ನವ ದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಮಾದರಿಯ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 86 ಡಾಲರ್‌ಗೆ ಇಳಿಕೆಯಾಗಿದೆ. ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೇಟ್ ಮಾದರಿಯ (Oil @86 Dollar ) ಕಚ್ಚಾ ತೈಲ ದರ ಬ್ಯಾರೆಲ್‌ಗೆ 80 ಡಾಲರ್‌ಗೆ ಶುಕ್ರವಾರ ಇಳಿಕೆಯಾಗಿದೆ.
ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಏರಿಸುವ ಮೂಲಕ ಹಲವು ಸಂದೇಶಗಳನ್ನು ರವಾನಿಸಿದೆ. ಹಣದುಬ್ಬರವನ್ನು ನಿಯಂತ್ರಿಸಲು ಆದ್ಯತೆ ನೀಡುವುದಾಗಿ ತಿಳಿಸಿದೆ. ಬ್ರಿಟನ್, ನಾರ್ವೆ, ದಕ್ಷಿಣ ಆಫ್ರಿಕಾದಲ್ಲೂ ಬಡ್ಡಿ ದರ ಏರಿಸಲಾಗಿದೆ.
ಅಮೆರಿಕದ ಆರ್ಥಿಕತೆ ಮಂದಗತಿಗೆ ತಿರುಗುವ ಅಪಾಯ ಉಂಟಾಗಿದ್ದು, ತೈಲ ದರ ತನ್ನ ಉಬ್ಬರದ ಸ್ಥಿತಿಯಿಂದ ಕೆಳಗಿಳಿದಿದೆ. ಅಂತಾರಾಷ್ಟ್ರೀಯ ದರ ಇಳಿಕೆಯ ಹಾದಿಯಲ್ಲಿ ಇರುವುದರಿಂದ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಗೆ ಒತ್ತಡ ಸೃಷ್ಟಿಯಾಗಿದೆ.