ನವ ದೆಹಲಿ: ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಈರುಳ್ಳಿಯ ದರ 40 ರೂ.ಗೆ ಏರಿಕೆಯಾಗಿದೆ. ಇದು ಪ್ರತಿ ಕೆ.ಜಿಗೆ 50 ರೂ.ಗೆ ಹೆಚ್ಚಳವಾಗುವ (Onion price) ನಿರೀಕ್ಷೆ ಇದೆ.
ಅಕ್ಟೋಬರ್ ಆರಂಭದಲ್ಲಿ ಈರುಳ್ಳಿ ದರ ಕೆ.ಜಿಗೆ 15 ರೂ. ಮತ್ತು 25 ರೂ. ಶ್ರೇಣಿಯಲ್ಲಿ ಇತ್ತು. ಆದರೆ ಕೆಲ ದಿನಗಳಿಂದೀಚೆಗೆ ದರದಲ್ಲಿ ಏರಿಕೆಯಾಗಿದೆ. ರಾಬಿ ಅವಧಿಯ ಈರುಳ್ಳಿ ಮಾರುಕಟ್ಟೆಗೆ ಬಂದ ಬಳಿಕ ದರ ಇಳಿಕೆಯಾಗುವ ನಿರೀಕ್ಷೆ ಇದೆ. ಹೊಸ ಬೆಳೆ ನವೆಂಬರ್ ಮೊದಲ ವಾರದಲ್ಲಿ ಮಾರುಕಟ್ಟೆಗೆ ಬರಲಿದೆ. ಕೆಲ ವರದಿಗಳ ಪ್ರಕಾರ ರಾಬಿ ಅವಧಿಯ ಬೆಳೆ ಜನವರಿ-ಫೆಬ್ರವರಿಯಲ್ಲಿ ಬರುವ ತನಕ ದರ ಸ್ಥಿರತೆಯನ್ನು ಕಾಣುವ ಸಾಧ್ಯತೆ ಇಲ್ಲ.
ಕಳೆದ ವಾರ ಅಮುಲ್ ಮತ್ತು ಮದರ್ ಡೈರಿ ಬ್ರಾಂಡ್‌ನ ಹಾಲಿನ ದರ ಏರಿಕೆಯಾಗಿತ್ತು. ಇದರ ಬೆನ್ನಲ್ಲೇ ಈರುಳ್ಳಿಯ ದರದಲ್ಲಿ ಹೆಚ್ಚಳ ಉಂಟಾಗಿದೆ.