್ರೋಲ್-ಡೀಸೆಲ್‌ಗೆ ಬೇಡಿಕೆ 4 ತಿಂಗಳಿನಲ್ಲೇ ಗರಿಷ್ಠ

Petrol rate hike in Pakistan by rs 10 per liter

ನವ ದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ಮಾರಾಟ ಕಳೆದ ಅಕ್ಟೋಬರ್‌ನಲ್ಲಿ 4 ತಿಂಗಳಿನಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. (Oil demand) ಹಬ್ಬದ ಸಂದರ್ಭದಲ್ಲಿ ಬೇಡಿಕೆ ಚೇತರಿಸಿದೆ.

ಅಕ್ಟೋಬರ್‌ನಲ್ಲಿ ಪೆಟ್ರೋಲ್‌ ಮಾರಾಟದಲ್ಲಿ 12.1% ಹೆಚ್ಚಳವಾಗಿದ್ದು, 27.8 ಲಕ್ಷ ಟನ್‌ ಮಾರಾಟವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 24.8 ಲಕ್ಷ ಟನ್‌ ವಿಕ್ರಯವಾಗಿತ್ತು. ಕೋವಿಡ್‌ ಸಂದರ್ಭದ 2020ರ ಅಕ್ಟೋಬರ್‌ಗೆ ಹೋಲಿಸಿದರೆ 21.4% ಹೆಚ್ಚಳವಾಗಿದೆ.

ಕಳೆದ ಜೂನ್‌ನಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ಮಾರಾಟ ಉನ್ನತ ಮಟ್ಟದಲ್ಲಿ ಇದೆ. ಮುಂಗಾರು ವಿಸ್ತರಣೆಯ ಪರಿಣಾಮ ದೇಶದ ನಾನಾ ರಾಜ್ಯಗಳಲ್ಲಿ ಕೃಷಿ ಚಟುವಟಿಕೆಗಳು ಕೂಡ ಮುಂದುವರಿದಿವೆ. ಹೀಗಾಗಿ ಡೀಸೆಲ್‌ಗೆ ಬೇಡಿಕೆ ವೃದ್ಧಿಸಿದೆ.

ವೈಮಾನಿಕ ಇಂಧನ ಎಟಿಎಫ್‌ಗೆ ಕೂಡ ಅಕ್ಟೋಬರ್‌ನಲ್ಲಿ ಬೇಡಿಕೆಯಲ್ಲಿ 26.4% ಹೆಚ್ಚಳವಾಗಿದೆ. ಹೀಗಿದ್ದರೂ, ಎಲ್ಪಿಜಿ ಮಾರಾಟದಲ್ಲಿ 1.27% ಇಳಿಕೆಯಾಗಿದೆ. 24.4 ಲಕ್ಷ ಟನ್‌ ಮಾರಾಟವಾಗಿದೆ.

Exit mobile version