Site icon Vistara News

5 day work : ಬ್ಯಾಂಕ್ ಉದ್ಯೋಗಿಗಳಿಗೆ ವಾರಕ್ಕೆ 2 ದಿನಗಳ ರಜೆ ಸೌಲಭ್ಯ ಪ್ರಸ್ತಾಪ

bank holiday

ನವ ದೆಹಲಿ: ಬ್ಯಾಂಕ್‌ ಉದ್ಯೋಗಿಗಳು ಶೀಘ್ರದಲ್ಲಿಯೇ ವಾರಕ್ಕೆ 2 ದಿನಗಳ ರಜೆ ಸೌಲಭ್ಯ ಪಡೆಯುವ ನಿರೀಕ್ಷೆ ಇದೆ. (5 day work) ಈ ಕುರಿತ ಪ್ರಸ್ತಾಪವನ್ನು ಇಂಡಿಯನ್‌ ಬ್ಯಾಂಕ್ಸ್‌ ಅಸೋಸಿಯೇಶನ್‌ (IBA) ಪರಿಶೀಲಿಸುತ್ತಿದೆ. ಹೀಗಿದ್ದರೂ, ವಾರದ 5 ದಿನಗಳಲ್ಲಿ ಕೆಲಸದ ಅವಧಿಯಲ್ಲಿ 50 ನಿಮಿಷ ಹೆಚ್ಚಳವಾಗಲಿದೆ.

ಐಬಿಎ ಮತ್ತು ಯುನೈಟೆಡ್‌ ಫೋರಮ್‌ ಆಫ್‌ ಬ್ಯಾಂಕ್‌ ಎಂಪ್ಲಾಯೀಸ್‌ (United forum of bank employees) ನಡುವೆ ಈ ಬಗ್ಗೆ ಮಾತುಕತೆ ನಡೆಯುತ್ತಿದೆ.

ಸರ್ಕಾರ ಎಲ್ಲ ಶನಿವಾರ ಮತ್ತು ಭಾನುವಾರಗಳಂದು ಬ್ಯಾಂಕ್‌ ಉದ್ಯೋಗಿಗಳಿಗೆ ರಜೆ ನೀಡಬೇಕು ಎಂದು ಆಲ್‌ ಇಂಡಿಯಾ ಬ್ಯಾಂಕ್‌ ಆಫೀಸರ್ಸ್‌ ಅಸೋಸಿಯೇಶನ್‌ ಪ್ರಧಾನ ಕಾರ್ಯದರ್ಶಿ ಎಸ್‌. ನಾಗರಾಜನ್‌ ಒತ್ತಾಯಿಸಿದ್ದಾರೆ. ಈಗ ಬ್ಯಾಂಕ್‌ ಉದ್ಯೋಗಿಗಳಿಗೆ ಪರ್ಯಾಯ ಶನಿವಾರಗಳಂದು ರಜೆ ಪಡೆಯುತ್ತಿದ್ದಾರೆ.

Exit mobile version