Site icon Vistara News

Ola Electric | ತಮಿಳುನಾಡಿನಲ್ಲಿ ಎಲೆಕ್ಟ್ರಿಕ್‌ ವಾಹನ ಕಾರ್ಖಾನೆ ಸ್ಥಾಪನೆಗೆ ಓಲಾದಿಂದ 1,500 ಎಕರೆ ಭೂಮಿ ಖರೀದಿ: ವರದಿ

ola

ಚೆನ್ನೈ: ತಮಿಳುನಾಡಿನಲ್ಲಿ ಬೃಹತ್ ಎಲೆಕ್ಟ್ರಿಕ್‌ ವಾಹನ ಕಾರ್ಖಾನೆ ಸ್ಥಾಪಿಸಲು ಓಲಾ ಎಲೆಕ್ಟ್ರಿಕ್ಸ್ (Ola Electric) 1,500 ಎಕರೆ ಭೂಮಿಯನ್ನು ಖರೀದಿಸಿದೆ ಎಂದು ವರದಿಯಾಗಿದೆ.‌

ಭೂಮಿ ಖರೀದಿಸಲು ತಮಿಳುನಾಡು ಸರ್ಕಾರ ಅನುಮೋದಿಸಿದೆ. ಈ ಕಾರ್ಖಾನೆ ಅಸ್ತಿತ್ವಕ್ಕೆ ಬಂದರೆ ಭಾರತೀಯ ಆಟೊಮೊಬೈಲ್‌ ಇಂಡಸ್ಟ್ರಿಯಲ್ಲಿಯೇ ದೊಡ್ಡ ಡೀಲ್‌ ಆಗುವ ಸಾಧ್ಯತೆ ಇದೆ.

ಈ ಬಗ್ಗೆ ಓಲಾ ಸಿಇಒ ಭವೀಶ್‌ ಅಗ್ರವಾಲ್‌ ಶೀಘ್ರದಲ್ಲಿಯೇ ಘೋಷಣೆ ಹೊರಡಿಸುವ ನಿರೀಕ್ಷೆ ಇದೆ. ಈ ಘಟಕದಲ್ಲಿ ಓಲಾ ಎಲೆಕ್ಟ್ರಿಕ್ಸ್‌ ತನ್ನ ಇವಿ ಉತ್ಪಾದನೆ, ಬಿಡಿಭಾಗಗಳ ತಯಾರಿಕೆ, ಬ್ಯಾಟರಿಗಳ ಉತ್ಪಾದನೆ ಮಾಡುವ ಸಾಧ್ಯತೆ ಇದೆ.

ಓಲಾ ಈಗಾಗಲೇ ಕೃಷ್ಣಗಿರಿ ಜಿಲ್ಲೆಯಲ್ಲಿ 500 ಎಕರೆ ಜಾಗವನ್ನು ಹೊಂದಿದ್ದು, ಅದಕ್ಕೆ ಹೆಚ್ಚುವರಿಯಾಗಿ 1,500 ಎಕರೆ ಪ್ರದೇಶವನ್ನು ಖರೀದಿಸಲಿದೆ ಎನ್ನಲಾಗಿದೆ. ಓಲಾ ಭವಿಷ್ಯದಲ್ಲಿ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಮಾತ್ರವಲ್ಲದೆ ಕಾರುಗಳನ್ನೂ ಉತ್ಪಾದಿಸುವ ನಿರೀಕ್ಷೆ ಇದರಿಂದಾಗಿ ಉಂಟಾಗಿದೆ.

Exit mobile version