Site icon Vistara News

Infosys | ಟೆಕ್ಕಿಗಳಿಗೆ ಕಚೇರಿ ಕೆಲಸ ಕಡ್ಡಾಯವಲ್ಲ: ಇನ್ಫೋಸಿಸ್‌ ಸಿಇಒ ಸಲೀಲ್‌ ಪರೇಖ್

infosys

ಬೆಂಗಳೂರು: ಐಟಿ ದಿಗ್ಗಜ ಇನ್ಫೋಸಿಸ್‌ (Infosys) ತನ್ನ ಟೆಕ್ಕಿಗಳಿಗೆ ಕಚೇರಿಗೆ ಬರಲು ತಿಳಿಸಿದ್ದರೂ, ಅದು ಕಡ್ಡಾಯವಲ್ಲ. ಮನೆಯಿಂದ ಕೆಲಸ ಮಾಡುವ ಪದ್ಧತಿ ಕೂಡ ಮುಂದುವರಿಯಲಿದೆ. ಉದ್ಯೋಗಿಗಳ ಹಿತಾಸಕ್ತಿಗೆ ತಕ್ಕಂತೆ ನಿರ್ಧರಿಸಲಾಗುವುದು ಎಂದು ತಿಳಿಸಿದೆ.

ಕಂಪನಿಯು ಅಗತ್ಯಕ್ಕೆ ತಕ್ಕಂತೆ ಹೊಂದಾಣಿಕೆಯ ನೀತಿಯನ್ನು ಅನುಸರಿಸುತ್ತಿದ್ದು, ಕಚೇರಿಗೆ ಹಾಜರಾತಿಯನ್ನು ಕಡ್ಡಾಯಗೊಳಿಸಿಲ್ಲ ಎಂದು ಇನ್ಫೋಸಿಸ್‌ ಸಿಇಒ ಸಲೀಲ್‌ ಪರೇಖ್‌ ತಿಳಿಸಿದ್ದಾರೆ.

ಭಾರತದಲ್ಲಿರುವ ಕಚೇರಿಗಳಿಗೆ 45,000 ಉದ್ಯೋಗಿಗಳು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲ ತಿಂಗಳಿನ ಹಿಂದೆ ಅಲ್ಪ ಸಂಖ್ಯೆಯಲ್ಲಿ ಟೆಕ್ಕಿಗಳು ಬರುತ್ತಿದ್ದರು. ಈಗ ಗಣನೀಯ ಹೆಚ್ಚಳ ಕಂಡು ಬಂದಿದೆ. ಹೀಗಿದ್ದರೂ, ಇಂತಿಷ್ಟು ದಿನ ಕಡ್ಡಾಯವಾಗಿ ಕಚೇರಿಗೆ ಬರಬೇಕು ಎಂಬ ನಿಯಮ ಇಲ್ಲ ಎಂದು ಪರೇಖ್‌ ವಿವರಿಸಿದ್ದಾರೆ.

ನಾವು ಉದ್ಯೋಗಿಗಳಿಗೆ ಬೇಕಿರುವ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ. ಹೀಗಾಗಿ ಕ್ರಮೇಣ ಹೆಚ್ಚಿನ ಸಂಖ್ಯೆಯಲ್ಲಿ ಟೆಕ್ಕಿಗಳು ಕಚೇರಿಗೆ ಬರುತ್ತಿದ್ದಾರೆ. ಉದ್ಯೋಗಿಗಳ ಹಿತಾಸಕ್ತಿಯನ್ನೂ ಗಮನದಲ್ಲಿ ಇಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದಿದ್ದಾರೆ/

ಇನ್ಫೋಸಿಸ್‌ ಈಗಾಗಲೇ ಪ್ರಸಕ್ತ ಸಾಲಿನ ಮೊದಲ ಆರು ತಿಂಗಳಿನಲ್ಲಿ 40,000 ಹೊಸಬರನ್ನು ನೇಮಕ ಮಾಡಿಕೊಂಡಿದೆ. ಹೆಚ್ಚುವರಿ 10,000 ಮಂದಿಯನ್ನು ನೇಮಕ ಮಾಡಿಕೊಳ್ಳುವ ನಿರೀಕ್ಷೆ ಇದೆ.

Exit mobile version